Bengaluru Stampede Tragedy: ಕೊಹ್ಲಿ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಭಿಮಾನಿಗಳಿಗೆ ವಿಶೇಷ ಸಂದೇಶ

RCB Rajat Patidar: ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದ ಹಿನ್ನೆಲೆ ಜೂನ್‌ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿತ್ತು. ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಮಂದಿ ಸಾವನ್ನಪ್ಪಿದ್ದರು. ಈ ದುರಂತ ಸಂಬಂಧ ಇದೀಗ ವಿರಾಟ್‌ ಕೊಹ್ಲಿ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್‌ ಪಾಟಿದಾರ್ ಸಹ ಇನ್ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ಭಾವುಕ ಸಂದೇಶವನ್ನು ರವಾನಿಸಿದ್ದಾರೆ. ಹಾಗಾದ್ರೆ, ಅದರಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಮೊದಲ ಟ್ರೋಫಿಗೆ ಮುತ್ತಿಟ್ಟಿತು. ಆದರೆ, ಮಾರನೇ ದಿನ ಜೂನ್‌ 4ರಂದು ಬೆಂಗಳೂರಿನಲ್ಲಿ ವಿಜಯೋತ್ಸವ ಇಟ್ಟುಕೊಳ್ಳಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟಿದ್ದರು. ಈ ದುರಂತ ಆರ್‌ಸಿಬಿ ಪಾಲಿಗೆ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟಿತು. ಇನ್ನೂ ಇತ್ತೀಚೆಗಷ್ಟೇ ಆರ್‌ಸಿಬಿ ಪ್ರಾಂಚೈಸಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25,00,000 ರೂಪಾಯಿ ಆರ್ಥಿಕ ನೆರವನ್ನು ಸಹ ಘೋಷಣೆ ಮಾಡಿತು.

RCB Captain Rajat Patidar s Emotional Instagram Post on Bengaluru Stampede Tragedy

ಇನ್ನೂ ಇಂದು (ಸೆಪ್ಟೆಂಬರ್ 3) ಇನ್ಸ್ಟಾಗ್ರಾಂ ಖಾತೆ ಮೂಲಕ ವಿರಾಟ್‌ ಕೊಹ್ಲಿ ಬಳಿಕ, ಆರ್‌ಸಿಬಿ ನಾಯಕ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಇದನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. "ಪ್ರತಿ ಸಾರಿ ನಾನು ಆರ್‌ಸಿಬಿ ಪರ ಮೈದಾನಕ್ಕಿಳಿದಾಗ, ಉತ್ಸಾಹ ಇರುತ್ತದೆ. ಪಂದ್ಯ ಮುಗಿದ ನಂತರವೂ ಆ ಉತ್ಸಾಹ ಹಾಗೆ ಇರುತ್ತದೆ. ಅದು ನಿಮ್ಮಿಂದ," ಎಂದು ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ.

"ನಿಮ್ಮ ಪ್ರೀತಿ, ನಂಬಿಕೆ ಮತ್ತು ಅಚಲ ಬೆಂಬಲದಿಂದ ಸದಾ ಉತ್ಸಾದಿಂದ ತಂಡ ಇರುತ್ತದೆ. ನೀವು ಯಾವಾಗಲೂ ನಮ್ಮ ಜೊತೆಯಲ್ಲಿದ್ದೀರಿ. ಹೃದಯಪೂರ್ವಕವಾಗಿ ಹೇಳಬೇಕಾದರೆ, ನಾವು ಕೂಡ ನಿಮ್ಮ ಜೊತೆಯಲ್ಲಿದ್ದೇವೆ ಎಂಬುದನ್ನು ತಿಳಿಸಿಕೊಳ್ಳಲು ಬಯಸುತ್ತೇನೆ. ನೀವು ಎಲ್ಲರೂ ನನ್ನ ಚಿಂತನೆ ಮತ್ತು ಪ್ರಾರ್ಥನೆಗಳಲ್ಲಿ ಇದ್ದೀರಿ. ನಿಮ್ಮ ಪ್ರೋತ್ಸಾಹವೇ ತಂಡಕ್ಕೆ ಆನೆ ಬಲ," ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಆರ್‌ಸಿಬಿ ಇನ್ಸ್ಟಾದಲ್ಲಿ ಹಂಚಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+