IPL Retention: ಮೂವರನ್ನು ಮಾತ್ರ ಉಳಿಸಿಕೊಂಡ ಆರ್‌ಸಿಬಿ
ಬಹು ನಿರೀಕ್ಷಿತ ಐಪಿಎಲ್ ರಿಟೆನ್ಷನ್ ಪಟ್ಟಿ ಬಿಡುಗಡೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾರನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಅಚ್ಚರಿ ಎನ್ನುವಂತೆ ಆರ್ ಸಿಬಿ ಕೇವಲ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದು ಎಲ್ಲಾ ಆಟಗಾರರನ್ನು ಕೈಬಿಟ್ಟಿದೆ. ಈ ಮೂಲಕ ಮೆಗಾ ಹರಾಜಿನಲ್ಲಿ ಹೊಸ ಬಲಿಷ್ಠ ತಂಡವನ್ನೇ ಕಟ್ಟಲು ಸಜ್ಜಾಗಿದೆ.
ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಮಾತ್ರ ಆರ್ ಸಿಬಿ ತಂಡದಲ್ಲಿ ಉಳಿದುಕೊಂಡಿದ್ದು ಉಳಿದ ಎಲ್ಲಾ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ನಾಯಕ ಫಾಫ್ ಡುಪ್ಲೆಸಿಸ್, ವಿಲ್ ಜ್ಯಾಕ್ಸ್, ಕ್ಯಾಮರಾನ್ ಗ್ರೀನ್ ಮತ್ತು ಮೊಹಮ್ಮದ್ ಸಿರಾಜ್‌ರನ್ನು ಕೈಬಿಡಲಾಗಿದೆ.

ವಿರಾಟ್ ಕೊಹ್ಲಿಯನ್ನು ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಂಡಿದ್ದು ಬರೋಬ್ಬರಿ 21 ಕೋಟಿ ರೂಪಾಯಿ ಪಡೆಯಲಿದ್ದಾರೆ. ರಜತ್ ಪಟಿದಾರ್ 11 ಕೋಟಿ ರೂಪಾಯಿ ಪಡೆಯಲಿದ್ದಾರೆ. ಅನ್‌ಕ್ಯಾಪ್ಡ್ ಆಟಗಾರನಾಗಿ ಯಶ್ ದಯಾಳ್‌ರನ್ನು ಉಳಿಸಿಕೊಂಡಿದ್ದು 5 ಕೋಟಿ ರೂಪಾಯಿ ಪಡೆಯಲಿದ್ದಾರೆ.
ಸಿರಾಜ್‌ಗೆ ಶಾಕ್ ಕೊಟ್ಟ ಆರ್ ಸಿಬಿ
ವಿರಾಟ್ ಕೊಹ್ಲಿ ಆಪ್ತರಲ್ಲಿ ಒಬ್ಬರಾಗಿರುವ, ಆರ್ ಸಿಬಿ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದ ಮೊಹಮ್ಮದ್ ಸಿರಾಜ್‌ರನ್ನು ಕೈಬಿಡುವ ಮೂಲಕ ಆರ್ ಸಿಬಿ ಅಚ್ಚರಿ ಮೂಡಿಸಿದೆ. ಆರ್ ಸಿಬಿ ತಂಡಕ್ಕೆ ಬೌಲಿಂಗ್ ಯಾವಾಗಲೂ ಸಮಸ್ಯೆಯಾಗಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಬೌಲಿಂಗ್ ತಂಡವನ್ನು ಕಟ್ಟುವ ಆಲೋಚನೆಯಲ್ಲಿರುವ ಫ್ರಾಂಚೈಸಿ ಸಿರಾಜ್‌ರನ್ನು ಕೂಡ ಕೈಬಿಟ್ಟಿದೆ.
ಮೆಗಾ ಹರಾಜಿನಲ್ಲಿ ಆರ್ ಟಿಎಂ ಬಳಸಿಕೊಂಡು ಸಿರಾಜ್‌ರನ್ನು ವಾಪಸ್ ತಂಡಕ್ಕೆ ತರುವ ಅವಕಾಶ ಕೂಡ ಇದ್ದು, ಆ ಬಗ್ಗೆ ಕೂಡ ಫ್ರಾಂಚೈಸಿ ಚಿಂತಿಸಿದೆ. ವಿಲ್ ಜ್ಯಾಕ್ಸ್, ಕ್ಯಾಮೆರಾನ್ ಗ್ರೀನ್ ಅಥವಾ ಫಾಫ್ ಡುಪ್ಲೆಸಿಸ್‌ರನ್ನು ಆರ್ ಟಿಎಂ ಬಳಸಿಕೊಂಡು ತಂಡಕ್ಕೆ ಕರೆತರುವ ಸಾಧ್ಯತೆ ಇದೆ.
ಮೂವರು ಆಟಗಾರರನ್ನು ಉಳಿಸಿಕೊಳ್ಳಲು ಆರ್ ಸಿಬಿ ಬರೋಬ್ಬರಿ 37 ಕೋಟಿ ರೂಪಾಯಿ ವ್ಯಯಿಸಿದ್ದು, ಪರ್ಸ್‌ನಲ್ಲಿ 83 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ ಈ ಬೃಹತ್ ಮೊತ್ತವನ್ನು ಬಳಸಿಕೊಂಡು ಬಲಿಷ್ಠ ತಂಡವನ್ನು ಕಟ್ಟುವ ಅವಕಾಶ ಇದೀಗ ಫ್ರಾಂಚೈಸಿಗೆ ಸಿಕ್ಕಿದೆ. ಮೆಗಾ ಹರಾಜು ಆಗಿರುವ ಕಾರಣ ಉತ್ತಮ ಆಟಗಾರರು ಹರಾಜಿನಲ್ಲಿ ಬರುವುದರಿಂದ ಆರ್ ಸಿಬಿಗೆ ಇದು ಉತ್ತಮ ಅವಕಾಶವಾಗಿದೆ.












Click it and Unblock the Notifications