RCB: ಆರ್‌ಸಿಬಿಯಿಂದ ಈ ಆಟಗಾರರಿಗೆ ಗೇಟ್ ಪಾಸ್..
RCB: ಐಪಿಎಲ್ 2025 ಫೈನಲ್‌ನಲ್ಲಿ ಆರ್‌ಸಿಬಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಮತ್ತೊಂದೆಡೆ, ಇದೀಗ ಮುಂದಿನ ಸೀಸನ್ ಆರಂಭ ಆಗುವ ಮುನ್ನವೇ ಆರ್‌ಸಿಬಿಯಿಂದ ಕೆಲ ಆಟಗಾರರು ಹೊರಬೀಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಯಾರೆಲ್ಲಾ ಔಟ್ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆಲ್ಲುವ ಮೂಲಕ ಟ್ರೋಫಿ ಇಲ್ಲ ಎಂಬ ಕೊರಗಿಗೆ ಅಂತ್ಯವಾಡಿದೆ. ಇದಕ್ಕೆ ಕಾರಣ ಈ ಬಾರಿ ಆರಂಭದಿಂದಲೂ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದು. ಈ ಮೂಲಕ ಆರ್‌ಸಿಬಿ ಬಲಿಷ್ಠ ತಂಡವನ್ನು ಹೊಂದಿದ್ದು, ಎಲ್ಲಾ ಇತರೆ ತಂಡಗಳನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆ ಆಟಗಾರರನ್ನು ಬದಲಿಸುವ ತೀರ್ಮಾನಕ್ಕೆ ಫ್ರಾಂಚೈಸಿ ಬಂದಿಲ್ಲ. ಆದರೆ ಕೆಲವರನ್ನು ಕೈಬಿಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇಷ್ಟು ವರ್ಷ ಆರ್‌ಸಿಬಿ ಸರಿಯಾದ ತಂಡ ಕಟ್ಟುವಲ್ಲಿ ತುಂಬಾ ಗೊಂದಲದಲ್ಲಿ ಇರುತ್ತಿತ್ತು. ಆದರೆ, 2025ರಲ್ಲಿ ಯಾವೆಲ್ಲಾ ಆಟಗಾರರು ತಂಡದಲ್ಲಿ ಇರಬೇಕೆಂಬುದು ಸಾಭೀತಾಗಿದೆ. ಆದ್ದರಿಂದ ತಂಡ ಬದಲಿಸುವ ತೀರ್ಮಾನವನ್ನು ಮಾಡಿಲ್ಲ. ಬದಲಿಗೆ ಕೆಲ ಆಟಗಾರರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ಸೀಸನ್ 18ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್‌ಸಿಬಿ ತಂಡ ಮುಂದಿನ ಆವೃತ್ತಿಗೂ ಮುನ್ನ ಕೆಲ ಆಟಗಾರರನ್ನು ಕೈ ಬಿಡುವ ಸಾಧ್ಯತೆಯದೆ. ಅದರಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಿನಿ ಹರಾಜಿಗೂ ಮುನ್ನ ಕೆಲ ಆಟಗಾರರನ್ನು ಹೊರಗಡೆ ಕಳುಹಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
2025ರ ಐಪಿಎಲ್ನಲ್ಲಿ ಆರ್‌ಸಿಬಿ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಮುಂದಿನ ಸೀಸನ್‌ಗೆ ತಂಡದಲ್ಲಿ ಉಳಿಸಿಕೊಳ್ಳುವುದು ಬಹುತೇಕ ಡೌಟ್ ಎನ್ನಲಾಗುತ್ತಿದೆ. ಯಾಕಂದ್ರೆ, ಆಡಿದ ಪಂದ್ಯಗಳಲ್ಲಿ ಲಿವಿಂಗ್ಸ್ಟೋನ್ ಈ ಬಾರಿ ಕಲೆಹಾಕಿರುವುದು ಕೇವಲ 54 ರನ್ಗಳನ್ನು ಮಾತ್ರವಷ್ಟೇ. ಮತ್ತೊಂದೆಡೆ 5 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಕೇವಲ 2 ವಿಕೆಟ್ ಮಾತ್ರ ಪಡೆದಿರುವುದು. ಆದ್ದರಿಂದ ಇವರು ತಂಡದಿಂದ ಹೊರಕಳುಹಿಸುವುದು ಖಚಿತ ಎನ್ನಲಾಗುತ್ತಿದೆ.
