R Ashwin: 96 ರನ್‌ಗಳ ಹೋರಾಟ ವ್ಯರ್ಥ; ಸೋಲಿನ ಬಳಿಕ ಕಣ್ಣೀರಾದ ವೈಭವ್ ಬಗ್ಗೆ ಅಶ್ವಿನ್ ಭಾವುಕ ಮಾತು

ಐಪಿಎಲ್ 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಹೊರ ಬಿದ್ದಿದೆ. ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ 15ನೇ ವಯಸ್ಸಿನಲ್ಲಿ ಸಿಡಿಸಿದ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ವ್ಯರ್ಥಗೊಂಡಂತಾಗಿದೆ. ಈ ಸೋಲಿನಿಂದ 15 ವರ್ಷದ ಸೂರ್ಯವಂಶಿ ತೀವ್ರ ನಿರಾಶೆಗೆ ಒಳಗಾಗಿದ್ದರು. ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಅಮೋಘ ಜೊತೆಯಾಟದೊಂದಿಗೆ ಇನ್ನೂ ಎಂಟು ಎಸೆತಗಳು ಬಾಕಿ ಇರುವಾಗಲೇ ಗುಜರಾತ್ ತಂಡ 215 ರನ್‌ಗಳ ಗುರಿಯನ್ನು ತಲುಪಿದರು.

ಪಂದ್ಯದ ನಂತರ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟಿಸಿದ ವೀಡಿಯೊದಲ್ಲಿ, ವೈಭವ್ ಸೂರ್ಯವಂಶಿ ಮೇಲೆ ಈ ಸೋಲು ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿದ್ದಾರೆ. ಅಶ್ವಿನ್ ಆಟದ ತಂತ್ರಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ, ವೈಭವ್ ಅನುಭವಿಸಿದ ಭಾವನಾತ್ಮಕ ನೋವಿನ ಮೇಲೆ ಅವರ ಮಾತುಗಳು ಕೇಂದ್ರೀಕೃತಗೊಂಡಿವೆ. ಗೆಲುವಿಗಾಗಿ ಆ ಯುವ ಆಟಗಾರ ತನ್ನೆಲ್ಲಾ ಪ್ರಯತ್ನವನ್ನೂ ಸುರಿದಿದ್ದಾನೆ ಎಂದು ಅಶ್ವಿನ್ ಎದುರಾಳಿ ಬ್ಯಾಟರ್ ಸಾಮರ್ಥ್ಯವನ್ನು ಬಣ್ಣಿಸಿದ್ದಾರೆ.

R Ashwin

ಸೋಲಿನ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಭಾವನಾತ್ಮಕ ಸ್ಥಿತಿ ಮತ್ತು ಮನಸ್ಥಿತಿ ಅಶ್ವಿನ್ ಅವರು ಎತ್ತಿ ತೋರಿಸಿದರು. ಪಂದ್ಯದ ನಂತರ ಸೂರ್ಯವಂಶಿ ಅವರ ದೈಹಿಕ ಭಾಷೆ ಎಲ್ಲವನ್ನೂ ಹೇಳುತ್ತಿತ್ತು ಎಂದು ಅಶ್ವಿನ್ ಅಭಿಪ್ರಾಯಪಟ್ಟರು. "ಪಂದ್ಯದ ನಂತರ ಅವನ ಮುಖವನ್ನು ನೋಡಿದರೆ, ಭಾರಿ ನಿರಾಶೆ ಸ್ಪಷ್ಟವಾಗಿ ಕಾಣುತ್ತಿತ್ತು. ಈ 15 ವರ್ಷದ ಹುಡುಗ ಇನ್ನೂ ಚಿಕ್ಕವನಾದರೂ, ಅವನ ಮನಸ್ಸಿನಲ್ಲಿ ಯಾವಾಗಲೂ ತಂಡಕ್ಕೆ ಗೆಲುವು ತಂದುಕೊಡುವ ಆಲೋಚನೆಯೇ ಇರುತ್ತದೆ ಎಂದು ಅಶ್ವಿನ್ ಹೇಳಿದರು.

RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಉಚಿತ ಪ್ರಯಾಣ!, BMRCL ಸ್ಪಷ್ಟನೆ ಇಲ್ಲಿದೆ
RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಉಚಿತ ಪ್ರಯಾಣ!, BMRCL ಸ್ಪಷ್ಟನೆ ಇಲ್ಲಿದೆ

ಸೂರ್ಯವಂಶಿ ಈಗಾಗಲೇ ಪ್ರಬುದ್ಧ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ವೇದಿಕೆಯನ್ನು ಕೇವಲ ಪ್ರದರ್ಶನವಾಗಿ ನೋಡದೆ, ಜವಾಬ್ದಾರಿಯಾಗಿ ಅವರು ಸ್ವೀಕರಿಸಿದ್ದಾರೆ. ವಿಶೇಷವಾಗಿ ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಅವರು ಎಲ್ಲ ಪ್ರಯತ್ನಪೂರ್ವವಾಗಿ ಆಟವಾಡಿದ್ದಾರೆ. ಒತ್ತಡದ ನಾಕೌಟ್ ಪಂದ್ಯದಲ್ಲಿ, ಮುನ್ನೂರಕ್ಕೂ ಮೀರಿದ ಮೊತ್ತವನ್ನು ತಲುಪಿಸುವ ಈ ಶತಕದ ಸಮೀಪದ ಇನ್ನಿಂಗ್ಸ್, ನಿಖರವಾದ ಆಕ್ರಮಣ ಮತ್ತು ದೃಢ ಸಂಕಲ್ಪದಿಂದ ಮೂಡಿ ಬಂದಿತ್ತು ಎಂದು ಅಶ್ವಿನ್ ವಿವರಿಸಿದ್ದಾರೆ.

ಪಂದ್ಯ ಸೋತಿದ್ದಕ್ಕೆ ವೈಭವ್ ತೀವ್ರ ಬೇಸರ

ಪಂದ್ಯದ ಸೋಲಿನ ಬಳಿಕ ವೈಭವ್ ಸೂರ್ಯವಂಶಿ ತೀವ್ರ ದುಃಖಿತರಾದ, ಬೇಸರಗೊಂಡ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆಟಗಾರರಾದ ರವೀಂದ್ರ ಜಡೇಜಾ, ಸಾಯಿ ಸುದರ್ಶನ್ ಮತ್ತು ರಿಯಾನ್ ಪರಾಗ್ ಅವರಂತಹ ಆಟಗಾರರ ಮಧ್ಯ ವೈಭವ್ ಅವರ ಭಾವನಾತ್ಮಕ ಪ್ರತಿಕ್ರಿಯೆಗಳು ನೆಟ್ಟಿಗರ ಗಮನ ಸೆಳೆಯಿತು. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಆಧಾರ ಸ್ತಂಭವಾಗಿದ್ದರೂ, ತಂಡದ ಇತರೆ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡಲು ವಿಫಲರಾದರು ಎಂದು ಅಶ್ವಿನ್ ಅಭಿಪ್ರಾಯಪಟ್ಟರು.

