Rachin Ravindra: 2019ರಲ್ಲಿ ಪಬ್‌ನಲ್ಲಿ ಕೂತು ಪಂದ್ಯ ನೋಡಿದ್ದವ ಈಗ ನ್ಯೂಜಿಲೆಂಡ್ ಪಾಲಿನ ಹೀರೋ!
ರಚಿನ್ ರವೀಂದ್ರ 2023ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಪಾಲಿಗೆ ಹೀರೋ ಆಗಿದ್ದಾರೆ. ಬೆಂಗಳೂರಿನ ಜೊತೆ ವಿಶೇಷ ನಂಟು ಹೊಂದಿರುವ ರಚಿನ್ ರವೀಂದ್ರ ಈಗ ಬೆಂಗಳೂರು ಹುಡುಗನೇ ಎನ್ನುವಂತೆ ಬೆಂಬಲ ಸಿಗುತ್ತಿದೆ.
ರಚಿನ್ ರವೀಂದ್ರ ಅವರ ಸಾಧನೆ ಹಿಂದೆ ಅವರ ತಂದೆಯ ಅಪಾರ ಶ್ರಮವಿದೆ. ತಂದೆ ಕೂಡ ಕ್ರಿಕೆಟರ್ ಆಗಿದ್ದವರು, ಬೆಂಗಳೂರಿನಲ್ಲಿ ಹಲವು ಕ್ಲಬ್‌ಗಳ ಪರವಾಗಿ ಆಡಿದ್ದರು, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿಯಾಗಿದ್ದ ರಚಿನ್ ತಂದೆ ರವಿ ಕೃಷ್ಣಮೂರ್ತಿ ಮಗನಿಗೆ ರಾಹುಲ್ ಸಚಿನ್ ಹೆಸರಿನಿಂದ ಸ್ಫೂರ್ತಿ ಪಡೆದು ರಚಿನ್ ರವೀಂದ್ರ ಎಂದು ಹೆಸರಿಟ್ಟಿದ್ದರು.

ರಚಿನ್ ರವೀಂದ್ರ ವೆಲ್ಲಿಂಗ್ಟ್‌ನಲ್ಲಿ ಜನಿಸಿದರು, ಅವರನ್ನು ದೊಡ್ಡ ಕ್ರಿಕೆಟ್ ಆಗಿ ಮಾಡಬೇಕೆನ್ನುವ ಕನಸು ಹೊತ್ತಿದ್ದರು. ಅದಕ್ಕಾಗಿ ತಾವೇ ಸ್ವತಃ ಮಗನಿಗೆ ತರಬೇತಿ ನೀಡಿದರು. ಭಾರತಕ್ಕೂ ಕರೆದುಕೊಂಡು ಬಂದು ಕ್ರಿಕೆಟ್ ಆಡಿಸಿದ್ದರು.
2019ರಲ್ಲಿ ಬೆಂಗಳೂರಿನಲ್ಲಿದ್ದ ರಚಿನ್
2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ನ್ಯೂಜಿಲೆಂಡ್ ಎಂದಿಗೂ ಮರೆಯಲಾಗದು, ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಘಾತಕಾರಿ ಸೋಲನುಭವಿಸುವ ಸೋಲನುಭವಿಸಿತ್ತು, ಈ ಪಂದ್ಯದ ಫಲಿತಾಂಶ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.
ಅಂದು ಫೈನಲ್ ಪಂದ್ಯವನ್ನು ರಚಿನ್ ರವೀಂದ್ರ ಬೆಂಗಳೂರಿನ ಪಬ್ ಒಂದರಲ್ಲಿ ಕೂತು ವೀಕ್ಷಣೆ ಮಾಡಿದ್ದರು. ತಮ್ಮ ತಂದೆಯ ಕ್ರಿಕೆಟ್ ಕ್ಲಬ್‌ನೊಂದಿಗೆ ಭಾರತಕ್ಕೆ ವಾರ್ಷಿಕ ಪ್ರವಾಸದಲ್ಲಿದ್ದ ಅವರು ಬೆಂಗಳೂರಿನ ಕ್ಲಬ್‌ನಲ್ಲಿ ಕೂತು ಫೈನಲ್ ಅನ್ನು ವೀಕ್ಷಿಸಿದ ರೋಮಾಂಚನಕಾರಿ ಅನುಭವವು ಇನ್ನೂ ಅವರ ನೆನಪಿನಲ್ಲಿ ಉಳಿದಿದೆ.
