RCB vs PBKS: ತವರಿನ ಸವಾಲು ಗೆಲ್ಲುತ್ತಾ ಆರ್‌ಸಿಬಿ?

ಐಪಿಎಲ್ 2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂಥರಾ ಸಮಸ್ಯೆಗೆ ಸಿಲುಕಿದೆ. ಮನೇಲಿ ಇಲಿ, ಬೀದಿಲಿ ಹುಲಿ ಎನ್ನುವಂತಾಗಿದೆ ಈಗಿನ ಆರ್‌ಸಿಬಿ ಪರಿಸ್ಥಿತಿ. ಹೊರಗಡೆ ಬಲಿಷ್ಠ ತಂಡಗಳನ್ನೇ ಬಗ್ಗು ಬಡಿಯುತ್ತಿರುವ ಆರ್ ಸಿಬಿ ತವರಿನಲ್ಲಿ ಮಾತ್ರ ಗೆಲುವಿನ ಫಾರ್ಮುಲಾ ಕಂಡುಕೊಳ್ಳುವಲ್ಲಿ ವಿಫಲವಾಗಿದೆ.

ತವರಿನ ಹೊರಗೆ 4 ಪಂದ್ಯಗಳನ್ನು ಗೆದ್ದಿರುವ ರಜತ್ ಪಟಿದಾರ್ ಪಡೆಗೆ ಈ ಆವೃತ್ತಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನೂ ಗೆಲುವು ದಕ್ಕಿಲ್ಲ. ತವರಿನ ಅಭಿಮಾನಿಗಳ ಮುಂದೆ ಮೊದಲ ಗೆಲುವಿಗಾಗಿ ಆರ್ ಸಿಬಿ ಇನ್ನೂ ಹುಡುಕಾಟ ನಡೆಸಿದೆ.

Rcb vs pbks match date playing xi chinnaswamy stadium pitch ipl 2025

ಭಾನುವಾರ ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

Take a Poll

ಬಲಿಷ್ಠ ಪಂಜಾಬ್ ಸವಾಲು

ರಾಜಸ್ಥಾನ ರಾಯಲ್ಸ್ ವಿರುದ್ಧ ಗೆದ್ದ ಬಳಿಕ ಆರ್ ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂದಿನ ಪಂದ್ಯ ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಏಪ್ರಿಲ್ 18ರಂದು ಶುಕ್ರವಾರ ಈ ಪಂದ್ಯ ನಡೆಯಲಿದ್ದು ಆರ್ ಸಿಬಿ ತವರಿನಲ್ಲಿ ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತ ಪಂಜಾಬ್ ಕಿಂಗ್ಸ್ ಮುಂದಿನ ಪಂದ್ಯದಲ್ಲಿ ಮಂಗಳವಾರ ಕೆಕೆಆರ್ ವಿರುದ್ಧ ಸೆಣೆಸಲಿದ್ದು, ಬಳಿಕ ಬೆಂಗಳೂರಿನಲ್ಲಿ ಆರ್ ಸಿಬಿ ತಂಡವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಆರ್ ಸಿಬಿ ವಿರುದ್ಧ ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಎರಡೂ ತಂಡಗಳು ಉತ್ತಮವಾಗಿ ಆಡುತ್ತಿದ್ದು ಮುಂದಿನ ಪಂದ್ಯದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಪಂಜಾಬ್ ಕಿಂಗ್ಸ್ ಬೌಲಿಂಗ್‌ನಲ್ಲಿ ಯಶ್ ಠಾಕೂರ್ ಬದಲಾಗಿ ಕನ್ನಡಿಗ ವೈಶಾಖ್ ವಿಜಯ್‌ಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಆರಂಭದಲ್ಲಿ ಬೌಲರ್ ಗಳಿಗೆ ನೆರವು ನೀಡುತ್ತದೆ. ಬಳಿಕ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ. ಆರ್ ಸಿಬಿ ಮೊದಲ ಎರಡೂ ಪಂದ್ಯಗಳಲ್ಲಿ ಟಾಸ್ ಸೋತಿದ್ದು ಕೂಡ ಸೋಲಿಗೆ ಒಂದು ಕಾರಣ, ಇಲ್ಲಿ ಚೇಸಿಂಗ್ ಮಾಡುವುದು ಸುಲಭವಾಗುವುದರಿಂದ ಟಾಸ್ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಆರ್ ಸಿಬಿ ಟಾಸ್ ಸೋತರೂ ಬೃಹತ್ ಮೊತ್ತ ಕಲೆ ಹಾಕಿದರೆ ನಮ್ಮ ಬೌಲರ್ ಗಳು ಅದನ್ನು ಡಿಫೆಂಡ್ ಮಾಡಬಹುದು.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಆರ್‌ಸಿಬಿ: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (‍ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ಯಶ್ ದಯಾಲ್.

ಪಂಬಾಜ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಲಾಕಿ ಫರ್ಗುಸನ್, ಯುಜ್ವೇಂದ್ರ ಚಾಹಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+