IPL 2025: ಆರ್‌ಸಿಬಿ ಅಭಿಮಾನಿಗಳೇ ಗಮನಿಸಿ, ಟಿಕೆಟ್ ಬುಕ್ ಮಾಡಲು ಭರ್ಜರಿ ಅವಕಾಶ!
ಐಪಿಎಲ್ ಜ್ವರ ಜೋರಾಗಿದ್ದು, ಆರ್‌ಸಿಬಿ ಅಭಿಮಾನಿಗಳು 'ಈ ಸಲ ಕಪ್ ನಮ್ದೆ' ಅಂತಾ ಸಿಕ್ಕಾಪಟ್ಟೆ ಜೋಶ್ ಅಲ್ಲಿ ಇದ್ದಾರೆ. ಆರ್‌ಸಿಬಿ ಇಡೀ ಜಗತ್ತಿನಲ್ಲೇ ಅತ್ಯಂತ ನಿಷ್ಠರಾದ ಫ್ಯಾನ್ಸ್ ಹೊಂದಿದೆ ಅನ್ನೋ ಹೆಮ್ಮೆ ಕೂಡ ನಮ್ಮ ಬೆಂಗಳೂರು ತಂಡಕ್ಕೆ ಸಿಕ್ಕಿದೆ. ಹಾಗಾದ್ರೆ ನೀವು ಕೂಡ ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ನೋಡಬೇಕು ಅನ್ನೋ ಆಸೆ ಇದೆಯಾ? ಆದರೆ ಟಿಕೆಟ್ ಬುಕಿಂಗ್ ಹೇಗೆ ಮಾಡೋದು ಅನ್ನೋದು ಗೊತ್ತಿಲ್ವಾ? ಬನ್ನಿ ತಿಳಿಯೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಒಂದೇ ಒಂದು ಕಪ್ ಗೆದ್ದಿಲ್ಲ, ಹೀಗಿದ್ದರೂ ನಮ್ಮ ಬೆಂಗಳೂರು ತಂಡಕ್ಕೆ ಇರುವಷ್ಟು ಅಭಿಮಾನಿಗಳು ಬೇರೆ ಯಾವುದೇ ಟೀಂಗೆ ಕೂಡ ಇಲ್ಲ. ಸೋಲು & ಗೆಲುವಿನ ಲೆಕ್ಕಾಚಾರ ನೋಡದೆ ಅಭಿಮಾನಿಗಳು ಆರ್‌ಸಿಬಿ ಟೀಂ ಬೆಂಬಲಕ್ಕೆ ನಿಲ್ಲುತ್ತಾರೆ. ಹೀಗಿದ್ದಾಗಲೇ ಮತ್ತೊಂದು ಸೀಸನ್ ಬಂದಿದ್ದು, ಐಪಿಎಲ್-2025ರ ಕಪ್ ನಮ್ದೆ ಅಂತಾ ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಬಾರಿ ಬಲಿಷ್ಠವಾದ ತಂಡ ಹೊಂದಿರುವ ನಮ್ಮ ಆರ್‌ಸಿಬಿ ತಂಡ ಗೆದ್ದು ಬೀಗುವುದು ಗ್ಯಾರಂಟಿ ಆಗಿದೆ. ಹಾಗಿದ್ದರೆ, ಟಿಕೆಟ್ ಬುಕಿಂಗ್ ಮಾಡಿ ಸ್ಟೇಡಿಯಂನಲ್ಲೇ ಮ್ಯಾಚ್ ನೋಡುವುದು ಹೇಗೆ?

ಆರ್‌ಸಿಬಿ ಪಂದ್ಯಕ್ಕೆ ಟಿಕೆಟ್ ಬುಕ್ ಮಾಡಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರ್ಚ್ 22ಕ್ಕೆ ಕಲ್ಕತ್ತಾದ 'ಈಡನ್ ಗಾರ್ಡನ್ಸ್' ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ IPL 2025ರ ಮೊದಲನೇ ಪಂದ್ಯವನ್ನ ಆಡಲಿದೆ. ಎಲ್ಲಾ ಅಭಿಮಾನಿಗಳು ಆರ್‌ಸಿಬಿ ಬೆಂಬಲಿಸಲು ಕಾಯ್ತಿದ್ದಾರೆ. ಹೀಗಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ಹಲವು ಪಂದ್ಯಗಳಿಗೆ ಸಜ್ಜಾಗಿದ್ದು, ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ತವರಿನ ಪಂದ್ಯ ಎಂದ ತಕ್ಷಣ ಆರ್‌ಸಿಬಿ ಅಭಿಮಾನಿಗಳು ಕುಣಿದಾಡುವುದು ಗ್ಯಾರಂಟಿ. ಹೀಗಾಗಿಯೇ ಟಿಕೆಟ್‌ಗೆ ಕೂಡ ಭರ್ಜರಿ ಡಿಮ್ಯಾಂಡ್ ಬಂದಿದೆ.
ಬೆಂಗಳೂರಿನಲ್ಲಿ ಆರ್‌ಸಿಬಿ ಮ್ಯಾಚ್ ಪಟ್ಟಿ
'ನೆವಿ' ಅಪ್ಲಿಕೇಷನ್ ಮೂಲಕ ನೀವು ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಯುಪಿಐ ಬಳಕೆದಾರರು 'ನೆವಿ' ಅಪ್ಲಿಕೇಷನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. ಆರ್‌ಸಿಬಿ ತಂಡ 2025ರ ಮಾರ್ಚ್ 28ಕ್ಕೆ ಚೆನ್ನೈ ತಂಡದ ವಿರುದ್ಧ ತನ್ನ ಮೊದಲ ಪಂದ್ಯವನ್ನು ತವರಿನಲ್ಲಿ, ಅಂದ್ರೆ ಬೆಂಗಳೂರಿನಲ್ಲಿ ಆಡಲಿದೆ. ಆ ನಂತರ ಏಪ್ರಿಲ್ 2 ರಂದು ಗುಜರಾತ್ ಟೈಟಾನ್ ವಿರುದ್ಧ, ಏಪ್ರಿಲ್ 10 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ, ಏಪ್ರಿಲ್ 18 ರಂದು ಪಂಜಾಬ್ ವಿರುದ್ಧ ಬೆಂಗಳೂರಲ್ಲೇ ಆರ್‌ಸಿಬಿ ಮ್ಯಾಚ್ ಆಡಲಿದೆ.
ಏಪ್ರಿಲ್ 24 ರಂದು ರಾಜಸ್ಥಾನ, ಮೇ 3 ರಂದು ಚೆನ್ನೈ, ಮೇ 13 ರಂದು ಹೈದರಾಬಾದ್ ಟೀಂ ವಿರುದ್ಧ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಮ್ಯಾಚ್ ಆಡಲಿದೆ. ಅಂತಿಮವಾಗಿ ಮೇ 17 ರಂದು ಕೆಕೆಆರ್ ವಿರುದ್ಧ ಆರ್‌ಸಿಬಿ ತಂಡ ಬೆಂಗಳೂರಿನಲ್ಲಿ ಮ್ಯಾಚ್ ಆಡಲಿದ್ದು, ಫ್ಯಾನ್ಸ್‌ಗೆ ಟಿಕೆಟ್ ಬುಕ್ ಮಾಡುವ ಚಿಂತೆ ಶುರುವಾಗಿದೆ.












Click it and Unblock the Notifications