2025 ಐಪಿಎಲ್ ಕಪ್ ಗೆಲ್ಲಬೇಕಿದ್ದ ಆರ್‌ಸಿಬಿ ತಂಡಕ್ಕೆ ಆಘಾತ... RCB vs KKR

ಕನ್ನಡಿಗರ ರಾಜಧಾನಿ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ನಮ್ಮ ಆರ್‌ಸಿಬಿ ತಂಡಕ್ಕೆ, ಕೋಟಿ ಕೋಟಿ ಅಭಿಮಾನಿಗಳ ಬೆಂಬಲ ಇದೆ. ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ರಿಕೆಟ್ ಲೋಕದಲ್ಲಿ ಒಂದು ಹವಾ ಕೂಡ ಇದೆ. ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ ಹುಡುಗರ ಸಾರಥ್ಯದಲ್ಲಿ ಮಿಂಚುತ್ತಿದ್ದು, 2025ರ ಐಪಿಎಲ್ ಕಪ್ ನಮ್ಮದೇ ಅಂತಾ ಅಭಿಮಾನಿಗಳು ಕೂಡ ಡಿಸೈಡ್ ಆಗಿದ್ದಾರೆ. ಹೀಗಿದ್ದಾಗಲೇ, 2025 ಐಪಿಎಲ್ ಕಪ್ ಗೆಲ್ಲಬೇಕಿದ್ದ ಆರ್‌ಸಿಬಿ ತಂಡಕ್ಕೆ ಆಘಾತ...

ಆರ್‌ಸಿಬಿ ತಂಡ ಈಗಾಗಲೇ ಟೇಬಲ್ ಟಾಪರ್ ಆಗಿದ್ದು, ಇನ್ನೇನು ಕೊಲ್ಕತ್ತಾ ವಿರುದ್ಧವೂ ಗೆದ್ದು ಪ್ಲೇಆಫ್ ಎಂಟ್ರಿ ಕೊಡಲಿದೆ ಅಂತಾನೇ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈ ಸಮಯದಲ್ಲೇ ಭರ್ಜರಿ ಮಳೆ ಸುರಿದು ಮ್ಯಾಚ್ ನಿಂತು ಹೋಗಿದ್ದು, ಭಾರಿ ಆಘಾತ ಇದೀಗ ಎದುರಾಗಿದೆ. ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಮುಂದಿನ ಹಂತಕ್ಕೆ ಹೋಗುವುದು ಪಕ್ಕಾ ಆಗಿದ್ದರೂ, ನಂ. 1 ಅಥವಾ ನಂ. 2 ತಂಡವಾಗಿ ಹೊರ ಹೊಮ್ಮಬೇಕಿದೆ. ಅಕಸ್ಮಾತ್ ಇದು ಬದಲಾದರೆ ನಮ್ಮ ಆರ್‌ಸಿಬಿ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಇಂತಹ ಹೊತ್ತಲ್ಲೇ ಮಳೆ ಮತ್ತೊಂದು ಆಘಾತ ನೀಡಿದೆ!

RCB vs KKR Match Has Been Abandoned And This Is What Fans Are Saying

ಮಳೆ.. ಮಳೆ.. ಆರ್‌ಸಿಬಿ ತಂಡಕ್ಕೆ...

ಹೌದು, ಬೆಂಗಳೂರಲ್ಲಿ ಭಾರಿ ಮಳೆ ಕಾರಣಕ್ಕೆ ಈಗ ಆರ್‌ಸಿಬಿ & ಕೆಕೆಆರ್ ನಡುವಿನ ಮ್ಯಾಚ್ ನಿಂತು ಹೋಗಿದೆ. ಅದರಲ್ಲೂ, ಕೆಕೆಆರ್ ವಿರುದ್ಧ ಆರ್‌ಸಿಬಿ ದೊಡ್ಡ ಗೆಲುವು ಕಾಣುವುದು ಗ್ಯಾರಂಟಿ ಅಂತ ನಂಬಿರುವ ಸಮಯದಲ್ಲೇ ದೊಡ್ಡ ಆಘಾತ ಮಳೆ ಕಡೆಯಿಂದ ಸಿಕ್ಕಿದೆ. ಹೀಗೆ ಇದ್ದಾಗಲೇ, ಆರ್‌ಸಿಬಿ ತಂಡ ಅಕಸ್ಮಾತ್ ಮೊದಲ 2 ಸ್ಥಾನ ಪಡೆಯದೇ ಮುಂದೆ ಹೋದರೆ ಎರಡು ಬಾರಿ ಪ್ಲೇಆಫ್ ಮ್ಯಾಚ್ ಎದುರಿಸುವ ಅನಿವಾರ್ಯತೆ ಎದುರಾಗಲಿದೆ. ಈಗ ಆರ್‌ಸಿಬಿ 12 ಪಂದ್ಯದಲ್ಲಿ 8 ಪಂದ್ಯ ಗೆದ್ದು 3 ಪಂದ್ಯ ಸೋತು ಒಂದು ಪಂದ್ಯ ಫಲಿತಾಂಶ ಇಲ್ಲದೆಯೇ 17 ಅಂಕ ಗಳಿಸಿದೆ. ಹೀಗಿದ್ದಾಗ ಮಳೆ ಬೇರೆ ಟಾರ್ಚರ್ ಕೊಡುತ್ತಿದೆ.

ನಮ್ಮ ಆರ್‌ಸಿಬಿ ತಂಡಕ್ಕೆ ಮಳೆ ವಿಲನ್?

ಹೌದು, ರಾಯಲ್ ಚಾಲೆಂಜರ್ಸ್ ತಂಡಕ್ಕೆ ಇದೀಗ ಮಳೆರಾಯನೇ ವಿಲನ್ ಆಗಿದ್ದಾನೆ ಅಂತಾ ಹೇಳಬಹುದು. ಯಾಕಂದ್ರೆ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಮ್ಯಾಚ್ ಆಡುವಾಗ ಮಳೆಯ ಕಾಟ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಆರ್‌ಸಿಬಿ ತಂಡ ಈ ಬಾರಿ ಟೇಬಲ್ ಟಾಪರ್ ಆಗಿ ಹೊರ ಹೊಮ್ಮಬೇಕು ಅಂತಾ ಎಲ್ಲರೂ ಕಾಯುತ್ತಿದ್ದಾರೆ. ಹೀಗಿದ್ದಾಗ ಮಳೆರಾಯ ಒಂದಷ್ಟು ಗ್ಯಾಪ್ ತೆಗೆದುಕೊಳ್ಳಬೇಕು. ಇಲ್ಲವಾದರೆ ಕೆಕೆಆರ್ ವಿರುದ್ಧದ ಮ್ಯಾಚ್ ಕ್ಯಾನ್ಸಲ್ ಆದಂತೆ, ಇದೀಗ ಮುಂದಿನ ಪಂದ್ಯಗಳ ಕಥೆ ಕೂಡ ಫಲಿತಾಂಶ ಇಲ್ಲದೆ ಮುಗಿದು ಹೋಗಲಿದೆ ಎಂಬ ಭಯ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+