ಭೀಕರ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರಾದ ಭಾರತದ ಮಾಜಿ ಕ್ರಿಕೆಟಿಗ

ಮಂಗಳವಾರ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಮೀರತ್‌ನಲ್ಲಿರುವ ಆಯುಕ್ತರ ನಿವಾಸದ ಬಳಿ ವೇಗವಾಗಿ ಬಂದ ಕ್ಯಾಂಟರ್ ಭಾರತದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರು ಜಖಂಗೊಂಡಿದ್ದು ಪ್ರವೀಣ್ ಕುಮಾರ್ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕಾಗಿಮಿಸಿ ಅಪಘಾತಕ್ಕೆ ಕಾರಣವಾದ ಕ್ಯಾಂಟರ್ ಚಾಲಕನನ್ನು ಬಂಧಿಸಿದ್ದಾರೆ. ಬಾಗ್ಪತ್ ರಸ್ತೆಯ ಮುಲ್ತಾನ್ ನಗರದ ನಿವಾಸಿ ಪ್ರವೀಣ್ ಕುಮಾರ್ ಅವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಲ್ಯಾಂಡ್ ರೋವರ್ ಡಿಫೆಂಡರ್ ವಾಹನದಲ್ಲಿ ಪಾಂಡವ ನಗರದಿಂದ ಬರುತ್ತಿದ್ದರು. ಅಪಘಾತವಾದ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಜೊತೆ ಅವರ ಮಗ ಕೂಡ ಕಾರಿನಲ್ಲಿದ್ದರು.

Praveen Kumar, Former Indian Cricketer, Miraculously Escapes Tragic Car Accident

ಆಯುಕ್ತರ ನಿವಾಸದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ವಾಹನಕ್ಕೆ ಹಾನಿಯಾಗಿದ್ದು, ಪ್ರವೀಣ್ ಮತ್ತು ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ನಂತರ, ಅಲ್ಲಿ ನೆರೆದಿದ್ದ ಜನರು ಕ್ಯಾಂಟರ್ ಚಾಲಕನನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸಿವಿಲ್ ಲೈನ್ ಠಾಣೆ ಪೊಲೀಸರು ಸ್ಥಳಕ್ಕಾಗಿಮಿಸಿ, ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಗಿದೆ ಎಂದು ನಗರ ಎಸ್ಪಿ ಪಿಯೂಷ್ ಕುಮಾರ್ ತಿಳಿಸಿದ್ದಾರೆ. ಅಪಘಾತದಲ್ಲಿ ಪ್ರವೀಣ್ ಮತ್ತು ಅವರ ಪುತ್ರ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

2007ರಲ್ಲೂ ಅಪಘಾತದಲ್ಲಿ ಪಾರಾಗಿದ್ದ ಪ್ರವೀಣ್ ಕುಮಾರ್

ಕ್ಯಾಂಟರ್ ಚಾಲಕನು ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡದ ಆರೋಪವನ್ನು ಎದುರಿಸಲಿದ್ದಾನೆ. ಕ್ಯಾಂಟರ್ ಚಾಲಕನೇ ಟ್ರಾಫಿಕ್ ನಿಯಮ ಮೀರಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಯಮಗಳನ್ನು ಮೀರಿದ್ದಕ್ಕಾಗಿ ಟ್ಯಾಂಕರ್ ಚಾಲಕನಿಗೆ ಶಿಕ್ಷೆ ಕೂಡ ಆಗಲಿದೆ.

ಇನ್ನು ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಅವರು ಅಪಘಾತದಲ್ಲಿ ಪಾರಾಗಿರುವುದು ಇದೇ ಮೊದಲಲ್ಲ. 2007ರಲ್ಲಿ ಕೂಡ ಅವರು ಅಪಘಾತದಲ್ಲಿ ಅದೃಷ್ಟವಶಾತ್ ಪಾರಾಗಿದ್ದರು. ಭಾರತದ ಮಾಜಿ ವೇಗಿ ಮೀರತ್‌ನಲ್ಲಿ ಅವರ ಮನೆಗೆ ಮರಳಲು ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ತೆರೆದ ಜೀಪ್‌ನಿಂದ ಬಿದ್ದಿದ್ದರು.

ಭಾರತ ತಂಡದ ಪರವಾಗಿ 4 ವರ್ಷ ಆಡಿರುವ ಪ್ರವೀಣ್

ಪ್ರವೀಣ್ ಕುಮಾರ್ ಅವರು 4 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕಾಗಿ ಆಡಿದ್ದಾರೆ. 2007ರಿಂದ 2011ರ ವರೆಗೆ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದರು. 68 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು 77 ವಿಕೆಟ್‌ಗಳನ್ನು ಪಡೆದಿದ್ದಾರೆ. 6 ಟೆಸ್ಟ್ ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಮಿಂಚಿದ್ದರು. ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 8 ವಿಕೆಟ್ ಪಡೆದಿದ್ದಾರೆ.

ಆರ್ ಸಿಬಿ ಪರವಾಗಿ ಆಡಿದ್ದ ವೇಗಿ

ಪ್ರವೀಣ್ ಕುಮಾರ್ ಐಪಿಎಲ್‌ನಲ್ಲೂ ಮಿಂಚು ಹರಿಸಿದ್ದರು. 2008ರಿಂದ 2010ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದ್ದರೆ, 2011-13 ರವರೆಗೆ ಪಂಜಾಬ್ ಕಿಂಗ್ಸ್ (ಕಿಂಗ್ಸ್ ಇಲೆವೆನ್ ಪಂಜಾಬ್), 2014 ರಲ್ಲಿ ಮುಂಬೈ ಇಂಡಿಯನ್ಸ್, 2015ರಲ್ಲಿ ಸನ್‌ರೈಸರ್ಸ್ ಹೈದರಾಬಾದ್, 2016-17ರಲ್ಲಿ ಗುಜರಾತ್ ಲಯನ್ಸ್ ಪರವಾಗಿ ಆಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+