RCB Vs PBKS: ಆರ್‌ಸಿಬಿ ಸಂಖ್ಯಾಶಾಸ್ತ್ರ 3+6+2+2+5=18; ಏನಿದರ ನಂಟು?

IPL 2025 RCB Vs PBKS: ಐಪಿಎಲ್‌ 2025 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೇ ಗೆದ್ದು ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶ ಮಾಡಿದೆ. ಫೈನಲ್‌ ಮ್ಯಾಚ್‌ ಅನ್ನು ಪಂಜಾಬ್‌ ಕಿಂಗ್ಸ್‌ ವಿರುದ್ಧ ಮಂಗಳವಾರ (ಜೂನ್ 3) ಅಹಮದಬಾದ್‌ನ ನರೆಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನವೇ ಗೆಲುವಿನ ತಂಡದ ಸಂಖ್ಯಾಶಾಸ್ತ್ರವೊಂದು ಭಾರೀ ವೈರಲ್‌ ಆಗುತ್ತಿದೆ. ಅದೇನು ಅಂತೀರಾ? ಇಲ್ಲಿದೆ ನೋಡಿ ಉತ್ತಮ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೂ ಆಡಿರುವ 17 ಸೀಸನ್‌ಗಳಿಂದ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ ಈ ಬಾರಿ 18ನೇ ಸೀಸನ್‌ನಲ್ಲಿ ಟ್ರೋಫಿ ಎತ್ತುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಯಾಕಂದ್ರೆ, ಈ ಆವೃತ್ತಿ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದು, ಕೊನೆಗೂ ಫೈನಲ್‌ ತಲುಪಿದೆ.

RCB Vs PBKS Royal Challengers Bengaluru Numerology 3 6 2 2 5 Goes Huge Viral

ಜೂನ್‌ 1ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್‌ ಭರ್ಜರಿಯಾಗಿ ಗೆದ್ದು ಬೀಗಿ ಫೈನಲ್‌ ಪ್ರವೇಶಿದ್ದು, ಆರ್‌ಸಿಬಿ ಜೊತೆ ನಾಳೆ ಫೈನಲ್‌ ಪಂದ್ಯವನ್ನಾಡಲಿದೆ. ಇದೀಗ ಕರ್ನಾಟಕದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬರಲೆಂದು ಹಿರಿಯ ರಾಜಕಾರಣಿಗಳು, ಚಿತ್ರರಂಗದ ನಟ, ನಟಿಯರು ಹಾಗೂ ಅಭಿಮಾನಿಗಳ ಬಳಗದವರು ಹಾರೈಸುತ್ತಿದ್ದಾರೆ. ಈ ನಡುವೆಯೇ ಆರ್‌ಸಿಬಿ ಪರವಾದ ಸಂಖ್ಯಾಶಾಸ್ತ್ರವೊಂದು ಭಾರೀ ವೈರಲ್‌ ಆಗುತ್ತಿದೆ. ಅಲ್ಲದೆ, ಈಗಾಗಲೇ ಹಲವು ಕ್ರಿಕೆಟ್‌ ದಿಗ್ಗಜರು ಹೇಳಿರುವ ಪ್ರಕಾರ ನಿಜವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.

ಸಂಖ್ಯಾಶಾಸ್ತ್ರ ಲಾಜಿಕ್‌: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ ಫೈನಲ್‌ ಪಂದ್ಯ ಆಡುವ ಒಂದು ದಿನದ ಮುಂಚೆ ಈ ಸಂಖ್ಯೆಗಳು ಭಾರೀ ವೈರಲ್‌ ಆಗುತ್ತಿವೆ. ಇವುಗಳು ಒಂದಕ್ಕೊಂದು ಸಹ ಒಮದಾಣಿಕೆಯೂ ಆಗುತ್ತಿವೆ. ವಿರಾಟ್‌ ಕೊಹ್ಲಿ ಜಿರ್ಸಿ ನಂಬರ್, ಸೀಸನ್‌ 18ಗೆ 3-6-2025 ಎಂಬ ಸಂಖ್ಯಾಶಾಸ್ತ್ರ ಹೋಲಿಕೆಯಾಗುತ್ತಿದೆ. ಇದರ ಅರ್ಥ 3+6+2+2+5=18 ಆಗಿದೆ. ಅದಕ್ಕೆ 18ರ ನಂಟು ಆರ್‌ಸಿಬಿಗೆ ಇದ್ದು, ಈ ಬಾರಿ ಟ್ರೋಫಿ ಎತ್ತುವುದು ಗ್ಯಾರಂಟಿ ಎನ್ನುವಂತಾಗಿದೆ. ಇದನ್ನು ಲೆಕ್ಕಾಚಾರ ಹಾಕಿದ್ರೂ ಬೆಂಗಳೂರು ತಂಡದ ಪರವಾಗಿಯೇ ಬರುತ್ತಿದೆ.

ಸಂಖ್ಯಾಶಾಸ್ತ್ರ ಲಾಜಿಕ್‌

* ವಿರಾಟ್‌ ಕೊಹ್ಲಿ ಜೆರ್ಸಿ ನಂಬರ್: 18
* ಐಪಿಎಲ್‌ ಸೀಸನ್‌: 18
* ಐಪಿಎಲ್‌ ಫೈನಲ್‌ ಪಂದ್ಯ: 3-6-2025

ಆರ್‌ಸಿಬಿ ಜೊತೆ ಪಂಜಾಬ್‌ ಕಿಂಗ್ಸ್‌ ಫೈನಲ್‌: ಕ್ವಾಲಿಫೈಯರ್-2 ಪಂದ್ಯ ಅಹಮದಬಾದ್‌ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 203 ರನ್‌ ಕಲೆಹಾಕಿ 204 ರನ್‌ಗಳನ್ನು ಗುರಿ ನೀಡಿತು.

ಈ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 107 ರನ್‌ಗಳನ್ನು ಕಲೆಹಾಕಿ ಭರ್ಜರಿಯಾಗಿ ಗೆದ್ದು ಫೈನಲ್‌ ಪ್ರವೇಶಿಸಿತು. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡವನ್ನು ಟೂರ್ನಿಯಿಂದಲೇ ಹೊರತಳ್ಳಿತು. ಪಂಜಾಬ್‌ ಕಿಂಗ್ಸ್‌ ಗೆಲುವಿಗೆ ಪ್ರಮುಖ ಕಾರಣ ನಾಯಕ ಶ್ರೇಯಸ್‌ ಅಯ್ಯರ್ ಬ್ಯಾಟ್‌ನಿಂದ ಬಂದಂತಹ ಬೃಹತ್‌ ರನ್‌ಗಳೇ ಕಾರಣ ಅಂದ್ರೆ ತಪ್ಪಾಗಲಾರದು. ಇನ್ನೂ ಜೂನ್‌ 3ರಂದು ಆರ್‌ಸಿಬಿ ಜೊತೆ ಪಂಜಾಬ್‌ ಕಿಂಗ್ಸ್‌ ಫೈನಲ್‌ ಪಂದ್ಯ ಆಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+