RCB VS CSK: ವಿರಾಟ್ ಕೊಹ್ಲಿ ಮಗಳು ಕ್ರಿಕೆಟ್ ಅಖಾಡಕ್ಕೆ ಬರೋದು ಗ್ಯಾರಂಟಿ!
ಆರ್‌ಸಿಬಿ ತಂಡದ ಮಾಜಿ ಕ್ಯಾಪ್ಟನ್, ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಂಡ್ರೆ ಬೌಲರ್ಸ್ ಎದೆ ನಡುಗುತ್ತೆ. ವಿರಾಟ್ ಕೊಹ್ಲಿಗೆ ಬಾಲ್ ಹಾಕುವಾಗ ಕಾಲು ನಡುಗಿ, ಮೈ ಬೆವರಿ ಹೋಗುತ್ತೆ. ಯಾಕಂದ್ರೆ ಕೊಹ್ಲಿ ಹೊಡೆಯುವ ಒಂದೊಂದು ಶಾಟ್ ಹೀಗೆಯೇ ಪರ್ಫೆಕ್ಟ್ ಆಗಿ ಇರುತ್ತೆ.
ಹೀಗಿದ್ದಾಗ ವಿರಾಟ್ ಕೊಹ್ಲಿಗೆ ಇಬ್ಬರು ಮಕ್ಕಳಿದ್ದು, ಒಂದು ಮಗು ಗಂಡು & ಇನ್ನೊಂದು ಮಗು ಹೆಣ್ಣು ಪಾಪು. ಸಹಜವಾಗೇ ವಿರಾಟ್ ಕೊಹ್ಲಿ ಮಕ್ಕಳು ಕೂಡ, ಕ್ರಿಕೆಟ್ ಆಟಗಾರರೇ ಆಗಬೇಕು ಅನ್ನೋದು ಫ್ಯಾನ್ಸ್ ಆಸೆ. ಈ ಆಸೆಗೆ ಸ್ವತಃ ವಿರಾಟ್ ಕೊಹ್ಲಿ ಈಗ ನೀರೆರಿದ್ದಾರೆ. ಸ್ವತಃ ವಿರಾಟ್ ಕೊಹ್ಲಿ ಅವರೇ ತಮ್ಮ ಮಗಳು ಈ ಚಿಕ್ಕ ವಯಸ್ಸಿನಲ್ಲೇ, ಕ್ರಿಕೆಟ್ ಬ್ಯಾಟ್‌ನ ಹಿಡಿದು ಹೇಗೆಲ್ಲಾ ಸ್ವಿಂಗ್ ಮಾಡ್ತಾಳೆ ಅಂತಾ ಕೊಹ್ಲಿ ತಿಳಿಸಿದ್ದಾರೆ. ಆ ವಿಡಿಯೋ ನೋಡಲು ಮುಂದೆ ಓದಿ.

ಕೊಹ್ಲಿ ಮಗಳು ಕೂಡ ಕ್ರಿಕೆಟರ್?
ವಿರಾಟ್ ಕೊಹ್ಲಿ ಹೆಸರು ಭಾರತದಲ್ಲಿ ಮಾತ್ರವಲ್ಲ, ಪೂರ್ತಿ ಪ್ರಪಂಚದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ಕಳೆದ 10 ವರ್ಷದಿಂದಲೂ ಕ್ರಿಕೆಟ್ ವೃತ್ತಿ ಜೀವನದ ಅತ್ಯಂತ ತುತ್ತ ತುದಿಯಲ್ಲಿ ಇದ್ದಾರೆ. ಹೀಗೆ ತಮ್ಮ ಕ್ರಿಕೆಟ್ ಬದುಕಿನಲ್ಲಿ ಕೊಹ್ಲಿ ಪೀಕ್ ಮುಟ್ಟಿದ ಸಮಯದಲ್ಲೇ ಅವರ ಮಕ್ಕಳ ಬಗ್ಗೆ ಪ್ರಸ್ತಾಪ ಆಗಿದೆ. ವಿರಾಟ್ ಕೊಹ್ಲಿಗೆ ಕೂಡ ತಮ್ಮ ಮಕ್ಕಳು ಭವಿಷ್ಯದಲ್ಲಿ ಕ್ರಿಕೆಟರ್ಸ್ ಆಗಬೇಕು ಎಂಬ ಆಸೆ ಇದೆ. ಈ ಆಸೆಯನ್ನು ಸ್ವತಃ ವಿರಾಟ್ ಕೊಹ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಮಗಳು ಕ್ರಿಕೆಟ್ ಬ್ಯಾಟ್ ಹಿಡಿದು ಹೀಗೆ ಚಿಕ್ಕ ವಯಸ್ಸಲ್ಲೇ ಬ್ಯಾಟ್ ಸ್ವಿಂಗ್ ಮಾಡುವಾಗ ಖುಷಿ ಆಗುತ್ತೆ. ಆದರೆ ಅವಳ ಮೇಲೆ ಯಾವುದೇ ರೀತಿ ಒತ್ತಡ ಹಾಕುವುದಿಲ್ಲ ಎಂದಿದ್ದಾರೆ.
