ಆರ್‌ಸಿಬಿ ತಂಡದಿಂದ ವಿರಾಟ್ ಕೊಹ್ಲಿ ಔಟ್? ಶ್ರೇಯಾಂಕಾ ಪಾಟೀಲ್ ಇನ್?

ಆರ್‌ಸಿಬಿ ಬೆಂಗಳೂರು ತಂಡಕ್ಕೆ ದೇಶದಲ್ಲೇ ಅತಿಹೆಚ್ಚು ಅಭಿಮಾನಿಗಳು ಇದ್ದು, ಆರ್‌ಸಿಬಿಗೆ ಭರ್ಜರಿ ಬೆಂಬಲ ನೀಡುತ್ತಾ ಬಂದಿದ್ದಾರೆ. ಆದ್ರೆ ಕಳೆದ 16 ವರ್ಷಗಳಿಂದಲೂ ಕಪ್ ಗೆದ್ದೇ ಗೆಲ್ಲುತ್ತೇವೆ ಅಂತಾ ಪಣತೊಟ್ಟಿರುವ ಆರ್‌ಸಿಬಿ ತಂಡ ಈವರೆಗೂ ಕಪ್ ಮಾತ್ರ ಗೆದ್ದೇ ಇಲ್ಲ. ಇಂತಹ ಸಮಯದಲ್ಲೇ ಶ್ರೇಯಾಂಕಾ ಪಾಟೀಲ್ & ವಿರಾಟ್ ಕೊಹ್ಲಿ ಅವರ ಎಂಟ್ರಿ ಕುರಿತು ಸಂಚಲನ ಸೃಷ್ಟಿಸುವ ಹೇಳಿಕೆ ಕೇಳಿಬಂದಿದೆ.

ಮೊದಲೇ ಹೇಳಿದಂತೆ ಆರ್‌ಸಿಬಿ ಬೆಂಗಳೂರು ತಂಡವು 16 ವರ್ಷಗಳಿಂದಲೂ ಕಪ್ ಗೆದ್ದಿಲ್ಲ, ಆದ್ರೆ 17ನೇ ವರ್ಷಕ್ಕೆ ಕಪ್ ಗೆದ್ದೇ ಗೆಲ್ಲುತ್ತಾರೆ ಅಂತಾ ಅಭಿಮಾನಿಗಳು ನಿರೀಕ್ಷೆಯನ್ನ ಇಟ್ಟು ಕಾಯುತ್ತಿದ್ದರು. ಹೀಗಿದ್ದಾಗ 2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನ ಪಡೆದಿದೆ. ಈ ಸಮಯದಲ್ಲೇ ಆರ್‌ಸಿಬಿ ತಂಡದಿಂದ ವಿರಾಟ್ ಕೊಹ್ಲಿ ಔಟ್? ಎಂಬ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಶ್ರೇಯಾಂಕಾ ಪಾಟೀಲ್ ಅವರು ಆರ್‌ಸಿಬಿ, ಪುರುಷರ ತಂಡಕ್ಕೆ ಬಂದು ಸೇರುತ್ತಾರೆ, ಆ ಮೂಲಕ ಕಪ್ ಗೆಲ್ಲಿಸುತ್ತಾರೆ ಅಂತಿದ್ದಾರೆ ಇವರು!

RCB Fans Are Demanding That Shreyanka Patil Should Come To The Mens Team

ಕೊಹ್ಲಿ ಮೀರಿಸುತ್ತಾರಾ ಶ್ರೇಯಾಂಕಾ?

ಅಭಿಮಾನಿಗಳು, ಶ್ರೇಯಾಂಕಾ ಪಾಟೀಲ್ ಅವರನ್ನು ಲೇಡಿ ಕೊಹ್ಲಿ ಅಂತಾನೆ ಕರೆಯುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ಗೆ ಬಂದಾಗ ಹೇಗೆ ಆಂಗ್ರಿ ಯಂಗ್ ಮ್ಯಾನ್ ಆಗಿದ್ರೋ ಅದೇ ರೀತಿ ಶ್ರೇಯಾಂಕಾ ಪಾಟೀಲ್ ಕೂಡ ಮಿಂಚುತ್ತಿದ್ದಾರೆ. ಮೈದಾನದ ಅಖಾಡದಲ್ಲಿ ಕ್ರಿಕೆಟ್ ಜೊತೆ ಎದುರಾಳಿಗಳ ಮೈಂಡ್ ಗೇಮ್ ಎದುರಿಸುವಲ್ಲೂ, ಶ್ರೇಯಾಂಕಾ ಪಾಟೀಲ್ ಎಕ್ಸ್‌ಪರ್ಟ್ ಆಗುತ್ತಿದ್ದಾರೆ. ಹೀಗೆ ಚಿಕ್ಕ ಹುಡುಗಿ ಮಾಡುತ್ತಿರುವ ದೊಡ್ಡ ಸಾಧನೆ ಗಮನ ಸೆಳೆಯುತ್ತಿದೆ.

ಅಭಿಮಾನಿಗಳ ತೀವ್ರ ಆಕ್ರೋಶ!

