RCB: ಆರ್‌ಸಿಬಿಯಲ್ಲಿ ಉಳಿದುಕೊಳ್ಳಲಿರುವ ಆಟಗಾರರು
IPL 2025 RCB Team: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿಯಾಗು ಗೆಲ್ಲುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಇದೀಗ ಎಲ್ಲರ ಚಿತ್ತ 2026ರ ಸೀಸನ್‌ನತ್ತ ನೆಟ್ಟಿದ್ದು, ಪ್ರಾಂಚೈಸಿ ಯಾರನ್ನೆಲ್ಲಾ ತಂಡದಲ್ಲಿ ಉಳಿಸಿಕೊಳ್ಳಲಿದೆ ಎನ್ನುವ ಬಿಗ್ ಅಪ್ಡೇಟ್‌ವೊಂದು ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ 17 ಆವೃತ್ತಿಗಳಿಂದ ಒಂದೇ ಒಂದು ಟ್ರೋಫಿ ಗೆದ್ದಿರಲಿಲ್ಲ. ಆದರೆ 18ನೇ ಆವೃತ್ತಿಯ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆಲ್ಲುವ ಮೂಲಕ ಟ್ರೋಫಿ ಇಲ್ಲ ಎನ್ನುವ ಕೊರಗಿಗೆ ತೆರೆ ಎಳೆಯಿತು. ಇದಕ್ಕೆ ಪ್ರಮುಖ ಕಾರಣ ತಂಡ ಈ ಬಾರಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದು. ಇದೀಗ ಮುಂದಿನ ಸೀಸನ್‌ನಲ್ಲಿ ಯಾವೆಲ್ಲಾ ಆಟಗಾರರನ್ನು ಉಳಿಸಿಕೊಳ್ಳಲಿದ ಎನ್ನುವ ಬಿಗ್ ಅಪ್ಡೇಟ್‌ವೊಂದು ಇಲ್ಲಿದೆ ನೋಡಿ.

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ 18 ವರ್ಷಗಳ ವನವಾಸವನ್ನು ಕೊನೆಗೊಳಿಸಿ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು. ಇನ್ನೂ ಆರ್‌ಸಿಬಿ ಐಪಿಎಲ್ 2026ಕ್ಕೆ 2025ರ ವಿಜೇತ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಕೆಲವರನ್ನು ಮಾತ್ರ ಕೈಬಿಡಲಿದ್ದು, ಉಳಿದಂತೆ ಬಹುತೇಕ ಅವರನ್ನೇ ಉಳಿಸಿಕೊಳ್ಳುವ ಆಲೋಚನೆಯಲ್ಲಿದೆ ಎನ್ನುವ ಮಾಹಿತಿಯಿದೆ.
2025ರ ಆವೃತ್ತಿಯಲ್ಲಿ ಕೆಲವರನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಆಟಗಾರರು ಅಂದುಕೊಂಡಿಂತಕ್ಕಿಂತಲೂ ಉತ್ತಮ ಪ್ರದರ್ಶನ ತೋರಿದ್ದರು. ಈ ಮೂಲಕ ಮುಂದಿನ ಸೀಸನ್‌ಗೂ ಕೂಡ ಇದೇ ತಂಡವನ್ನು ಉಳಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ. ಯಾಕಂದ್ರೆ ಒಬ್ಬರು ಗಾಯವಾಗಿ ಹೊರಗುಳಿದರೆ, ಆ ಸ್ಥಾನ ತುಂಬಲು ಮತ್ತೊಬ್ಬ ಆಟಗಾರ ಆರ್‌ಸಿಬಿಯಲ್ಲಿದ್ದಾರೆ. ಆದ್ದರಿಂದ ತಂಡದಲ್ಲಿ ಹೆಚ್ಚು ಬದಲಾವಣೆಗಳು ಇರುವುದಿಲ್ಲ ಎನ್ನಲಾಗುತ್ತಿದೆ.
ಆರ್‌ಸಿಬಿ ಉಳಿಸಿಕೊಳ್ಳಲು ನಿರ್ಧಾರ ಮಾಡಿರುವ ತಂಡ ತುಂಬಾ ಬಲಿಷ್ಠ ಆಗಿದೆ. ಈಗಾಗಲೇ ಕಳೆದ ಸೀಸನ್‌ನಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್‌ಸಿಬಿ ಟ್ರೋಫಿ ಗೆದ್ದಿದ್ದು, ಮುಂದಿನ ಆವೃತ್ತಿಯಲ್ಲೂ ಉತ್ತಮ ತಂಡದೊಂದಿದೆ ಮತ್ತೆ ಕಪ್ ಗೆಲ್ಲುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಅಷ್ಟರ ಮಟ್ಟಿಗೆ ಬಲಿಷ್ಠ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಂದಿದೆ.
ಮತ್ತೊಂದೆಡೆ ಮುಂದಿನ ಆವೃತ್ತಿಯಿಂದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಐಪಿಎಲ್ ಆಡುವುದು ಅನುಮಾನ. ಅವರು ವಿದಾಯ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಆದರೆ ಇದೀಗ ಇದಕ್ಕೆಲ್ಲಾ ಸ್ಪಷ್ಟನೆ ಸಿಕ್ಕಿದ್ದು, ಮುಂದಿನ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಅವರು ಸದ್ಯ ಯಾವುದೇ ನಿವೃತ್ತಿಯ ಮಾತುಗಳನ್ನು ಆಡಿಲ್ಲ. ಕೊನೆಯವರೆಗೂ ಅವರು ಬೆಂಗಳೂರಿನ ಪರ ಕಣಕ್ಕಿಯಲಿದ್ದಾರೆ ಎನ್ನುವ ಸ್ಪಷ್ಟನೆ ಸಿಕ್ಕಿದೆ.
ಆರ್‌ಸಿಬಿ ಉಳಿಸಿಕೊಳ್ಳುವ ಆಟಗಾರರು
* ರಜತ್ ಪಾಟಿದಾರ್ (ನಾಯಕ)
* ವಿರಾಟ್ ಕೊಹ್ಲಿ
* ಫಿಲ್ ಸಾಲ್ಟ್
* ದೇವದತ್ ಪಡಿಕ್ಕಲ್
* ಜಿತೇಶ್ ಶರ್ಮಾ (ವಿಕೆಟ್ ಕೀಪರ್)
* ಟಿಮ್ ಡೇವಿಡ್
* ರೊಮಾರಿಯೊ ಶೆಫರ್ಡ್
* ಜಾಕೋಬ್ ಬೆಥೆಲ್
* ಕೃನಾಲ್ ಪಾಂಡ್ಯ
* ಜೋಶ್ ಹ್ಯಾಜಲ್‌ವುಡ್
* ಭುವನೇಶ್ವರ್ ಕುಮಾರ್
* ನುವಾನ್ ತುಷಾರ
* ಸುಯಶ್ ಶರ್ಮಾ
* ಸ್ವಸ್ತಿಕ್ ಚಿಕಾರ
* ಮನೋಜ್ ಭಾಂಡಗೆ












Click it and Unblock the Notifications