Nags said about Vamika and Akaay, one for WPL and one for IPL😂😭❤️#viratkohli pic.twitter.com/paIO9xme7s
— 𝙒𝙧𝙤𝙜𝙣🥂 (@wrognxvirat) May 17, 2024
ಪುಟ್ಟ ಕೈಗಳಲ್ಲಿ ಬ್ಯಾಟಿಂಗ್!
ಹೀಗೆ ಆರ್‌ಸಿಬಿ ಆ್ಯಂಕರ್ ಮಿಸ್ಟರ್ ನಾಗ್ ಅವರಿಗೆ ನೀಡಿದ ಸಂದರ್ಶನದ ಸಮಯದಲ್ಲಿ ಈ ರೀತಿ ವಿರಾಟ್ ಕೊಹ್ಲಿ ತಮ್ಮ ಮಗಳು ವಮಿಕಾ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಅಪ್ಪನಂತೆ ಮಗಳಿಗೂ ಕ್ರಿಕೆಟ್ ಕ್ರೇಜ್ ಇದ್ದು, ವಮಿಕಾ ಕೊಹ್ಲಿ ತನ್ನ ಪುಟ್ಟ ಪುಟ್ಟ ಕೈಗಳಲ್ಲಿ ಪುಟಾಣಿ ಬ್ಯಾಟ್ ಹಿಡಿದು ಮನೆಯಲ್ಲಿ ಸ್ವಿಂಗ್ ಮಾಡುತ್ತಾ ಆಟ ಆಡುತ್ತಾಳಂತೆ. ಕ್ರಿಕೆಟ್‌ನ ಬಗ್ಗೆ ರಕ್ತಗತವಾಗಿ ವಮಿಕಾಗೆ ಕೂಡ ಕ್ರೇಜ್ ಬಂದೇ ಬಂದಿರುತ್ತೆ ಅನ್ನೋದು ಫ್ಯಾನ್ಸ್ ಮಾತು.
ಮಿಸ್ಟರ್ ನಾಗ್ ಮಾಡಿದ್ರು ಕಿತಾಪತಿ
ಹೀಗಾಗಿ, ಭವಿಷ್ಯದಲ್ಲಿ ವಮಿಕಾ ಕೊಹ್ಲಿ ಕೂಡ ಕ್ರಿಕೆಟರ್ ಆಗಬಹುದು ಎಂಬ ನಿರೀಕ್ಷೆಗಳು ಮೂಡಿವೆ. ಇದೇ ಸಮಯದಲ್ಲಿ ಮಿಸ್ಟರ್ ನಾಗ್ ಕೂಡ, ಕೊಹ್ಲಿ ಕಾಲು ಎಳೆದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನ 'ಆರತಿಗೆ ಒಂದು, ಕೀರ್ತಿಗೆ ಒಂದು' ಎನ್ನುವ ಬದಲು, 'ಒಂದು ಪಾಪು ಐಪಿಎಲ್‌ಗೆ, ಒಂದು ಪಾಪು ಡಬ್ಲ್ಯೂಪಿಎಲ್‌ಗೆ' ಎಂದಿದ್ದಾರೆ ಆ್ಯಂಕರ್ ಮಿಸ್ಟರ್ ನಾಗ್. ಹೀಗೆ ಆ್ಯಂಕರ್ ನಾಗ್ ಮಾತು ಕೇಳಿ ಕೊಹ್ಲಿ ಕೂಡ ನಕ್ಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.












Click it and Unblock the Notifications