Ranji Trophy: ವಿದರ್ಭ ವಿರುದ್ಧ ಸೋತ ಕರ್ನಾಟಕ; ದೊಡ್ಡ ಗಣೇಶ್ ಟೀಕೆ
ನಾಗ್ಪುರದ ವಿಸಿಎಸ್‌ಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ ಕರ್ನಾಟಕ ತಂಡ ಸೋಲನುಭವಿಸಿದೆ. 127 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ವಿದರ್ಭ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 460 ರನ್‌ಗಳ ಬೃಹತ್ ಮೊತ್ತ ಕಲೆಹಾಕುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಇದಕ್ಕುತ್ತರವಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 286 ರನ್‌ಗಳಿಗೆ ಆಲೌಟ್ ಆಯಿತು.

ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ವಿದರ್ಭ ತಂಡವನ್ನು 196 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ ಗೆಲುವಿನ ಅವಕಾಶ ಪಡೆದುಕೊಂಡಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತ್ತು. ಐದನೇ ಕರ್ನಾಟಕ ಗೆಲ್ಲಲ್ಲು ಇನ್ನೂ 286 ರನ್‌ಗಳ ಅಗತ್ಯವಿತ್ತು.
ಕೊನೆಯ ದಿನ ಬ್ಯಾಟಿಂಗ್ ವಿಫಲ
ಒಂದು ವಿಕೆಟ್‌ಗೆ 103 ರನ್ ಗಳಿಸಿ ಆತ್ಮವಿಶ್ವಾಸದಿಂದಲೇ 5ನೇ ದಿನದ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತು. 127 ರನ್ ಗಳಿಸುವಷ್ಟರಲ್ಲಿ ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಕಳೆದುಕೊಂಡಿತು. ಮಯಾಂಕ್ 70 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅನೀಶ್ ಕೆವಿ 40 ರನ್ ಗಳಿಸಿದ್ದಾಗ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಿಕಿನ್ ಜೋಸ್ ಶೂನ್ಯಕ್ಕೆ ಔಟಾದರೆ. ಮನಿಶ್ ಪಾಂಡೆ 1 ರನ್ ಗಳಿಸಿ ಔಟಾಗುವ ಮೂಲಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಹಾರ್ದಿಕ್ ರಾಜ್ 13 ರನ್, ಶ್ರೀನಿವಾಸ್ ಶರತ್ 6 ರನ್, ಧೀರಜ್ ಗೌಡ 2 ರನ್ ಗಳಿಸಿ ಔಟಾದರೆ. ವಿಜಯ್ ಕುಮಾರ್ ವೈಶಾಖ್ 34 ರನ್, ವಿಧ್ವತ್ ಕಾವೇರಪ್ಪ 25 ರನ್ ಗಳಿಸಿದರು. ಆದರೂ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ 243 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ದೊಡ್ಡ ಗಣೇಶ್ ಟೀಕೆ
ಕರ್ನಾಟಕ ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಟೀಕೆ ಮಾಡಿದ್ದಾರೆ. ಕರ್ನಾಟಕ ತಂಡಕ್ಕೆ ಮೇಲುಗೈ ಸಾಧಿಸುವ ಅವಕಾಶ ಇದ್ದರೂ, ಬ್ಯಾಟರ್ ಗಳು ಮಾಡಿದ ತಪ್ಪಿನಿಂದ ಸೋಲಾಗಿದೆ ಎಂದು ಹೇಳಿದ್ದಾರೆ.
ಟ್ವೀಟ್ ಮಾಡಿರುವ ಅವರು, ಎರಡು ರನೌಟ್‌ಗಳು ಕರ್ನಾಟಕ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾದವು. ಕರ್ನಾಟಕದ ಆಟಗಾರರು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬೇಕಿತ್ತು ಎಂದು ಹೇಳಿದ್ದಾರೆ.












Click it and Unblock the Notifications