RCB Vs KKR: ಐಪಿಎಲ್ ಉದ್ಘಾನಾ ಪಂದ್ಯ ಆರಂಭಕ್ಕೂ ಮುನ್ನ 100 ಅಡಿ ತೇರು ಏರಿದ ಅಭಿಮಾನಿಗಳು: ವಿಡಿಯೋ ವೈರಲ್
RCB Fans: ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್‌ಸಿಬಿ ಮಾತ್ರ. ಇದುವರೆಗೂ ನಡೆದಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲದಿದ್ದರೂ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ, ಬದಲಾಗಿ ದುಪ್ಪಟ್ಟಾಗುತ್ತಲಿದೆ. ಅಲ್ಲದೆ, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದಕ್ಕೆ ಸಾಕ್ಷಿ ವಿಡಿಯೋವೊಂದು ಇಲ್ಲಿದೆ ನೋಡಿ.
ಇದುವರೆಗೂ ನಡೆದಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಇನ್ನು ಇಂದು (ಮಾರ್ಚ್ 22) ಕೆಲವೇ ಕ್ಷಣಗಳಲ್ಲಿ 18ನೇ ಆವೃತ್ತಿ ಆರಂಭ ಆಗಲಿದ್ದು, ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನೆವೇ ಆರ್‌ಸಿಬಿ ಅಭಿಮಾನಿಗಳಿಂದ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯ ಕೇಳಿಬರುತ್ತಿವೆ. ಅಲ್ಲದೆ, ಅಭಿಮಾನಿ ಬಳಗವೊಂದು ಆರ್‌ಸಿಬಿ ಟೀಶರ್ಟ್ ಧರಿಸಿ ಸುಮಾರು 100 ಅಡಿಯ ತೇರನ್ನು ಏರಿ ಕನ್ನಡದ ಬಾವುಟ ಹಾಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಇಂದಿನ ಐಪಿಎಲ್‌ನ 18ನೇ ಆವೃತ್ತಿಯ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹಿನ್ನೆಲೆ ಆರ್‌ಸಿಬಿ ಅಭಿಮಾ ಬಳಗವೊಂದು ನೂರು ಅಡಿ ತೇರು ಏರಿ ಸಂಭ್ರಮಾಚರಣೆ ಮಾಡಿದ್ದು, ಭಾರೀ ವೈರಲ್ ಆಗುತ್ತಿದೆ.
ವೀರಾ ಬಲ್ಲಾಳ ಎಂಬುವವರು ಈ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದುವರೆಗೂ 49.1K ಜನ ವೀಕ್ಷಣೆ ಮಾಡಿದ್ದಾರೆ. 2.9K ಮೆಚ್ಚುಗಳು, 31 ಕಾಮೆಂಟ್‌ಗಳು ಬಂದಿವೆ. ಐಪಿಎಲ್ ಹಣಾಹಣಿಗೂ ಮುನ್ನ ಆರ್‌ಸಿಬಿ ಅಭಿಮಾನಿಗಳು ತಮ್ಮ ಅಭಿಮಾನ ಎಂತಹದ್ದು ಅನ್ನುವುದನ್ನು ಸಾರಿದ್ದಾರೆ. ಹೀಗೆ ಎಲ್ಲಾ ತಂಡಗಳಿಗಿಂತಲೂ ಆರ್‌ಸಿಬಿ ತಂಡದ ಅಭಿಮಾನಿಗಳ ಕ್ರೇಜ್ ತುಸು ಜೋರಾಗಿಯೇ ಇರುತ್ತದೆ.
ಸುಮಾರು 100 ಅಡಿಗೂ ಎತ್ತರದ ಮದ್ದೂರಮ್ಮ ದೇವಿಯ ಜಾತ್ರೆ ತೇರಿನ ಮೇಲೆ ಆರ್‌ಸಿಬಿ ಅಭಿಮಾನಿಗಳು ನಿಂತು ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಲತಾಣದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಕೇವಲ 15 ಕಿಲೋ ಮೀಟರ್ ದೂರದಲ್ಲಿ ಈ ಜಾತ್ರೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಹುಸ್ಕೂರು ಗ್ರಾಮಸ್ಥರು ಸೂಕ್ತ ದಿನವನ್ನು ನಿಗದಿಪಡಿಸಿ ಈ ರಥೋತ್ಸವವನ್ನು ಮಾಡುತ್ತಾರೆ.
bruhh pic.twitter.com/ZEDa3HMUYD
— ವೀರ ಬಲ್ಲಾಳ ೫ (@VeeraBallalaV) March 21, 2025
ಜನ, ಜಾನುವಾರುಗಳಿಗೆ ಕಾಯಿಲೆಗಳು ಬರದಿರುವಂತೆ ಗ್ರಾಮ ದೇವತೆಯ ರಕ್ಷಣೆಯನ್ನು ಕೋರಿ, ಹಿಂದಿನಿಂದಲೂ ಆಚರಣೆಯಲ್ಲಿರುವ ಈ ಜಾತ್ರೆ, ಇಂದಿಗೂ ನಡೆದುಕೊಂಡು ಬರುತ್ತಿದೆ. ಹಿರಿಯರು ಹೇಳುವಂತೆ ಈ ಜಾತ್ರೆ ಕನ್ನಡನಾಡಿನ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆ ಈ ಬಾರಿ ಮಾರ್ಚ್ 21ರಿಂದ 25ರವರೆಗೆ ನಡೆಯಲಿದೆ. 20ರಿಂದ 25 ಅಂತಸ್ತುಗಳಿರುವ 100 ಅಡಿಗೂ ಹೆಚ್ಚು ಎತ್ತರದ ತೇರಿನ ಮೇಲೆ ನಿಂತು ಆರ್‌ಸಿಬಿ ಅಭಿಮಾನಿಗಳು ವಿಡಿಯೋ ಮಾಡಿ ಗಮನ ಸೆಳೆದಿದ್ದಾರೆ.












Click it and Unblock the Notifications