ರಾಜಸ್ಥಾನ ಪೀಸ್, ಪೀಸ್... ಇತಿಹಾಸ ನಿರ್ಮಿಸಲು ಬೆಂಗಳೂರು ತಂಡ ಆರ್‌ಸಿಬಿ... RCB Vs RR

ಕ್ರಿಕೆಟ್ & ಕನ್ನಡಿಗರ ನಡುವೆ ತುಂಬಾ ಗಟ್ಟಿಯಾದ ಸಂಬಂಧ ಇದ್ದು, ಭಾರತ ಕ್ರಿಕೆಟ್ ತಂಡಕ್ಕೂ ಕನ್ನಡಿಗರ ಕೊಡುಗೆ ಬಹು ದೊಡ್ಡದಾಗಿದೆ. 18 ವರ್ಷಗಳ ಹಿಂದೆ ಐಪಿಎಲ್ ಹವಾ ಶುರುವಾದ ನಂತರ ಕನ್ನಡಿಗರು ಬೆಂಗಳೂರು ತಂಡವನ್ನು ಬೆಂಬಲಿಸುವ ಮೂಲಕ, ಊಹೆಗೂ ನಿಲುಕದ ಕೊಡುಗೆ ನೀಡುತ್ತಿದ್ದಾರೆ. ಹೀಗಿದ್ದಾಗಲೇ, ರಾಜಸ್ಥಾನ ಪೀಸ್, ಪೀಸ್... ಇತಿಹಾಸ ನಿರ್ಮಿಸಲು ಬೆಂಗಳೂರು ತಂಡ ಆರ್‌ಸಿಬಿ...

ನಮ್ಮ ಬೆಂಗಳೂರು ತಂಡ ರಾಯಲ್ ಚಾಲೆಂಜರ್ಸ್ ಇಂದು ರಾಜಸ್ಥಾನ ವಿರುದ್ಧ ಕಂಡ ಗೆಲುವು ಬರೀ ಒಂದು ಜಯವಲ್ಲ, ಯಾಕಂದ್ರೆ ಆರ್‌ಸಿಬಿ ತಂಡ ಕಪ್ ಗೆಲ್ಲೋದಕ್ಕೆ ಮುಂದಿನ ಹಂತಕ್ಕೆ ಹೋಗಬೇಕು ಅಂದ್ರೆ ಇಂದಿನ ಮ್ಯಾಚ್ ಗೆಲ್ಲಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿಬಿಟ್ಟಿತ್ತು. ಅದರಲ್ಲೂ ರಾಜಸ್ಥಾನ ತಂಡದ ವಿರುದ್ಧ ಗೆದ್ದು ಬರಬೇಕು ಎಂಬ ಹಠ ಕೊಹ್ಲಿ ಹುಡುಗರ ರಕ್ತದಲ್ಲೂ ಬೆರೆತು ಹೋಗಿತ್ತು. ಇಷ್ಟೆಲ್ಲಾ ಇದ್ದಾಗಲೇ ಇಂದು ವಿರಾಟ್ ಕೊಹ್ಲಿ ಹುಡುಗರು ಸೋಲಿನ ಸುಳಿಗೆ ಸಿಲುಕಿಬಿಟ್ಟರು...

RCB Team Is Preparing To Create History After Winning Against The Rajasthan Royals

ರಾಜಸ್ಥಾನ ರಾಯಲ್ಸ್ ಪೀಸ್, ಪೀಸ್...

ಹೌದು, ಬೆಂಗಳೂರು ಹುಡುಗರು ಕ್ರಿಕೆಟ್ ಆಡುತ್ತಾರೆ ಅಂದ್ರೆ ಸ್ವಲ್ಪ ಸೌಂಡ್ ಜಾಸ್ತಿನೇ ಇರುತ್ತೆ. ಅದರಲ್ಲೂ ನಮ್ಮ ಆರ್‌ಸಿಬಿ ಮ್ಯಾಚ್ ಬೆಂಗಳೂರಿನಲ್ಲಿ ನಡೆಯುತ್ತೆ ಅಂದ್ರೆ ಕಿವಿ ಕೇಳದಂತೆ ಕೂಗುವುದು ಮಾಮೂಲಿ. ಹೀಗೆ ಕೂಗುತ್ತಾ, ಆರ್‌ಸಿಬಿ... ಆರ್‌ಸಿಬಿ... ಅಂತಾನೇ ನಮ್ಮ ಬೆಂಗಳೂರು ಅಭಿಮಾನಿಗಳು ಬೆಂಬಲ ನೀಡುತ್ತಾರೆ. ಹೀಗಿದ್ದರೂ ರಾಜಸ್ಥಾನ ವಿರುದ್ಧ ಮ್ಯಾಚ್ ನಮ್ಮ ಆರ್‌ಸಿಬಿ ನಡೆಯುವಾಗ ದಿಢೀರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನವೇ ಫುಲ್ ಸೈಲೆಂಟ್ ಆಗಿಬಿಟ್ಟಿತು...

ಅಂತಿಮವಾಗಿ ಆರ್‌ಸಿಬಿ ತಂಡಕ್ಕೆ ಗೆಲುವು!

ಆರ್‌ಸಿಬಿ ತಂಡ ನೀಡಿದ್ದ 206 ರನ್ ಗುರಿಯನ್ನ ಬೆನ್ನು ಹತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ ಆರಂಭದಲ್ಲೇ ಅಬ್ಬರಿಸಿತ್ತು. 19 ಬಾಲ್ ಆಡಿ 49 ರನ್ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಒಂದು ಹಂತದಲ್ಲಿ ಭಯ ಹುಟ್ಟಿಸಿದ್ದರು. ಆದರೆ ಹೆಜೆಲ್‌ವುಡ್ ಬೌಲಿಂಗ್‌ಗೆ ಬಲಿಯಾದರು ಯಶಸ್ವಿ ಜೈಸ್ವಾಲ್. ಆ ನಂತರ ಧ್ರುವ್ ಜುರೇಲ್ ಕೂಡ ಅಬ್ಬರಿಸಲು ಶುರು ಮಾಡಿ, 34 ಬಾಲ್‌ಗೆ 47 ರನ್ ಸಿಡಿಸಿದರು.

ಕೊನೆಯ 2 ಓವರ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲಲು ಕೇವಲ 17 ರನ್ ಅಗತ್ಯತೆ ಇತ್ತು. ಇದೇ ಸಮಯದಲ್ಲಿ ಮತ್ತೆ ಹೀರೋ ರೀತಿ ಎಂಟ್ರಿಯನ್ನ ಕೊಟ್ಟಿದ್ದ ಹೆಜೆಲ್‌ವುಡ್, ರಾಜಸ್ಥಾನ ತಂಡದ 4 ಪ್ರಮುಖ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಹೀಗಾಗಿ ರಾಜಸ್ಥಾನ ರಾಯಲ್ಸ್ ಆರ್‌ಸಿಬಿ ಎದುರು ಮಂಡಿ ಊರಿತ್ತು. ಈ ಮೂಲಕ ಆರ್‌ಸಿಬಿ 2025ರ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೆ ಹೋಗಲು ಕೆಲವೇ ಮೆಟ್ಟಿಲು ಬಾಕಿದೆ. ಇದು ನೆರವೇರಿದರೆ ಹೊಸ ಇತಿಹಾಸ ನಿರ್ಮಾಣ ಆಗುವುದು ಗ್ಯಾರಂಟಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+