ಮತ್ತೊಂದು ಕಡೆ, ಶ್ರೇಯಾಂಕಾ ಪಾಟೀಲ್ ಭವಿಷ್ಯದ ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಿದ್ದಾರೆ ಅಭಿಮಾನಿಗಳು! ಇದರಿಂದ ಆರ್‌ಸಿಬಿ ಅಭಿಮಾನಿಗಳು ಕೂಡ ಚರ್ಚೆ ಆರಂಭಿಸಿದ್ದು ಕೊಹ್ಲಿ ಅವರ ಮೇಲೆ ಒತ್ತಡವನ್ನ ಹಾಕಬೇಡಿ. ಅವರನ್ನ ಬೇಕಾದರೆ ಆರ್‌ಸಿಬಿಯಿಂದ ಹೊರಗಿಡಿ. ಹಾಗೇ ಶ್ರೇಯಾಂಕಾ ಪಾಟೀಲ್ ಅವರ ಸ್ಪಿನ್ ಬೌಲಿಂಗ್ ಉತ್ತಮವಾಗಿದೆ. ಅವರಿಗೆ ಆರ್‌ಸಿಬಿ ಹುಡುಗರ ತಂಡದಲ್ಲಿ ಅವಕಾಶವನ್ನು ನೀಡಿ ಎನ್ನುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್. ಯಾಕಂದ್ರೆ ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅವರು 2024ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಆಟ ಆಡುತ್ತಿದ್ದಾರೆ. ಆದರೂ ಮಿಕ್ಕವರು ಔಟ್ ಆಗಿ ಗೂಡು ಸೇರುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಆಕ್ರೋಶವು ಮೊಳಗಿದೆ.

ಆರ್‌ಸಿಬಿ ಲೀಗ್ ಹಂತದಲ್ಲೇ ಔಟ್?

2024ರ ಐಪಿಎಲ್ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಈಗ ಕೊನೆಯ ಸ್ಥಾನ ಪಡೆದಿದೆ. ಹೀಗಾಗಿ ಈ ಬಾರಿ ಆರ್‌ಸಿಬಿ ತಂಡ ಲೀಗ್ ಹಂತದಲ್ಲೇ ಹೊರ ಬೀಳುವ ಸಾಧ್ಯತೆ ದಟ್ಟವಾಗಿದ್ದು, ಅಭಿಮಾನಿಗಳು ಕೂಡ ಈಗಾಗಲೇ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಸಾಲು, ಸಾಲು ಸೋಲು ಕಂಡ ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ. ಹೀಗೆ ಪ್ರತಿ ಪಂದ್ಯಕ್ಕೂ ಕೋಟಿ ಕೋಟಿ ಅಭಿಮಾನಿಗಳು ಆರ್‌ಸಿಬಿ ಬೆನ್ನಿಗೆ ನಿಲ್ಲುತ್ತಿದ್ದಾರೆ.

ಈ ಹಂತದಲ್ಲಿಯೂ ಆರ್‌ಸಿಬಿ ತಂಡ ಮತ್ತೆ ಕಂಬ್ಯಾಕ್ ಮಾಡುತ್ತಿಲ್ಲ. ಅದರಲ್ಲೂ ಆರ್‌ಸಿಬಿ ತಂಡಕ್ಕೆ ಆಯ್ಕೆ ಮಾಡಿರುವ ಆಟಗಾರರ ಬಗ್ಗೆ ಕೂಡ ಹೊರಗೆ ಅಸಮಾಧಾನ ಭುಗಿಲೆದ್ದಿದೆ. ಮುಂದೆ ತಿಕ್ಕಾಟ ಸಾಕಷ್ಟು ದೊಡ್ಡದಾಗುವ ಹಂತಕ್ಕೂ ತಲುಪುತ್ತಿದೆ. ಇದೇ ಸಮಯದಲ್ಲೇ ಆರ್‌ಸಿಬಿ ಹೊಸ ಅಧ್ಯಾಯದ ಬಗ್ಗೆ ಕೂಡ ಚರ್ಚೆ ನಡೆದಿದೆ. ಇದರ ಅರ್ಥ ಏನು? ಇದರ ಅರ್ಥ ಸೋಲುವುದಾ? ಅಂತಾನೂ ಆರ್‌ಸಿಬಿ ಅಭಿಮಾನಿಗಳು 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಡೈಲಾಗ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

'ಟಗರು ಪುಟ್ಟಿ' ಶ್ರೇಯಾಂಕಾ ಪಾಟೀಲ್

ಶ್ರೇಯಾಂಕಾ ಪಾಟೀಲ್ ಈಗ ಹೊಸ ನ್ಯಾಷನಲ್ ಕ್ರಷ್ ಆಗಿದ್ದು ಕೋಟ್ಯಂತರ ಅಭಿಮಾನಿ ಬಳಗ ಅವರ ಆಟವನ್ನು ಮೆಚ್ಚಿಕೊಂಡಿದೆ. ಅದರಲ್ಲೂ 2024ರ ಡಬ್ಲ್ಯೂಪಿಎಲ್ (WPL Cup) ಕಪ್‌ನ ಗೆದ್ದು, ಆರ್‌ಸಿಬಿ ಕಪ್ ಗೆಲ್ಲುವಂತೆ ಮಾಡುವಲ್ಲೂ ಶ್ರೇಯಾಂಕಾ ಪಾಟೀಲ್ ಅವರದ್ದು ಮುಖ್ಯ ಪಾತ್ರವಾಗಿತ್ತು. ಹೀಗೆ ಶ್ರೇಯಾಂಕಾ ಪಾಟೀಲ್ ಆಟಕ್ಕೆ ಮೆಚ್ಚಿ ಕನ್ನಡಿಗರು ಈಗ 'ಟಗರು ಪುಟ್ಟಿ' ಎಂಬ ಬಿರುದನ್ನು ನೀಡಿದ್ದಾರೆ. ಮತ್ತೊಂದು ಕಡೆ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ತಂಡ ಅಂದರೆ ಆರ್‌ಸಿಬಿ ಹುಡುಗರ ತಂಡಕ್ಕೆ ಬರಲಿ ಎಂಬ ಬೇಡಿಕೆಯನ್ನೂ ಇಡುತ್ತಿದ್ದಾರೆ. ಹೀಗೆ ಮತ್ತೊಂದು ಬಾರಿ ಶ್ರೇಯಾಂಕಾ ಪಾಟೀಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+