ಅಂದು ನ್ಯೂಜಿಲೆಂಡ್ ತಂಡ ಸೋತಿದ್ದಕ್ಕೆ ರಚಿನ್ ರವೀಂದ್ರ ತೀವ್ರ ಬೇಸರಗೊಂಡಿದ್ದರು. ತಮ್ಮ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವುದು ಅವರ ಕನಸಾಗಿದೆ, ಅದಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಿದ ಅವರು ನ್ಯೂಜಿಲೆಂಡ್ ತಂಡಕ್ಕೆ ಆಯ್ಕೆಯಾದರು.
"ನನ್ನ ಪೋಷಕರು ಬೆಂಗಳೂರಿನಿಂದ ಬಂದಿದ್ದಾರೆ ಮತ್ತು ಇಲ್ಲಿ ವಿಶ್ವಕಪ್ ಆಡುವುದು ಅದ್ಭುತವಾಗಿದೆ" ಎಂದು ರಚಿನ್ ರವೀಂದ್ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಮೊದಲು ಹೇಳಿದ್ದರು.
ಈ ಬಾರಿ ವಿಶ್ವಕಪ್‌ನ ಹೀರೋ
ಅಂದು ತಮ್ಮ ತಂಡ ಫೈನಲ್‌ನಲ್ಲಿ ಸೋತಿದ್ದಕ್ಕೆ ಬೇಸರಗೊಂಡಿದ್ದ ಅವರು ಈ ಬಾರಿ ತಮ್ಮ ತಂಡವನ್ನು ಗೆಲ್ಲಿಸುವ ಅವಕಾಶ ಹೊಂದಿದ್ದಾರೆ. ಈ ಬಾರಿ ವಿಶ್ವಕಪ್‌ನಲ್ಲಿ ಆಕಸ್ಮಿಕವಾಗಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದರು.
ಸದ್ಯ ಏಕದಿನ ವಿಶ್ವಕಪ್‌ನಲ್ಲಿ ಮೂರು ಶತಕ ಎರಡು ಅರ್ಧಶತಕ ಗಳಿಸಿರುವ ಅವರು ಪ್ರಸ್ತುತ ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿದ್ದಾರೆ. ನ್ಯೂಜಿಲೆಂಡ್ ಬಹುತೇಕ ಸೆಮಿಫೈನಲ್ ಪ್ರವೇಶಿಸಿದ್ದು, ಭಾರತವನ್ನು ಎದುರಿಸಲಿದೆ.
ರಚಿನ್ ರವೀಂದ್ರ ಭಾರತೀಯ ಮೂಲದವರಾಗಿದ್ದರೂ ನ್ಯೂಜಿಲೆಂಡ್‌ಗಾಗಿ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಕನಸು ಹೊಂದಿದ್ದಾರೆ. ನ್ಯೂಜಿಲೆಂಡ್ ಪ್ರಶಸ್ತಿ ಗೆಲ್ಲುತ್ತದೋ ಇಲ್ಲವೋ ಆದರೆ ರಚಿನ್ ರವೀಂದ್ರ ಮಾತ್ರ ತಮ್ಮ ಪ್ರದರ್ಶನದಿಂದ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ರಚಿನ್ ರವೀಂದ್ರ ಹಲವು ದಾಖಲೆಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದ್ದಾರೆ.












Click it and Unblock the Notifications