ಯುವ ವೇಗಿ ರಾಸಿಖ್ ಸಲಾಂ ದಾರ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ 6 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೆ, ಈ ಬಾರಿ ಕಣಕ್ಕಿಳಿದ 2 ಪಂದ್ಯಗಳಲ್ಲಿ ಅವರು ನಿರೀಕ್ಷಿದಷ್ಟು ಪ್ರದರ್ಶನ ನೀಡಲಿಲ್ಲ. ಅಲ್ಲದೆ, ಕೇವಲ 1 ವಿಕೆಟ್ ಮಾತ್ರ ತೆಗೆದುಕೊಂಡಿದ್ದಾರೆ. ಆದ್ದರಿಂದ ಇವರನ್ನು ಮಿನಿ ಹರಾಜಿನಲ್ಲಿ ಕೈಬಿಡುವ ಸಾಧ್ಯತೆಯಿದ ಎಂದು ಹೇಳಲಾಗುತ್ತಿದೆ.
ಇನ್ನು ಅಭಿನಂದನ್ ಸಿಂಗ್ ಸಹ ಈ ಸೀಸನ್‌ನಲ್ಲಿ ಆರ್‌ಸಿಬಿ ಪರ ಒಂದು ಪಂದ್ಯವನ್ನೂ ಕೂಡ ಆಡಿಲ್ಲ. ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ. ಆದ್ದರಿಂದ ಮುಂಬರುವ ಸೀಸನ್‌ಗೆ ಅಭಿನಂದನ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ ತುಂಬಾ ಕಡಿಮೆ.
ಯುವ ಆಲ್ರೌಂಡರ್ ಮೋಹಿತ್ ರಾಥಿ ಕೂಡ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. ಅಲ್ಲದೆ, ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಸ್ಥಾನ ಲಭಿಸಿಲ್ಲ. ಮತ್ತೊಂದೆಡೆ, ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದ್ದು, ಈ ಹಿನ್ನೆಕೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.
ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಹಿನ್ನೆಲೆ ಆರ್‌ಸಿಬಿ ನ್ಯೂಝಿಲೆಂಡ್ನ ವಿಕೆಟ್ ಕೀಪರ್ ಟಿಮ್ ಸಿಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ, ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಆಗಿರುವ ಸೈಫರ್ಟ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಇವರೆಲ್ಲರನ್ನು ಕೂಡ ಆರ್‌ಸಿಬಿ ಕೈಬಿಡಲಿದ್ದು, ಮುಂದಿನ ಸೀಸನ್‌ಗೆ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ ಉತ್ತಮ ತಂಡ ಹೊಂದಿರುವ ಆರ್‌ಸಿಬಿಗೆ ಯಾವುದೇ ಹೊಸ ಆಟಗಾರರ ಅವಶ್ಯಕತೆಯಿಲ್ಲ. 18ನೇ ಸೀಸನ್‌ನಂತೆ 2026ರ ಸೀಸನ್‌ನಲ್ಲೂ ಆರ್‌ಸಿಬಿ ಟ್ರೋಫಿ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅಂತಹ ಆಟಗಾರರನ್ನು ತಂಡ ಒಳಗೊಂಡಿದೆ.
ಆರ್‌ಸಿಬಿಯಿಂದ ಯಾರೆಲ್ಲಾ ಔಟ್?
* ಲಿಯಾಮ್ ಲಿವಿಂಗ್ಸ್ಟೋನ್
* ರಾಸಿಖ್ ಸಲಾಂ ದಾರ್
* ಅಭಿನಂದನ್ ಸಿಂಗ್
* ಮೋಹಿತ್ ರಾಥಿ
* ಬ್ಲೆಸಿಂಗ್ ಮುಝರಬಾನಿ
* ಟಿಮ್ ಸಿಫರ್ಟ್












Click it and Unblock the Notifications