ಹಲೋ.. ಆರ್‌ಸಿಬಿ ಹೊಸ ಅಧ್ಯಾಯ ಅಂದ್ರೆ ಇದೇನಾ?

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಆರ್‌ಸಿಬಿ ಬೆಂಗಳೂರು ತಂಡ ಐಪಿಎಲ್ ಟೂರ್ನಿ ಮಾತ್ರವಲ್ಲ, ಕನ್ನಡಿಗರ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಾಗಿ ಆರ್‌ಸಿಬಿ ಫ್ಯಾನ್ಸ್, ಈ ತಂಡವನ್ನ ತಮ್ಮ ರಕ್ತದ ಕಣ ಕಣದಲ್ಲೂ ಬೆರೆಸಿಕೊಂಡಿದ್ದಾರೆ. ಹೀಗಿದ್ದಾಗಲೂ ನಮ್ಮ ಆರ್‌ಸಿಬಿ ತಂಡ ಕಪ್ ಗೆದ್ದೇ ಇಲ್ಲ, ಇದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ ತರುತ್ತಿದೆ. ಹಾಗೇ ವಿರಾಟ್ ಕೊಹ್ಲಿ ಅವರು 2024ರ ಐಪಿಎಲ್ ಟೂರ್ನಿ ಉದ್ಘಾಟನೆ ವೇಳೆ ಹೇಳಿದ್ದ, 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಡೈಲಾಗ್ ಬಗ್ಗೆ ಚರ್ಚೆ ಆರಂಭವಾಗಿದೆ.

ಆರ್‌ಸಿಬಿ ತಂಡ ಜಾಗತಿಕ ಮಟ್ಟದಲ್ಲಿ ಕೂಡ ಗುರುತಿಸಿಕೊಂಡಿದ್ದು, ನಮ್ಮ ಆರ್‌ಸಿಬಿ ಬಗ್ಗೆ ಹೊರ ದೇಶದಲ್ಲೂ ಹೆಮ್ಮೆ ಇದೆ. ಆದ್ರೆ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಟೀಂ ಹೀನಾಯವಾಗಿ ಪ್ರದರ್ಶನ ನೀಡುತ್ತಿದ್ದು, ಸಾಲು ಸಾಲು ಸೋಲು ಕಾಣುತ್ತಿದೆ. ಹೀಗಾಗಿಯೆ ಫ್ಯಾನ್ಸ್ ಕೂಡ ರೊಚ್ಚಿಗೆದ್ದು, ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಅವರ ವಿಚಾರ ಕೂಡ ಚರ್ಚೆಗೆ ಬರುತ್ತಿದೆ. ಹಾಗಾದರೆ, ವಿರಾಟ್ ಕೊಹ್ಲಿ ಅವರ ಬಗ್ಗೆ ಅಭಿಮಾನಿಗಳು ಹೇಳುತ್ತಿರುವುದು ಏನು? ಮುಂದೆ ಓದಿ.

RCB Fans Are Asking The Meaning Of Hosa Adhyaya

'ಇದು ಆರ್‌ಸಿಬಿಯ ಹೊಸ ಅಧ್ಯಾಯ'

'ಆರ್‌ಸಿಬಿ' ಅಭಿಮಾನಿಗಳು ನಮ್ಮ ಬೆಂಗಳೂರು ತಂಡಕ್ಕೆ ಅದೆಷ್ಟು ಸಪೋರ್ಟ್ ಮಾಡುತ್ತಾರೆ, ಹೇಗೆಲ್ಲಾ ಬೆಂಬಲ ನೀಡುತ್ತಾರೆ ಅಂತಾ ಜಗತ್ತಿಗೆ ಗೊತ್ತು. ಆರ್‌ಸಿಬಿ ಫ್ಯಾನ್ಸ್ ಜೋಶ್ ನೋಡಿದ ದೊಡ್ಡ ದೊಡ್ಡ ಕ್ರಿಕೆಟ್ ಆಟಗಾರರು ಕೂಡ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ ನಮ್ಮ ಆರ್‌ಸಿಬಿ ಮಾತ್ರ ಗೆಲುವು ಸಾಧಿಸುತ್ತಿಲ್ಲ. ಅದರಲ್ಲೂ ಈ ಬಾರಿಯ ಐಪಿಎಲ್ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೇ ಸ್ಥಾನದಲ್ಲಿ ಇದೆ ನಮ್ಮ ಆರ್‌ಸಿಬಿ ತಂಡ, ಈ ಕಾರಣಕ್ಕೆ ಆರ್‌ಸಿಬಿ ಅಭಿಮಾನಿಗಳು 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಎಂಬ ವಿರಾಟ್ ಕೊಹ್ಲಿ ಅವರ ಡೈಲಾಗ್ ಬಗ್ಗೆ ಚರ್ಚೆ ಆರಂಭಿಸಿದ್ದಾರೆ.

ಆರ್‌ಸಿಬಿ ಲೀಗ್ ಹಂತದಲ್ಲೇ ಔಟ್?

2024ರ ಐಪಿಎಲ್ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಈಗ ಕೊನೆಯ ಸ್ಥಾನ ಪಡೆದಿದೆ. ಹೀಗಾಗಿ ಈ ಬಾರಿ ಆರ್‌ಸಿಬಿ ತಂಡ ಲೀಗ್ ಹಂತದಲ್ಲೇ ಹೊರ ಬೀಳುವ ಸಾಧ್ಯತೆ ದಟ್ಟವಾಗಿದ್ದು, ಅಭಿಮಾನಿಗಳು ಕೂಡ ಈಗಾಗಲೇ ಬೇಸರವನ್ನ ವ್ಯಕ್ತಪಡಿಸುತ್ತಿದ್ದಾರೆ. ಸಾಲು, ಸಾಲು ಸೋಲು ಕಂಡ ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳು ಧೈರ್ಯ ತುಂಬುತ್ತಿದ್ದಾರೆ. ಹೀಗೆ ಪ್ರತಿ ಪಂದ್ಯಕ್ಕೂ ಕೋಟಿ ಕೋಟಿ ಅಭಿಮಾನಿಗಳು ಆರ್‌ಸಿಬಿ ಬೆನ್ನಿಗೆ ನಿಲ್ಲುತ್ತಿದ್ದಾರೆ.

