RCB vs CSK: ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ

ಮಾರ್ಚ್ 28ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣೆಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸಜ್ಜಾಗಿದೆ. ಐಪಿಎಲ್‌ 2025ರ ಬಹುನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದ್ದು ವಿರಾಟ್ ಕೊಹ್ಲಿ ಎಂಎಸ್ ಧೋನಿ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮಂಗಳವಾರದಿಂದಲೇ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿರುವ ಆರ್ ಸಿಬಿ ತಂಡ ಚೆನ್ನೈ ಸ್ಪಿನ್ ದಾಳಿ ಎದುರಿಸಲು ಸಜ್ಜಾಗುತ್ತಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕೂಡ ತವರಿನಲ್ಲಿ ಮೊದಲ ಪಂದ್ಯ ಆಡಿದ್ದು ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದೆ.

rcb vs csk ipl 2025 playing xi pitch report virat kohli ms dhoni

ಬಲಿಷ್ಠ ತಂಡಗಳ ಮುಖಾಮುಖಿ

2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈನಲ್ಲಿ ಸಿಎಸ್‌ಕೆ ತಂಡದ ವಿರುದ್ಧ ಗೆಲುವು ಸಾಧಿಸಿತ್ತು, ಅದಾದ ಬಳಿಕ ಈವರೆಗೆ ಗೆಲುವು ಸಾಧಿಸಲು ಆಗಿಲ್ಲ. ತವರಿನ ಅಂಗಳವನ್ನು ಭದ್ರ ಕೋಟೆಯನ್ನಾಗಿಸಿಕೊಂಡಿರುವ ಸಿಎಸ್‌ಕೆ ವಿರುದ್ಧ ಗೆಲ್ಲುವ ಅವಕಾಶ ಈ ಬಾರಿ ಆರ್ ಸಿಬಿಗೆ ಸಿಕ್ಕಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಬಲಿಷ್ಠವಾಗಿ ಕಾಣಿಸುತ್ತಿದ್ದು ಅದಕ್ಕೆ ತಕ್ಕಂತೆ ಆಡಿದರೆ ಗೆಲ್ಲುವ ಸಾಧ್ಯತೆ ಇದೆ.

ಸಿಎಸ್‌ಕೆ ಕೂಡ ತವರಿನಲ್ಲಿ ಪ್ರಾಬಲ್ಯ ಮುಂದುವರೆಸುವ ವಿಶ್ವಾಸಲ್ಲಿದ್ದು ಬಲಿಷ್ಠ ಸ್ಪಿನ್ ಪಡೆಯನ್ನು ಕಟ್ಟಿದ್ದು ಆರ್ ಸಿಬಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಸಜ್ಜಾಗಿದೆ. 2024ರ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿದ್ದ ಆರ್ ಸಿಬಿ ಧೋನಿ ಹುಡುಗರ ಪ್ಲೇಆಫ್ ಕನಸು ಭಗ್ನಗೊಳಿಸಿ ತಾನು ಪ್ಲೇಆಫ್‌ ತಲುಪಿತ್ತು, ಇದೀಗ ಆ ಸೋಲಿನ ಲೆಕ್ಕ ಚುಕ್ತಾ ಮಾಡಲು ಸಜ್ಜಾಗಿದೆ.

ಆರ್ ಸಿಬಿ ತಂಡದಲ್ಲಿ ಬದಲಾವಣೆ?

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದು ರಸಿಕ್ ದಾರ್ ಬದಲಾಗಿ ಆಡುವ ಸಾಧ್ಯತೆ ಇದ್ದು, ದೇವದತ್ ಪಡಿಕ್ಕಲ್ ಬದಲಾಗಿ ಸ್ವಪ್ನಿಲ್ ಸಿಂಗ್ ಆಡುವ ಸಾಧ್ಯತೆ ಇದೆ. 2024ರ ಐಪಿಎಲ್‌ನಲ್ಲಿ ಸ್ವಪ್ನಿಲ್ ಸಿಂಗ್ ಆರ್ ಸಿಬಿ ತಂಡದ ಅದೃಷ್ಟ ಎಂದೇ ಹೆಸರಾಗಿದ್ದರು. ಅವರು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬಂದರೆ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲವಾಗಲಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್ ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ರಾತ್ರಿ ವೇಳೆ ಇಬ್ಬನಿ ಕೂಡ ಬೀಳುವ ಸಾಧ್ಯತೆ ಇದ್ದು, ಟಾಸ್ ಗೆಲ್ಲುವ ತಂಡ ಚೇಸಿಂಗ್ ಆಯ್ಕೆ ಮಾಡಿಕೊಳ್ಳಲಿದೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್‌ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಖ್ ದಾರ್ ಸಲಾಂ / ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.

ಇಂಪ್ಯಾಕ್ಟ್ ಆಟಗಾರ: ಸ್ವಪ್ನಿಲ್ ಸಿಂಗ್‌, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ.

ಸಿಎಸ್‌ಕೆ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂಎಸ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.

ಇಂಪ್ಯಾಕ್ಟ್ ಆಟಗಾರರು: ರಾಹುಲ್ ತ್ರಿಪಾಠಿ, ವಿಜಯ್ ಶಂಕರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+