ಜಯವೇ ನಿನದು ಜಯಿಸು ‘ಭಾರತ’.. ಆಂಗ್ಲರಿಗೆ ಹಳ್ಳ ತೋಡಿದ ಇಂಡಿಯಾ!
ಭಾರತ ಕ್ರಿಕೆಟ್ ತಂಡ ಇಂದು ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು, ಭಾರಿ ಸೌಂಡ್ ಮೂಲಕ ಫೈನಲ್ ಪಂದ್ಯಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ. ಅದರಲ್ಲೂ ಈಗ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಭಾರತ ಹಲವು ರೀತಿಯ ತಂತ್ರಗಳನ್ನ ಮಾಡಿದೆ. ಹಾಗಾದ್ರೆ ಭಾರತದ ಸ್ಪಿನ್ ಬೌಲರ್‌ಗಳಿಗೆ ಇಂದಿನ ಪಿಚ್ ಯಾವ ರೀತಿ ನೆರವಾಗಲಿದೆ? ಇಂಗ್ಲೆಂಡ್ ತಂಡಕ್ಕೆ ಹೀನಾಯ ಸೋಲು ಗ್ಯಾರಂಟಿ ಅಲ್ವಾ? ಬನ್ನಿ ತಿಳಿಯೋಣ.
ಭಾರತ ತಂಡ ಇಂದಿನ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಲು ಸರ್ವ ಸಿದ್ಧತೆ ನಡೆಸಿದೆ. ಭಾರತ & ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆಯ ಭೀತಿಯು ಕಾಡುತ್ತಿದೆ. ಯಾಕಂದ್ರೆ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆ ಬಿದ್ದು ಈಗ ಕೂಡ ಮೋಡ ಮುಸುಕಿದ ವಾತಾವರಣವೇ ಇದೆ. ಹೀಗಿದ್ದರೂ ಭಾರತಕ್ಕೆ ಗೆಲ್ಲುವ ಬಗ್ಗೆ ಭಯವೇ ಇಲ್ಲ. ಯಾಕಂದ್ರೆ ಇಂದು ಪಂದ್ಯ ನಡೆಯಲಿರುವ ಪಿಚ್ ಭಾರತಕ್ಕೆ ಸಹಕಾರಿ ಆಗಿದೆ. ಹಾಗಾದರೆ ಈ ಬಗ್ಗೆ ಪಿಚ್ ರಿಪೋರ್ಟ್ ಹೇಳುವುದು ಏನು? ಮುಂದೆ ಓದಿ.

ಗರನೆ ಗರಗರನೆ.. ತಿರುಗೀತು ಬಾಲ್!
ಅಂದಹಾಗೆ ಗಯಾನಾ ನ್ಯಾಷನಲ್ ಸ್ಟೇಡಿಯಂ ಇಂದು ಭಾರತ & ಇಂಗ್ಲೆಂಡ್ ನಡುವೆ ರಣರೋಚಕ ಕಾಳಗಕ್ಕೆ ಅದ್ಭುತ ವೇದಿಕೆ ಒದಗಿಸಿದೆ. ಅಷ್ಟಕ್ಕೂ ಗಯಾನಾ ನ್ಯಾಷನಲ್ ಸ್ಟೇಡಿಯಂ ಸ್ಪಿನ್ ಬೌಲರ್ಸ್ ಪಾಲಿಗೆ ಸ್ವರ್ಗ ಎನ್ನಬಹುದು. ಯಾಕಂದ್ರೆ ಈ ಪಿಚ್‌ನಲ್ಲಿ ಟರ್ನ್ ಸಿಗುವುದು ಜಾಸ್ತಿ, ಹೀಗಾಗಿಯೇ ಭಾರತ ತಂಡಕ್ಕೆ ಇದು ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಭಾರತದಲ್ಲಿ ಬಹುತೇಕ ಬೌಲರ್ಸ್ ಸ್ಪಿನ್ ಮಾಡಲು ಶಕ್ತರಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ಮ್ಯಾಚ್ ಆರಂಭಕ್ಕೆ ಮೊದಲೇ ಸೋಲಿನ ಭಯ ಶುರುವಾಗಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದಲ್ಲಿ, ಕುಲ್ದೀಪ್ ಯಾದವ್ ಫುಲ್ ಟೈಮ್ ಬೌಲರ್ ಆಗಿದ್ದರೆ ರವೀಂದ್ರ ಜಡೇಜಾ & ಅಕ್ಷರ್ ಪಟೇಲ್ ಆಲ್‌ರೌಂಡರ್ ಆಟ ಪ್ರದರ್ಶನ ಮಾಡಲಿದ್ದಾರೆ. ಅದ್ರಲ್ಲೂ ರವೀಂದ್ರ ಜಡೇಜಾ & ಅಕ್ಷರ್ ಪಟೇಲ್ ಬ್ಯಾಟ್ ಬೀಸುವುದಕ್ಕೂ ಸೈ, ಸ್ಪಿನ್ ಬೌಲಿಂಗ್ ಮಾಡಿ ವಿಕೆಟ್ ಉದುರಿಸುವುದಕ್ಕೂ ಜೈ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಇದೆ. ಮತ್ತೊಂದು ಕಡೆಯಲ್ಲಿ ಭಾರತಕ್ಕೆ ಇಂದಿನ ಮ್ಯಾಚ್ ಬರೀ ಕ್ರಿಕೆಟ್ ಪಂದ್ಯವಲ್ಲ, ಬದಲಾಗಿ ಸೇಡಿನ ಪಂದ್ಯವೂ ಆಗಿದೆ. ಇಂಗ್ಲೆಂಡ್ ತಂಡಕ್ಕೆ ಇಂದು ಭಾರತ ಪಾಠ ಕಲಿಸಲು ಸಜ್ಜಾಗಿದೆ.
ಭಾರತಕ್ಕೆ ಸೇಡಿನ ಪಂದ್ಯ!
ಇಂಗ್ಲೆಂಡ್ ತಂಡಕ್ಕೆ ಬುದ್ಧಿ ಕಲಿಸಲು ಭಾರತ ತಂಡಕ್ಕೆ ಮತ್ತೊಂದು ಅವಕಾಶ ಇದೀಗ ಸಿಕ್ಕಿದೆ. ಯಾಕಂದ್ರೆ ಈ ಹಿಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂದ್ರೆ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿತ್ತು ಇದೇ ಕಾರಣಕ್ಕೆ ಈಗ ಸೇಡಿನ ಸಮಯ ಬಂದಿದೆ.
2022 ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವೇ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತ್ತು. ಆದರೂ ಇಂಗ್ಲೆಂಡ್ ತಂಡ ಈ ಗುರಿಯನ್ನ ಕೇವಲ 16 ಓವರ್‌ಗೆ ತಲುಪಿತ್ತು. ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ನಲ್ಲಿ ಇಂಗ್ಲೆಂಡ್ 170 ರನ್ ಗಳಿಸಿತ್ತು. ಈ ಮೂಲಕ ಭಾರತ ವಿರುದ್ಧ ಇಂಗ್ಲೆಂಡ್ 10 ವಿಕೆಟ್ ಗೆಲುವು ದಾಖಲಿಸಿತ್ತು. ಇದೀಗ ಆ ಸೋಲಿನ ಸೇಡು ಗ್ಯಾರಂಟಿ ಅನ್ನೋದು ಭಾರತೀಯರ ಮಾತು.












Click it and Unblock the Notifications