RCB vs KKR: ಮಳೆಯಿಂದ ಪಂದ್ಯ ರದ್ದು; ಟಿಕೆಟ್ ಹಣ ವಾಪಸ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದ್ದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ಟೆಸ್ಟ್ ವಿದಾಯ ಹೇಳಿದ್ದರಿಂದ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಲು ಟೆಸ್ಟ್ ಜೆರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿದ್ದರು. ಆದರೆ ಮಳೆಯಿಂದಾಗಿ ಟಾಸ್ ಕೂಡ ನಡೆಯದೇ ಪಂದ್ಯ ರದ್ದಾಯಿತು.
ಪಂದ್ಯ ರದ್ದಾದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಅಭಿಮಾನಿಗಳಿಗೆ ಟಿಕೆಟ್ ಹಣವನ್ನು ಪಾವತಿ ಮಾಡುವುದಾಗಿ ತಿಳಿಸಿದೆ. "ಮೇ 17, 2025 ರಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಪ್ರತಿಕೂಲ ಹವಾಮಾನದಿಂದಾಗಿ ರದ್ದಾದ ಕಾರಣ, ಎಲ್ಲಾ ಮಾನ್ಯ ಟಿಕೆಟ್ ಹೊಂದಿರುವವರು ಪೂರ್ಣ ಮರುಪಾವತಿಗೆ ಅರ್ಹರಾಗಿದ್ದಾರೆ ಎಂದು ಫ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.

ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸುವ ಅವರ ಮೂಲ ಖಾತೆಗೆ 10 ಕೆಲಸದ ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31 ರೊಳಗೆ ನಿಮಗೆ ಮರುಪಾವತಿ ಸಿಗದಿದ್ದರೆ, ದಯವಿಟ್ಟು ಬುಕಿಂಗ್ ವಿವರಗಳೊಂದಿಗೆ [email protected] ಗೆ ಇಮೇಲ್ ಕಳುಹಿಸಿ ಎಂದು ಆರ್ ಸಿಬಿ ತನ್ನ ಹೇಳಿಕೆಯಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದೆ.
ಹಣ ವಾಪಸ್ ಪಡೆಯಲು ಭೌತಿಕ ಟಿಕೆಟ್ ಹೊಂದಿರುವವರು ತಮ್ಮ ಮೂಲ ಟಿಕೆಟ್ ಅನ್ನು ಅವರು ಟಿಕೆಟ್‌ಗಳನ್ನು ಖರೀದಿಸಿದ ಆಯಾ ಅಧಿಕೃತ ಮೂಲಕ್ಕೆ ನೀಡಬೇಕಾಗುತ್ಯದೆ. ಸಂಪೂರ್ಣ ಟಿಕೆಟ್‌ಗಳಿಗೆ ಮರುಪಾವತಿ ಅನ್ವಯಿಸುವುದಿಲ್ಲ ಎಂದು ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ರ ಒಂದು ವಾರದ ಅಮಾನತುಗೊಂಡ ಕಾರಣ ಮೇ 13 ಮತ್ತು ಮೇ 17 ರಂದು ನಿಗದಿಯಾಗಿದ್ದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ಟಿಕೆಟ್‌ಗಳನ್ನು ಮರುಪಾವತಿ ಮಾಡುವುದಾಗಿ ಆರ್‌ಸಿಬಿ ಘೋಷಿಸಿತ್ತು.
ಒಂದೊಂದು ಅಂಕ ಹಂಚಿಕೆ
ಮಳೆಯಿಂದ ಪಂದ್ಯ ರದ್ದಾಗಿದ್ದರಿಂದ ಆರ್‌ಸಿಬಿ ಮತ್ತು ಕೆಕೆಆರ್ ಎರಡಕ್ಕೂ ತಲಾ ಒಂದು ಅಂಕ ನೀಡಲಾಯಿತು. ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಪ್ಲೇಆಫ್‌ನಲ್ಲಿ ದೃಢಪಡಿಸಿದ ಸ್ಥಾನಕ್ಕೆ ಹತ್ತಿರದಲ್ಲಿದೆ, ಆದರೆ 13 ಪಂದ್ಯಗಳಿಂದ 12 ಅಂಕಗಳೊಂದಿಗೆ ಕೆಕೆಆರ್ ಅಗ್ರ ನಾಲ್ಕು ಸ್ಪರ್ಧೆಗಳಿಂದ ಹೊರಬಿದ್ದಿದೆ.
ಆರ್ ಸಿಬಿ ಮುಂದಿನ ಪಂದ್ಯವನ್ನು ಮೇ 23 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಬೆಂಗಳೂರಿನಲ್ಲೇ ಈ ಪಂದ್ಯ ನಡೆಯಲಿದೆ. ಬಳಿಕ ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಅಂತಿಮ ಲೀಗ್ ಪಂದ್ಯ ಆಡಲು ಲಕ್ನೋಗೆ ಪ್ರಯಾಣಿಸಲಿದೆ.












Click it and Unblock the Notifications