RCB Vs CSK: ನಾವು ಮಾತನಾಡುವ ವಿಚಾರ ನಮ್ಮ ಮಧ್ಯೆಯೇ ಇರುತ್ತದೆ: ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ಧೋನಿ ಹೇಳಿದ್ದೇನು?
RCB Vs CSK: ಮಾರ್ಚ್ 22ರಂದು ಐಪಿಎಲ್ 18ನೇ ಆವೃತ್ತಿ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ ಗೆದ್ದು ಬೀಗಿದೆ. ಎರಡನೇ ಪಂದ್ಯವನ್ನು ಆರ್‌ಸಿಬಿಯು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 28ರಂದು ಸೆಣಸಲಿವೆ. ಇದಕ್ಕೂ ಮುನ್ನ ಎಂಎಸ್ ಧೋನಿ ವಿರಾಟ್ ಕೊಹ್ಲಿ ಜೊತೆಗಿನ ಬಾಂದವ್ಯದ ಬಗ್ಗೆ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಇದು ಇದೀಗ ಎಲ್ಲಡೆ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಆರ್‌ಸಿಬಿಯು ಐಪಿಎಲ್ 2025ನೇ ಆವೃತ್ತಿಯ ಎರಡನೇ ಪಂದ್ಯವನ್ನು ಮಾರ್ಚ್ 28ರಂದು ಚೆನ್ನೂ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈಗಾಗಲೇ ಮೊದಲ ಉದ್ಘಾಟನಾ ಪಂದ್ಯವನ್ನು ಕೆಕೆಆರ್ ವಿರುದ್ಧ ಆಡಿ ಭರ್ಜರಿ ಗೆಲುವು ಸಾಧಿಸಿದೆ. ಇನ್ನೂ ಇದೀಗ ಆರ್‌ಸಿಬಿ ಸಿಎಸ್‌ಕೆ ಪಂದ್ಯ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಅವರು ವಿರಾಟ್ ಕೊಹ್ಲಿ ಅವರ ಜೊತೆಗಿನ ಬಾಂದವ್ಯ ಎಂಥಹದ್ದು ಎಂದು ಹೇಳಿಕೊಂಡಿದ್ದಾರೆ.

2008ರಿಂದ ಎಂಎಸ್ ಧೋನಿ ಸಿಎಸ್‌ಕೆ ಮತ್ತು ವಿರಾಟ್ ಕೊಹ್ಲಿ ಆರ್‌ಸಿಬಿಯಲ್ಲೇ ಆಡುತ್ತಿದ್ದಾರೆ. ಈ ಮೂಲಕ ಇದುವರೆಗೂ ನಡೆದ ಎಲ್ಲಾ ಐಪಿಎಲ್ ಸೀಸನ್‌ಗಳಲ್ಲೂ ಒಂದೇ ತಂಡದಲ್ಲಿ ಆಡಿದ ಪಾತ್ರ ಇವರಿಬ್ಬರದ್ದಾಗಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿ ರುತುರಾಜ್ ಗಾಯಕ್ವಾಡ್ ಅವರು ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ.
ಇದೀಗ ಎಂಎಸ್ ಧೋನಿ ಅವರು ವಿರಾಟ್ ಕೊಹ್ಲಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ಆಟಗಾರರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆರಂಭದಿಂದಲೂ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಆಡುತ್ತಿರುವ ಆಟಗಾರರು ಇವರಾಗಿದ್ದಾರೆ. ಎಂಸ್ ಧೋನಿ ಚೈನ್ನೂ ಸೂಪರ್ ಕಿಂಗ್ಸ್ ತಂಡಲ್ಲೇ ಮುಂದುವರೆದರೆ, ಕಿಂಗ್ ಕೊಹ್ಲಿ ಅವರು ಆರ್‌ಸಿಬಿಯಲ್ಲೇ ಆಡಿಕೊಂಡು ಬಂದಿದ್ದಾರೆ.
