ಸೋತು + ಗೆದ್ದು + ಸೋತು + ಗೆದ್ದ ವಿರಾಟ್ ಕೊಹ್ಲಿ ಹುಡುಗರು... RCB Vs RR
ಕ್ರಿಕೆಟ್ ಲೋಕದ ಮಿನುಗುತಾರೆ ಬೆಂಗಳೂರು ಅಂತಾ ಹೇಳಬಹುದು... ಯಾಕಂದ್ರೆ ಕ್ರಿಕೆಟ್ ಆಡುವ ತಂಡಗಳು ಸಾವಿರಾರು ಇದ್ದರೂ, ನಮ್ಮ ಬೆಂಗಳೂರು ತಂಡ ಆರ್‌ಸಿಬಿಗೆ ಇರುವ ತಾಕತ್ & ಖದರ್ ಯಾರಿಗೂ ಇಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮ್ಯಾಚ್ ಆಡುತ್ತಿದೆ ಅಂದ್ರೆ ಕೋಟಿ ಕೋಟಿ ಜನರು ಪಂದ್ಯ ನೋಡಲು ಕಾಯುತ್ತಾರೆ. ಅದೇ ರೀತಿ, ಗುರುವಾರ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಸರ್ಪ್ರೈಸ್ ನೀಡಿತ್ತು!
ಆರ್‌ಸಿಬಿ ಅಂದ್ರೆ ಅದು ಕೇವಲ ಕ್ರಿಕೆಟ್ ತಂಡವಲ್ಲ, ಕನ್ನಡಿಗರ ಜೊತೆಗೆ ಬೆರೆತು ಹೋಗಿರುವ ಭಾವನೆ ಆಗಿದೆ. ಹೀಗಾಗಿ ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಅಂತಾ ಕನ್ನಡಿಗರು ಸದಾ ಕೂಗುತ್ತಲೇ ಇರುತ್ತಾರೆ. ಇಷ್ಟೆಲ್ಲಾ ಪ್ರೀತಿ ತೋರಿಸಿ, ಮುದ್ದು ಮಾಡಿದರೂ ನಮ್ಮ ಆರ್‌ಸಿಬಿ ತಂಡಕ್ಕೆ ಸುಲಭವಾಗಿ ಗೆಲ್ಲಲು ಆಗುವುದೇ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ, ಸದಾ ಜೀವ ಬಾಯಿಗೆ ಬರಿಸಿಯೇ ಕ್ರಿಕೆಟ್ ಮ್ಯಾಚ್ ಗೆಲ್ಲುವ ನಮ್ಮ ಆರ್‌ಸಿಬಿ ತಂಡ, ಇವತ್ತು ಕೂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು + ಗೆದ್ದು + ಸೋತು + ಗೆದ್ದೇ ಬಿಟ್ಟಿತು...

ಸೋತು + ಗೆದ್ದು + ಸೋತು + ಗೆದ್ದು...
ಅಂದಹಾಗೆ, ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ರಕ್ತದ ಕಣ ಕಣದಲ್ಲಿ 'ಆರ್‌ಸಿಬಿ' ಅನ್ನೋ ಹೆಸರು ರಾರಾಜಿಸುತ್ತಲೇ ಇದೆ. ಆರ್‌ಸಿಬಿ ತಂಡವನ್ನು ಮನೆಯ ಸದಸ್ಯನ ರೀತಿ ಕೋಟಿ ಕೋಟಿ ಅಭಿಮಾನಿಗಳು ಬೆಂಬಲಿಸುತ್ತಾ & ಲವ್ ಮಾಡುತ್ತಾ ಬಂದಿದ್ದಾರೆ. ಹೀಗಿದ್ದಾಗ ಇಂದು ನಮ್ಮ ಆರ್‌ಸಿಬಿ ತಂಡ ಬೆಂಗಳೂರಿನಲ್ಲೇ ಮ್ಯಾಚ್ ಆಡಿತ್ತು, 205 ರನ್ ಬಾರಿಸಿ ರಾಜಸ್ಥಾನ ತಂಡ ಗೆಲ್ಲಲು ಆಗದಷ್ಟು ಸ್ಕೋರ್ ಕೊಟ್ಟಿತ್ತು ಆರ್‌ಸಿಬಿ ಟೀಂ. ಇಷ್ಟಾದ್ರೂ ಜೀವ ಬಾಯಿಗೆ ಬರಿಸಿಯೇ ಬಿಟ್ಟಿದ್ದರು ನಮ್ಮ ರಾಯಲ್ ಚಾಲೆಂಜರ್ಸ್ ಆಟಗಾರರು!
ಅಂತಿಮವಾಗಿ ಆರ್‌ಸಿಬಿ ತಂಡಕ್ಕೆ ಗೆಲುವು!
ಆರ್‌ಸಿಬಿ ತಂಡ ನೀಡಿದ್ದ 206 ರನ್ ಗುರಿಯನ್ನ ಬೆನ್ನು ಹತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡ ಆರಂಭದಲ್ಲೇ ಅಬ್ಬರಿಸಿತ್ತು. 19 ಬಾಲ್ ಆಡಿ 49 ರನ್ ಬಾರಿಸಿದ್ದ ಯಶಸ್ವಿ ಜೈಸ್ವಾಲ್ ಒಂದು ಹಂತದಲ್ಲಿ ಭಯ ಹುಟ್ಟಿಸಿದ್ದರು. ಆದರೆ ಹೆಜೆಲ್‌ವುಡ್ ಬೌಲಿಂಗ್‌ಗೆ ಬಲಿಯಾದರು ಯಶಸ್ವಿ ಜೈಸ್ವಾಲ್. ಆ ನಂತರ ಧ್ರುವ್ ಜುರೇಲ್ ಕೂಡ ಅಬ್ಬರಿಸಲು ಶುರು ಮಾಡಿ, 34 ಬಾಲ್‌ಗೆ 47 ರನ್ ಸಿಡಿಸಿದರು.
ಕೊನೆಯ 2 ಓವರ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ ಗೆಲ್ಲಲು ಕೇವಲ 17 ರನ್ ಅಗತ್ಯತೆ ಇತ್ತು. ಇದೇ ಸಮಯದಲ್ಲಿ ಮತ್ತೆ ಹೀರೋ ರೀತಿ ಎಂಟ್ರಿಯನ್ನ ಕೊಟ್ಟಿದ್ದ ಹೆಜೆಲ್‌ವುಡ್, ರಾಜಸ್ಥಾನ ತಂಡದ 4 ಪ್ರಮುಖ ಆಟಗಾರರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಹೀಗಾಗಿ ರಾಜಸ್ಥಾನ ರಾಯಲ್ಸ್ ಆರ್‌ಸಿಬಿ ಎದುರು ಮಂಡಿ ಊರಿತ್ತು. ಈ ಮೂಲಕ ಆರ್‌ಸಿಬಿ 2025ರ ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನಕ್ಕೆ ಹೋಗಲು ಕೆಲವೇ ಮೆಟ್ಟಿಲು ಬಾಕಿದೆ. ಇದು ನೆರವೇರಿದರೆ ಹೊಸ ಇತಿಹಾಸ ನಿರ್ಮಾಣ ಆಗುವುದು ಗ್ಯಾರಂಟಿ!












Click it and Unblock the Notifications