ಅಶ್ವಿನ್ ಪ್ರಕಾರ, ರವೀಂದ್ರ ಜಡೇಜಾ ಮತ್ತು ಡೊನೊವನ್ ಫೆರೆರಾ ಮಾತ್ರ ಬ್ಯಾಟಿಂಗ್‌ನಲ್ಲಿ ಅರ್ಥಪೂರ್ಣ ಬೆಂಬಲ ನೀಡಲು ಸಾಧ್ಯವಾಯಿತು. ವೈಭವ್ ಸೂರ್ಯವಂಶಿ ಅವರ 96 ರನ್‌ಗಳಿಲ್ಲದಿದ್ದರೆ, ರಾಜಸ್ಥಾನ್ ರಾಯಲ್ಸ್ ಸ್ಪರ್ಧಾತ್ಮಕ ಗುರಿಯನ್ನು ತಲುಪಲು ಆಟ ಮಧ್ಯವೇ ವಿಫಲವಾದಂತೆ ಕಂಡು ಬಂತು. ವೈಭವ್ ಸೂರ್ಯವಂಶಿ 96 ರನ್ ಗಳಿಸಿದರೆ, ದಸುನ್ ಶಾನಕಾ 9 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು, ಇದು ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಉದಾಹರಣೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಒಂದಾನೊಂದು ಕಾಲದಲ್ಲಿ ರಾಜಸ್ಥಾನ್ ರಾಯಲ್ಸ್ ತನ್ನ ತಂಡವಾಗಿತ್ತು ಎಂಬುದನ್ನು ಅಶ್ವಿನ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಅವರ ಈ ಹಿಂದಿನ ಒಡನಾಟವು ತಂಡದ ಪ್ರದರ್ಶನದ ಬಗ್ಗೆ ಅವರ ವಿಮರ್ಶೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿದೆ. ಈ ಫ್ರಾಂಚೈಸಿಯ ಮಾಜಿ ಆಟಗಾರನಾಗಿ, ಆರಂಭಿಕ ವಿಕೆಟ್‌ಗಳ ಪತನದಿಂದ ಹಿಡಿದು ಅಂತಿಮ ಓವರ್‌ಗಳವರೆಗೆ ತಂಡ ಎಲ್ಲಾ ವಿಭಾಗಗಳಲ್ಲಿ ಹಿಂದುಳಿದಿತ್ತು ಎಂದು ಹೇಳಿದರು. ಸೂರ್ಯವಂಶಿ ಅವರ ಅಸಾಧಾರಣ ಪ್ರದರ್ಶನದ ಹೊರತಾಗಿಯೂ, ತಂಡವು ಎಂದಿಗೂ ಹಿಡಿತ ಸಾಧಿಸಿದಂತೆ ಕಾಣಲಿಲ್ಲ.

ಅಶ್ವಿನ್, ರಾಜಸ್ಥಾನ್ ರಾಯಲ್ಸ್ ವಿಕೆಟ್‌ಗಳು ಒಂದರ ನಂತರ ಉರುಳಿದವು. ಸತ್ಯ ಹೇಳಬೇಕೆಂದರೆ, ಆರಂಭದಿಂದ ಕೊನೆಯವರೆಗೂ ರಾಜಸ್ಥಾನ್ ರಾಯಲ್ಸ್ ಪಂದ್ಯದಲ್ಲಿ ಇರಲಿಲ್ಲ. ಅವರು ಆಟದಲ್ಲಿ ಇರಲೇ ಇಲ್ಲ. ಯಶಸ್ವಿ ಜೈಸ್ವಾಲ್ ಔಟ್ ಆದರು, ಧ್ರುವ್ ಜುರೆಲ್ ವಿಕೇಟ್ ಪತನವಾಯಿತು. ರಿಯಾನ್ ಪರಾಗ್ ಔಟಾದರು...ದಸುನ್ ಶಾನಕಾ ಅವರು 9 ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಿದ್ದಾರೆ, ಈ ಸಮಯದಲ್ಲಿ ಅವರು ಎರಡು ಎಸೆತಗಳನ್ನು ಬಿಟ್ಟಿದ್ದಾರೆ. ಆದರೆ ಯಾರೋಬ್ಬರು ಆಟಗಾರ ಸೂರ್ಯವಂಶಿ ಅವರಿಗೆ ಬೆಂಬಲ ನೀಡಲಿಲ್ಲ" ಎಂದು ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಪ್ರದರ್ಶನವನ್ನು ಟೀಕಿಸಿದರು.

ಗುಜರಾತ್‌ನ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಗಿಲ್ ಮತ್ತು ಸುದರ್ಶನ್ ಅವರ ಪಾಲುದಾರಿಕೆಯು ಶಾಂತವಾಗಿ ಗುರಿಯನ್ನು ತಲುಪುವಂತೆ ಮಾಡಿತು. ಇದುವೇ ನಿರ್ಣಾಯಕ ವ್ಯತ್ಯಾಸಕ್ಕೆ ಕಾರಣವಾಯಿತು ಎಂದು ಅಶ್ವಿನ್ ತಮ್ಮ ಪ್ರತಿಕ್ರಿಯೆಗಳಲ್ಲಿ ಒತ್ತಿ ಹೇಳಿದರು. ರಾಜಸ್ಥಾನ್ ರಾಯಲ್ಸ್ ಸೋಲು, ಸೂರ್ಯವಂಶಿ ಬೇಸರದೊಂದಿಗೆ ರಾತ್ರಿ ಕೊನೆಗೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+