ಕೋಚ್ ಸ್ಥಾನದಿಂದ ಇಳಿಯುತ್ತಿದ್ದಂತೆ ಎಲ್ಲರನ್ನು ಭಾವುಕರನ್ನಾಗಿಸಿದ ಕನ್ನಡಿಗ ರಾಹುಲ್ ದ್ರಾವಿಡ್
ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿರುವ ಭಾರತ, ಸದ್ಯ ಹೈ ಜೋಶ್‌ನಲ್ಲಿದೆ. ತಂಡದ ಆಟಗಾರರು ಇನ್ನು ಬಾರ್ಬಡೋಸ್‌ನಲ್ಲಿ ಇದ್ದು, ಮೋಜಿನಲ್ಲಿ ತೊಡಿಗಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾದ ಹಿರಿಯ ಆಟಗಾರರು ಹಾಗೂ ಕೋಚ್ ತಂಡಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೇ ಬೆನ್ನಲ್ಲೆ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರ ಅವಧಿ ಸಹ ಇದೇ ಸರಣಿಯಿಂದ ಮುಕ್ತಾಯವಾಗಲಿದೆ. ತಮ್ಮ ಕೊನೆಯ ಸರಣಿಯಲ್ಲಿ ರಾಹುಲ್ ದ್ರಾವಿಡ್ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಟೀಮ್ ಇಂಡಿಯಾ ಪ್ರತಿ ಸದಸ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಗುಣಗಾನ ಮಾಡಿದರು. ರಾಹುಲ್ ದ್ರಾವಿಡ್ ಕಾರ್ಯವನ್ನು ಸ್ಮರಿಸಿದರು. ಅಲ್ಲದೆ ದ್ರಾವಿಡ್ ಅವರನ್ನು ಎಲ್ಲ ಆಟಗಾರರು ಸೇರಿ ಗಾಳಿಯಲ್ಲಿ ತೂರಿ ತಮ್ಮ ಧನ್ಯತೆ ಮೆರೆದರು. ದ್ರಾವಿಡ್ ತಮ್ಮ ವಿದಾಯ ಭಾಷಣವನ್ನು ಮಾಡಿದ್ದಾರೆ.
ಐತಿಹಾಸಿಕ ಗೆಲುವಿನ ನಂತರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ಪೂರ್ತಿದಾಯಕ ಭಾಷಣ ಮಾಡಿದರು. ರಾಹುಲ್ ದ್ರಾವಿಡ್ ತಮ್ಮ ಆಟಗಾರರು ಮತ್ತು ಅವರ ಹೋರಾಟದ ಮನೋಭಾವ ಹೊಗಳಿದ್ದಾರೆ. ಈ ಎರಡೂ ಲಕ್ಷಣಗಳು ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಕಂಡು ಬಂದಿತು. ಆಟಗಾರರು ತಮ್ಮ ವೃತ್ತಿಜೀವನದ ದಾಖಲೆಗಳನ್ನು ಮರೆತು ಬಿಡಬಹುದು, ಆದರೆ ಇಂತಹ ಕ್ಷಣಗಳು ಅವರಿಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ ಎಂದಿದ್ದಾರೆ.
ಈ ಗೆಲುವನ್ನು ವರ್ಣಿಸಲು ನನ್ನ ಪದಗಳಿಲ್ಲ. ನಾನು ವಿಶ್ವ ವಿಜೇತ ತಂಡದ ಭಾಗವಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ. ಪ್ರತಿಯೊಬ್ಬ ಆಟಗಾರ ಈ ಕ್ಷಣವನ್ನು ತನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ನೀವು ಈ ಟೂರ್ನಿಯಲ್ಲಿ ಹೇಗೆ ಆಡಿದ್ದೀರಿ ಎಂಬುದಕ್ಕಿಂತ ಹೆಚ್ಚಾಗಿ, ಈ ತಂಡದ ಭಾಗವಾಗಿದ್ದಿರಿ ಎಂದು ನೀವು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತೀರಿ ಎಂದು ರಾಹುಲ್ ದ್ರಾವಿಡ್ ಟ್ವಿಟರ್‌ನಲ್ಲಿ ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ರೋಹಿತ್ ಪಡೆ ಟೀಕೆಗೆ ಗುರಿಯಾಗಿತ್ತು. ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್‌ಗೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದರು. ಈ ಯೋಜನೆ ಎಲ್ಲ ಕೈ ಹಿಡಿದಿವೆ.
ನಾನು ಈ ತಂಡದ ಬಗ್ಗೆ ಹೆಚ್ಚೇನು ಹೇಳಲು ಸಾಧ್ಯವೇ ಇಲ್ಲ. ಇಡೀ ತಂಡ ಪ್ರಸಕ್ತ ಸರಣಿಯಲ್ಲಿ ಆಡಿದ ರೀತಿ. ನೀವು ಹೋರಾಡಿದ ರೀತಿ, ನಾವು ತಂಡವಾಗಿ ಕೆಲಸ ಮಾಡಿದ ರೀತಿ ಮತ್ತು ತಾಳ್ಮೆಯಿಂದಿದ್ದ ರೀತಿ..., ಅವರು ಶ್ಲಾಘನೀಯ ಎಂದು ತಿಳಿಸಿದ್ದಾರೆ.
𝗧𝗵𝗲 𝘂𝗻𝗳𝗼𝗿𝗴𝗲𝘁𝘁𝗮𝗯𝗹𝗲 𝗙𝗮𝗿𝗲-𝗪𝗔𝗟𝗟! 🫡
— BCCI (@BCCI) July 2, 2024
The sacrifices, the commitment, the comeback 🏆
📽️ #TeamIndia Head Coach Rahul Dravid's emotional dressing room speech in Barbados 👌👌 #T20WorldCup pic.twitter.com/vVUMfTZWbc
'ಇದು ನಿಮ್ಮ ಕ್ಷಣ ಸ್ನೇಹಿತರೇ... ನೆನಪಿರಲಿ, ಇದು ಯಾವುದೇ ಒಬ್ಬ ವ್ಯಕ್ತಿಯದ್ದಲ್ಲ, ತಂಡಕ್ಕೆ ಸಂಬಂಧಿಸಿದ್ದು. ನಾವು ತಂಡವಾಗಿ ಗೆದ್ದಿದ್ದೇವೆ. ಕಳೆದ ತಿಂಗಳು ನಾವು ಏನೇ ಮಾಡಿದರೂ ಅದನ್ನೆಲ್ಲ ತಂಡವಾಗಿ ಮಾಡಿದ್ದೇವೆ. ಇದು ನಮ್ಮೆಲ್ಲರಿಗೂ ಸಂಬಂಧಿಸಿದೆ, ಯಾವುದೇ ಒಬ್ಬ ವ್ಯಕ್ತಿಗಲ್ಲ ಎಂದು ಹೋಗುವ ಮುನ್ನ ತಮ್ಮ ಮೇಸ್ಟರ್ ಧಾಟಿಯಲ್ಲೇ ಕಿವಿ ಮಾತನ್ನು ಸಹ ಹೇಳಿದ್ದಾರೆ.












Click it and Unblock the Notifications