Get Updates
Get notified of breaking news, exclusive insights, and must-see stories!

RCB vs PBKS: ಪಂಜಾಬ್‌ ಕಿಂಗ್ಸ್ ವಿರುದ್ಧ ಫೈನಲ್‌ ಪಂದ್ಯಕ್ಕೆ ಆರ್‌ಸಿಬಿ ಪರ ಸ್ಪೊಟಕ ಬ್ಯಾಟರ್ ಕಮ್‌ ಬ್ಯಾಕ್‌

IPL 2025 RCB vs PBKS Final: ಐಪಿಎಲ್‌ 2025 ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್‌ ನಡುವೆ ಫೈನಲ್‌ ಪಂದ್ಯ ಆರಂಭ ಆಗಲಿದೆ. ಈ ನಡುವೆಯೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸ್ಫೋಟಕ ಬ್ಯಾಟರ್ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎನ್ನುವ ಶುಭಸುದ್ದಿಯೊಂದು ಲಭ್ಯವಾಗಿದೆ. ಹಾಗಾದ್ರೆ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್‌ ಆರಂಭದಿಂದಲೂ ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ವರೆಗೂ ಪ್ರವೇಶ ಮಾಡಿದೆ. ಈ ಮೂಲಕ ಟ್ರೋಫಿ ಎತ್ತುವ ಎಲ್ಲಾ ಭರವಸೆಯನ್ನು ಹುಟ್ಟುಹಾಕಿದ್ದು, ಇದರಿಂದ ಅಭಿಮಾನಿಗಳು ಸಂಭ್ರಾಮಾಚರಣೆ ಮಾಡಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇಂದಿನ ಆರ್‌ಸಿಬಿ ಹಾಗೂ ಪಂಜಾಬ್ ಫೈನಲ್‌ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

RCB Vs PBKS Final Match Star Batter Comeback for RCB

ಆರ್‌ಸಿಬಿಗೆ ಸ್ಫೋಟಕ ಬ್ಯಾಟರ್ ಕಮ್‌ ಬ್ಯಾಕ್‌: ಪಂಜಾಬ್‌ ಕಿಂಗ್ಸ್‌ ವಿರುದ್ಧದ ಫೈನಲ್‌ ಪಂದ್ಯಕ್ಕೆ ಆರ್‌ಸಿಬಿ ಪರ ಸ್ಫೋಟಕ ಬ್ಯಾಟರ್ ಮತ್ತೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಶುಭಸುದ್ದಿಯೊಂದು ಲಭ್ಯವಾಗಿದೆ. ಅವರು ಬೇರೆ ಯಾರೂ ಅಲ್ಲ.. ಏಪ್ರಿಲ್‌ 18ರಂದು ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದಲ್ಲಿ ಇದೇ ಪಂಜ್‌ಬ್‌ ಕಿಂಗ್ಸ್‌ ವಿರುದ್ಧ ಹೊಡಿಬಡಿ ಆಟ ಆಡಿ ಬೌಲರ್‌ಗಳಿಗೆ ಬೆವರಿಳಿಸಿದ್ದ ಟಿಮ್ ಡೇವಿಡ್. ಅಂದಿನ ಪಂದ್ಯದಲ್ಲಿ ಆರ್‌ಸಿಬಿ 50 ರನ್‌ಗಳಿಗೆ ಆಲ್‌ ಔಟ್‌ ಆಗಲಿದೆ ಎಂದು ಬಹುತೇಕ ಮಂದಿ ಅಂದುಕೊಂಡಿದ್ದರು.

ಆದರೆ, ಅಂದು ಟೀಮ್‌ ಡೆವಿಡ್‌ ಒಬ್ಬರೇ ತಂಡಕ್ಕೆ ಆಸರೆಯಾಗಿ ನಿಂತು 95 ರನ್‌ಗಳ ಗುರಿ ಮುಟ್ಟಿಸಿದ್ದರು. ಒಬ್ಬರೇ ಕೇವಲ 26 ಬಾಲ್‌ಗಳಲ್ಲಿ 5 ಬೌಂಡರಿ, 3 ಸಕ್ಸರ್‌ಗಳ ಸಹಿತ ಅರ್ಧ ಶತಕ ಸಿಡಿಸಿ ಮಿಂಚುವುದಲ್ಲದೇ ತಂಡದ ಮರ್ಯಾದೆಯನ್ನು ಕಾಪಾಡುವ ಕೆಲಸ ಮಾಡಿದ್ದರು. ಆದರೆ, ಅಂದು ಆರ್‌ಸಿಬಿ ಸೋಲನುಭವಿಸಿತ್ತು. ಪಂದ್ಯ ಸೋತರೂ ಪರ್ವಾಗಿಲ್ಲ, ಟೀಂಗೆ ಆಪದ್ಭಾಂದವ ಆಗಿದ್ದರು.

ಇನ್ನು ಇವರು ಗಾಯದ ಕಾರಣ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಮತ್ತೆ ಇಂದು ಅದೇ ಪಂಜಾಬ್‌ ವಿರುದ್ಧ ಅಬ್ಬರಿಸಲು ತಂಡಕ್ಕೆ ಕಮ್‌ ಬ್ಯಾಕ್‌ ಮಾಡುವ ಸಾಧ್ಯತೆಯಿದೆ. ಆಸ್ಟ್ರೇಲಿಯಾದ ಕ್ರಿಕೆಟಿಗನಾದ ಟೀಮ್‌ ಡೆವಿಡ್‌ ಗಾಯದಿಂದ ಚೇತರಿಸಿಕೊಂಡಿದ್ದು, ಪಂಜಾಬ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಆಡಲಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಹೆಚ್ಚಾದಂತಾಗಿದೆ.

Take a Poll

ಇದುವರೆಗೂ ಆಡಿರುವ 17 ಸೀಸನ್‌ಗಳಲ್ಲಿ ಆರ್‌ಸಿಬಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ ಆದರೆ, ಈ ಬಾರಿ 18ನೇ ಸೀಸನ್‌ನಲ್ಲಿ ಗೆದ್ದೇ ಗೆಲ್ಲಬೇಕೆನ್ನುವ ಪಣತಿಟ್ಟು ನಿಂತಿದೆ. ಈ ಋತುವಿನಲ್ಲಿ ಆರ್‌ಸಿಬಿ ಉತ್ತಮ ಫಾರ್ಮ್‌ನಲ್ಲಿದೆ. ಹಿಂದಿನ ಯಾವುದೇ ಋತುಗಳಿಗಿಂತ ಭಿನ್ನವಾಗಿ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿದೆ. ಆದ್ದರಿಂದ ನಮ್ಮ ಆರ್‌ಸಿಬಿ ಟ್ರೋಫಿ ಗೆದ್ದೇ ಗೆಲ್ಲಲಿದೆ ಎನ್ನುವ ಮಾತು ಅಭಿಮಾನಿಗಳದ್ದಾಗಿದೆ.

ಪಂಜಾಬ್‌ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್‌ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಾಯಾಂಕ್ ಅಗರ್ವಾಲ್‌, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್/ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್‌, ಸುಯಶ್ ಶರ್ಮಾ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+