ಎಂಎಸ್ ಧೋನಿ ಸಂದೇಶ: ಐಪಿಎಲ್ 2025ರ ಪೂರ್ವದಲ್ಲಿ ಜಿಯೋ ಹಾಟ್‌ಸ್ಟಾರ್ ಜೊತೆಗಿನ ಸಂದರ್ಶನದಲ್ಲಿ ಧೋನಿ ಮಾತನಾಡಿದ್ದು, "ನಾನು ಸಂಬಂಧದ ಬಗ್ಗೆ ಮಾತನಾಡುತ್ತೇನೆ, ಸಂದೇಶದ ಬಗ್ಗೆ ಅಲ್ಲ. ಅದನ್ನು ಹಾಗೆಯೇ ಇಟ್ಟುಕೊಳ್ಳಲು ನಾನು ಇಷ್ಟಪಡುತ್ತೇನೆ. ಅದು ಏನೆಂದರೆ, ಇತರ ಕ್ರಿಕೆಟಿಗರು ನನ್ನ ಬಳಿಗೆ ಬಂದು ಅವರ ಮನಸ್ಸಿನಲ್ಲಿ ಏನಾದರೂ ಇದೆಯೇ ಎಂದು ಕೇಳಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.
ನಾನು ಯಾರೇ ಜೊತೆಗೆ ಏನೇ ಮಾತನಾಡಿದರೂ ಆ ವಿಚಾರ ಹೊರಬರುವುದಿಲ್ಲ. ನಾವು ಏನು ಮಾತನಾಡಿದರೂ, ಮೂರನೇ ವ್ಯಕ್ತಿಗೆ ಅದು ತಿಳಿದಿರುವುದಿಲ್ಲ ಎಂದು ಹೇಳಿದರು. ಕೊಹ್ಲಿ ಬಗ್ಗೆ ಮಾತನಾಡಿದ ಅವರು, ಕೊಹ್ಲಿಯ ದೃಢನಿಶ್ಚಯ ಮತ್ತು ಯಶಸ್ಸಿನ ಬಗ್ಗೆ ಶ್ಲಾಘಿಸಿದರು. ಅವರು 40 ಅಥವಾ 60 ರನ್‌ಗಳಿಂದ ಎಂದಿಗೂ ಸಂತೋಷಪಡದ ವ್ಯಕ್ತಿ. ಅವರು ಶತಕ ಗಳಿಸಿ ಕೊನೆಯಲ್ಲಿ ಔಟಾಗದೆ ಇರಬೇಕೆಂದು ಬಯಸಿದ್ದರು. ಆ ಹಸಿವು ಆರಂಭದಿಂದಲೂ ಇತ್ತು ಎಂದು ಹೇಳಿದರು.
"ಅಲ್ಲದೆ, ಹಾಗಾಗ ಅವರು ಬಂದು ನನ್ನೊಂದಿಗೆ ಮಾತನಾಡುತ್ತಿದ್ದರು. ನಾನು ಇಲ್ಲಿ ವಿಭಿನ್ನವಾಗಿ ಏನು ಮಾಡಬಹುದಿತ್ತು? ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಹೇಳಿದರು. ಈ ಸಂವಹನಗಳು ಕೇವಲ ನಾಯಕ-ಕಿರಿಯ ಆಟಗಾರನ ಕ್ರಿಯಾತ್ಮಕತೆಯನ್ನು ಮೀರಿ ಬಲವಾದ ಸ್ನೇಹ ಬೆಳೆಯಲು ಸಹಾಯ ಮಾಡಿದವು," ಎಂದು ಹೇಳಿದರು.
ಈಗಾಗಲೇ ಐಪಿಎಲ್ 2025 ಆರಂಭದ ಪಂದ್ಯಗಳನ್ನು ಸಿಎಸ್‌ಕೆ ಮುಂಬೈ ವಿರುದ್ಧ ಮತ್ತು ಆರ್‌ಸಿಬಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿವೆ. ಮಾರ್ಚ್ 28ರಂದು ಸಿಎಸ್‌ಕೆ ಆರ್‌ಸಿಬಿ ಮುಖಾಮುಖಿಯಾಗಲಿವೆ. ಧೋನಿ ಹಾಗೂ ವಿರಾಟ್ ಕೊಹ್ಲಿ ತಮ್ಮ ತಂಡಗಳಲ್ಲಿ ಇನ್ಮುಂದೆ ನಾಯಕರಲ್ಲದಿದ್ದರೂ, ಅವರ ಸ್ನೇಹ ಮಾತ್ರ ಎಂದಿನಂತೆ ಮುಂದುವರೆದಿದೆ.












Click it and Unblock the Notifications