IPL Mega Auction: ಈ ಮೂವರು ಸ್ಪಿನ್ನರ್ ಮೇಲೆ ಆರ್‌ಸಿಬಿ ಕಣ್ಣು

ಐಪಿಎಲ್ 2025ರ ಮೆಗಾ ಹರಾಜು ಹಲವು ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದೆ, ಹಲವು ತಂಡಗಳು ಪ್ರಮುಖ ಆಟಗಾರರನ್ನೇ ಬಿಡುಗಡೆ ಮಾಡಿದ್ದರೆ, ಇನ್ನೂ ಕೆಲವು ಪ್ರಮುಖ ಆಟಗಾರರು ವಿವಿಧ ಕಾರಣಗಳಿಂದ ಫ್ರಾಂಚೈಸಿಯಿಂದ ದೂರವಾಗಿದ್ದು ಮೆಗಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್‌ಸಿಬಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಬಲಿಷ್ಠ ತಂಡ ಕಟ್ಟಲು ಸಾಕಷ್ಟು ಲೆಕ್ಕಾಚಾರ ಹಾಕಿಕೊಂಡಿದೆ.

ಆರ್‌ಸಿಬಿಗೆ ಯಾವಾಗಲೂ ಬೌಲಿಂಗ್ ದೊಡ್ಡ ಸಮಸ್ಯೆಯಾಗಿದೆ. ವೇಗಿ ಮೊಹಮ್ಮದ್ ಸಿರಾಜ್‌ರನ್ನೇ ಕೈಬಿಟ್ಟಿರುವ ಆರ್ ಸಿಬಿ ಯಶ್ ದಯಾಳ್‌ರನ್ನು ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ ಪ್ರಮುಖ ಬೌಲರ್ ಗಳ ಮೇಲೆ ಫ್ರಾಂಚೈಸಿ ಕಣ್ಣಿಟ್ಟಿದೆ. ಸ್ಪಿನ್ ವಿಭಾಗದಲ್ಲಿ ಈ ಮೂವರು ಗಮನ ಸೆಳೆದಿದ್ದು, ಆರ್‌ಸಿಬಿ ಕಣ್ಣಿಟ್ಟಿದೆ.

rcb target harpreet brar shams mulani chahal ipl auction 2025

ಹರ್ ಪ್ರೀತ್ ಬ್ರಾರ್

ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಸ್ಪಿನ್ನರ್ ಹರ್ ಪ್ರೀತ್ ಬ್ರಾರ್ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತಿಭಾವಂತ ಯುವ ಸ್ಪಿನ್ನರ್ ಆಗಿರುವ ಬ್ರಾರ್ ಹಲವು ಬಾರಿ ಆರ್‌ಸಿಬಿ ಬ್ಯಾಟರ್ ಗಳನ್ನು ಕಾಡಿದ್ದಾರೆ. ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ದಾಖಲೆಯನ್ನು ಹೊಂದಿದ್ದಾರೆ. ಅವರ ಎಕಾನಮಿ ಕೂಡ ಉತ್ತಮವಾಗಿದ್ದು ಬೆಂಗಳೂರಿನಂತಹ ಪಿಚ್‌ಗಳಲ್ಲಿ ಅಂತಹ ಬೌಲರ್ ಅಗತ್ಯ ಆರ್‌ಸಿಬಿಗೆ ಹೆಚ್ಚಾಗಿದ್ದು, ಅವರನ್ನು ತಂಡಕ್ಕೆ ಸೇರ್ಪಡೆ‌ ಮಾಡಿಕೊಳ್ಳಲು ಯೋಜಿಸಬಹುದು.

ಶಂಮ್ಸ್ ಮುಲಾನಿ

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಶಂಸ್ ಮುಲಾನಿ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 45 ಟಿ20 ಪಂದ್ಯಗಳನ್ನು ಆಡಿರುವ ಅವರು 6.70 ಎಕಾನಮಿ ಹೊಂದಿದ್ದು, 52 ವಿಕೆಟ್ ಪಡೆದುಕೊಂಡಿದ್ದಾರೆ. ಟಿ20 ಮಾದರಿಯಲ್ಲಿ ಈ ಎಕಾನಮಿ ಅತ್ಯುತ್ತಮವಾಗಿದೆ. 114 ಸ್ಟ್ರೈಕ್ ರೇಟ್ ನಲ್ಲಿ 147 ರನ್ ಗಳಿಸಿದ್ದಾರೆ. ಆರ್ ಸಿಬಿ ಯುವ ಆಟಗಾರರಿಗೆ ಮಣೆ ಹಾಕಲು ಯೋಜಿಸಿದ್ದರೆ ಶಂಸ್ ಮುಲಾನಿ ಅತ್ಯುತ್ತಮ ಆಯ್ಕೆಯಾಗಿದ್ದಾರೆ.

ಯುಜ್ವೇಂದ್ರ ಚಹಾಲ್

ಮಾಜಿ ಆರ್ ಸಿಬಿ ಆಟಗಾರ, ಬೆಂಗಳೂರಿನ ದತ್ತು ಪುತ್ರ ಎಂದೇ ಅಭಿಮಾನಿಗಳು ಭಾವಿಸಿದ್ದ ಯುಜ್ವೇಂದ್ರ ಚಹಾಲ್ ಕೂಡ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ, ಆರ್ ಸಿಬಿ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಚಹಾಲ್ ರನ್ನು ಕಳೆದ ಬಾರಿ ಮೆಗಾಹರಾಜಿನ ಸಂದರ್ಭದಲ್ಲಿ ಕೈಬಿಟ್ಟು ಆರ್ ಸಿಬಿ ತಪ್ಪು ಮಾಡಿತ್ತು. ರಾಜಸ್ಥಾನ ರಾಯಲ್ಸ್ ಸೇರಿದ್ದ ಚಹಾಲ್ ಉತ್ತಮ ಪ್ರದರ್ಶನ ನೀಡಿ ಗಮ‌ನ ಸೆಳೆದಿದ್ದಾರೆ. ಇಂದಿಗೂ ಆರ್ ಸಿಬಿ‌ ಮೇಲೆ ಚಹಾಲ್ ಗೆ ಹೆಚ್ಚು ಅಭಿಮಾನವಿದೆ, ಅವರ ಅಪಾರ ಅನುಭವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡಕ್ಕೆ ಉಪಯುಕ್ತವಾಗಲಿದೆ, ಫ್ರಾಚೈಸಿ ಇವರ ಮೇಲೆ ಕೂಡ ಕಣ್ಣಿಟಿದ್ದು ಆರ್ ಸಿಬಿಗೆ ಮರಳಿ ತರುವ ಬಗ್ಗೆ ಯೋಚಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+