ಈ ಹಂತದಲ್ಲಿಯೂ ಆರ್‌ಸಿಬಿ ತಂಡ ಮತ್ತೆ ಕಂಬ್ಯಾಕ್ ಮಾಡುತ್ತಿಲ್ಲ. ಅದರಲ್ಲೂ ಆರ್‌ಸಿಬಿ ತಂಡಕ್ಕೆ ಆಯ್ಕೆ ಮಾಡಿರುವ ಆಟಗಾರರ ಬಗ್ಗೆ ಕೂಡ ಹೊರಗೆ ಅಸಮಾಧಾನ ಭುಗಿಲೆದ್ದಿದೆ. ಮುಂದೆ ತಿಕ್ಕಾಟ ಸಾಕಷ್ಟು ದೊಡ್ಡದಾಗುವ ಹಂತಕ್ಕೂ ತಲುಪುತ್ತಿದೆ. ಇದೇ ಸಮಯದಲ್ಲೇ ಆರ್‌ಸಿಬಿ ಹೊಸ ಅಧ್ಯಾಯದ ಬಗ್ಗೆ ಕೂಡ ಚರ್ಚೆ ನಡೆದಿದೆ. ಇದರ ಅರ್ಥ ಏನು? ಇದರ ಅರ್ಥ ಸೋಲುವುದಾ? ಅಂತಾನೂ ಆರ್‌ಸಿಬಿ ಅಭಿಮಾನಿಗಳು 'ಇದು ಆರ್‌ಸಿಬಿಯ ಹೊಸ ಅಧ್ಯಾಯ' ಡೈಲಾಗ್ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಕೊಹ್ಲಿ ಮೀರಿಸುತ್ತಾರಾ ಶ್ರೇಯಾಂಕಾ?

ಅಭಿಮಾನಿಗಳು, ಶ್ರೇಯಾಂಕಾ ಪಾಟೀಲ್ ಅವರನ್ನು ಲೇಡಿ ಕೊಹ್ಲಿ ಅಂತಾನೆ ಕರೆಯುತ್ತಿದ್ದಾರೆ. ಯಾಕಂದ್ರೆ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ಗೆ ಬಂದಾಗ ಹೇಗೆ ಆಂಗ್ರಿ ಯಂಗ್ ಮ್ಯಾನ್ ಆಗಿದ್ರೋ ಅದೇ ರೀತಿ ಶ್ರೇಯಾಂಕಾ ಪಾಟೀಲ್ ಕೂಡ ಮಿಂಚುತ್ತಿದ್ದಾರೆ. ಮೈದಾನದ ಅಖಾಡದಲ್ಲಿ ಕ್ರಿಕೆಟ್ ಜೊತೆ ಎದುರಾಳಿಗಳ ಮೈಂಡ್ ಗೇಮ್ ಎದುರಿಸುವಲ್ಲೂ, ಶ್ರೇಯಾಂಕಾ ಪಾಟೀಲ್ ಎಕ್ಸ್‌ಪರ್ಟ್ ಆಗುತ್ತಿದ್ದಾರೆ. ಹೀಗೆ ಚಿಕ್ಕ ಹುಡುಗಿ ಮಾಡುತ್ತಿರುವ ದೊಡ್ಡ ಸಾಧನೆ ಗಮನ ಸೆಳೆಯುತ್ತಿದೆ.

ಅಭಿಮಾನಿಗಳ ತೀವ್ರ ಆಕ್ರೋಶ!

ಮತ್ತೊಂದು ಕಡೆ, ಶ್ರೇಯಾಂಕಾ ಪಾಟೀಲ್ ಭವಿಷ್ಯದ ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತಿದ್ದಾರೆ ಅಭಿಮಾನಿಗಳು! ಇದರಿಂದ ಆರ್‌ಸಿಬಿ ಅಭಿಮಾನಿಗಳು ಕೂಡ ಚರ್ಚೆ ಆರಂಭಿಸಿದ್ದು ಕೊಹ್ಲಿ ಅವರ ಮೇಲೆ ಒತ್ತಡವನ್ನ ಹಾಕಬೇಡಿ. ಅವರನ್ನ ಬೇಕಾದರೆ ಆರ್‌ಸಿಬಿಯಿಂದ ಹೊರಗಿಡಿ. ಹಾಗೇ ಶ್ರೇಯಾಂಕಾ ಪಾಟೀಲ್ ಅವರ ಸ್ಪಿನ್ ಬೌಲಿಂಗ್ ಉತ್ತಮವಾಗಿದೆ. ಅವರಿಗೆ ಆರ್‌ಸಿಬಿ ಹುಡುಗರ ತಂಡದಲ್ಲಿ ಅವಕಾಶವನ್ನು ನೀಡಿ ಎನ್ನುತ್ತಿದ್ದಾರೆ ಆರ್‌ಸಿಬಿ ಫ್ಯಾನ್ಸ್. ಯಾಕಂದ್ರೆ ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅವರು 2024ರ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಆಟ ಆಡುತ್ತಿದ್ದಾರೆ. ಆದರೂ ಮಿಕ್ಕವರು ಔಟ್ ಆಗಿ ಗೂಡು ಸೇರುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಆಕ್ರೋಶವು ಮೊಳಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+