WPL 2025: ಈ ಬಾರಿ ಹರಾಜಿನ ದುಬಾರಿ ಆಟಗಾರರು

ಮಹಿಳಾ ಪ್ರೀಮಿಯರ್ ಲೀಗ್ 2025ರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. 120 ಆಟಗಾರರು ಹರಾಜು ಪಟ್ಟಿಯಲ್ಲಿದ್ದರು. ಆಟಗಾರರು ಮಾತ್ರ ವಿವಿಧ ತಂಡಗಳನ್ನು ಸೇರಿದರು. ಹಲವು ಪ್ರಮುಖ ಆಟಗಾರರು ಅನ್‌ಸೋಲ್ಡ್ ಆಗಿದ್ದು ಅಚ್ಚರಿ ಮೂಡಿಸಿದರೆ, ಇನ್ನೂ ಕೆಲವು ಆಟಗಾರರು ಕೋಟಿ ಪಡೆಯುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್‌ ತಂಡದ ನಾಯಕಿ ಹೀಥರ್ ನೈಟ್, ಭಾರತದ ಆಲ್‌ರೌಂಡರ್ ಸ್ನೇಹ್ ರಾಣಾ, ಪೂನಂ ಯಾದವ್‌ರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರದೇ ಇರುವುದು ಅಚ್ಚರಿ ಮೂಡಿಸಿತು.

Players Who Received the Highest Bids in the WPL 2025 Auction

ವೆಸ್ಟ್ ಇಂಡೀಸ್‌ ಆಲ್‌ರೌಂಡರ್ ಡಿಯೇಂದ್ರ ಡಾಟಿನ್‌ ಖರೀದಿಗೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ 1.70 ಕೋಟಿ ರೂಪಾಯಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾದರು.

16 ವರ್ಷದ ಜಿ ಕಮಲಿನಿ

ತಮಿಳುನಾಡಿನ 16 ವರ್ಷದ ಕ್ರಿಕೆಟರ್ ಜಿ. ಕಮಲಿನಿ ಬರೋಬ್ಬರಿ 1.60 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ದಾಖಲೆ ಬರೆದರು. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬಳಿಕ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವ ಕಮಲಿನಿ ಉತ್ತಮ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇತ್ತು. ಕಮಲಿನಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ತೀವ್ರ ಪೈಪೋಟಿ ನಡೆದರೂ ಕೊನೆಗೆ ಮುಂಬೈ ಇಂಡಿಯನ್ಸ್ ಬಿಡ್ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಸಿಮ್ರಾನ್ ಶೇಕ್

ಸಿಮ್ರಾನ್ ಶೇಕ್ ಬರೋಬ್ಬರಿ 1.90 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಈ ಬಾರಿ ಹರಾಜಿನ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸಿಮ್ರಾನ್‌ಗಾಗಿ ಭಾರಿ ಪೈಪೋಟಿ ನಡೆಸಿದರು ಅಂತಿಮವಾಗಿ ಗುಜರಾತ್ ಜೈಂಟ್ಸ್ ಬಿಡ್‌ನಲ್ಲಿ ಮೇಲುಗೈ ಸಾಧಿಸಿತು.

2023ರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡದಲ್ಲಿದ್ದರೂ ಅವರು ನಿರೀಕ್ಷಿಯ ಪ್ರದರ್ಶನ ನೀಡಿರಲಿಲ್ಲ. 9 ಪಂದ್ಯಗಳಲ್ಲಿ ಕೇವಲ 29 ರನ್ ಗಳಿಸಿದ್ದರು, 2024ರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಅವರು ಈ ಬಾರಿ ಹರಾಜಿನಲ್ಲಿ ದುಬಾರಿ ಆಟಗಾರ್ತಿಯಾದರು. ಇತ್ತಿಚೆಗೆ ಮುಕ್ತಾಯವಾದ ಮಹಿಳಾ ಟಿ20 ಟ್ರೋಫಿಯಲ್ಲಿ 11 ಪಂದ್ಯಗಳಲ್ಲಿ 176 ರನ್ ಗಳಿಸಿದ್ದರು.

ಪ್ರೇಮಾ ರಾವತ್

ಉತ್ತರಾಖಂಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಈ ಬಾರಿ ಹರಾಜಿನಲ್ಲಿ ಬರೋಬ್ಬರಿ 1.2 ಕೋಟಿ ರೂಪಾಯಿ ಪಡೆದರು. 10 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಪ್ರೇಮಾ ರಾವತ್‌ರನ್ನು ಖರೀದಿ ಮಾಡಲು ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯಿತು. ಅಂತಿಮವಾಗಿ ಆರ್ ಸಿಬಿ ಪ್ರೇಮಾ ರಾವತ್‌ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.

ಉತ್ತರಾಖಂಡ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಮಸ್ಸೋರಿ ಥಂಡರ್ಸ್‌ಗಾಗಿ ಆಡಿದ ಅವರು, ಮೂರು ಪಂದ್ಯಗಳಲ್ಲಿ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆರ್ ಸಿಬಿ ಈಗಾಗಲೇ ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾರಂತಹ ಯಶಸ್ವೀ ಸ್ಪಿನ್ನರ್ ಗಳನ್ನು ಹೊಂದಿದ್ದರು ಗಾಯದ ಭಯ ಕಾಡುತ್ತಿರುವ ಕಾರಣ ಪ್ರೇಮಾ ರಾವತ್‌ರನ್ನು ಬ್ಯಾಕಪ್ ಆಟಗಾರ್ತಿಯಾಗಿ ಖರೀದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+