Paul van Meekeren: ಉಬರ್ ಈಟ್ಸ್‌ ಕೆಲಸಗಾರನಿಂದ ನೆದರ್ಲ್ಯಾಂಡ್ಸ್ ತಂಡದ ಹೀರೋ ಆದ ಮೀಕೆರೆನ್

ಅಕ್ಟೋಬರ್ 17 ರಂದು ಧರ್ಮಶಾಲಾದ ಹೆಚ್‌ಪಿಸಿಎ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್ ಭರ್ಜರಿ ಗೆಲವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ನೆದರ್ಲ್ಯಾಂಡ್ಸ್ ತಂಡದ ಪೌಲ್ ವ್ಯಾನ್ ಮೀಕೆರೆನ್ ನೆದರ್ಲ್ಯಾಂಡ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೆಸ್ಟ್-ಆಡುವ ರಾಷ್ಟ್ರದ ವಿರುದ್ಧ ಮೊದಲ ಬಾರಿಗೆ ನೆದರ್ಲ್ಯಾಂಡ್ಸ್ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಸತತ ಜಯದ ಓಟಕ್ಕೆ ಬ್ರೇಕ್ ಹಾಕಿದ್ದಾರೆ.

from-uber-eats-delivery-driver-to-key-player

ಧರ್ಮಶಾಲಾದಲ್ಲಿ ನಡೆದ ಮುಖಾಮುಖಿಯಲ್ಲಿ, ವಾನ್ ಮೀಕೆರೆನ್ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಏಡೆನ್ ಮಾರ್ಕ್ರಾಮ್ ಮತ್ತು ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ಅವರ ವಿಕೆಟ್‌ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಯಾರು ಈ ಮೀಕೆರೆನ್?

2020 ರ ವರ್ಷವು ಮೀಕೆರೆನ್ ಕ್ರಿಕೆಟ್ ವೃತ್ತಿಜೀವನದಲ್ಲಿ ಕಠಿಣ ಅಧ್ಯಾಯವಾಗಿದೆ, ಕೋವಿಡ್ 19 ಸಾಂಕ್ರಾಮಿಕದಿಂದ ಟಿ20 ವಿಶ್ವಕಪ್ ರದ್ದಾದ ಬಳಿಕ, ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದರು.

ಅವರ ಕ್ರಿಕೆಟ್ ಆಕಾಂಕ್ಷೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ, ವ್ಯಾನ್ ಮೀಕೆರೆನ್ ಅವರು ಉಬರ್ ಈಟ್ಸ್ ಫುಡ್ ಡೆಲಿವರಿ ಡ್ರೈವರ್ ಆಗಿ ಉದ್ಯೋಗಕ್ಕೆ ಸೇರಿಕೊಂಡರು. ಇಷ್ಟೆಲ್ಲಾ ಸಂಕಷ್ಟ ಇದ್ದರೂ ಕೂಡ ಅವರು ತಮ್ಮ ಗುರಿಯನ್ನು ಬಿಡಲಿಲ್ಲ, ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.

from-uber-eats-delivery-driver-to-key-player

ಆರ್ಥಿಕವಾಗಿ ತೊಂದರೆಯಾದರು ಅವರು ಕ್ರಿಕೆಟ್‌ ಮೇಲಿನ ತಮ್ಮ ಒಲವನ್ನು ಉಳಿಸಿಕೊಂಡರು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ ತಂಡ ಇದೇ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಬರೆದಿತ್ತು, ಈಗ ಏಕದಿನ ವಿಶ್ವಕಪ್‌ನಲ್ಲಿ ಕೂಡ ದಕ್ಷಿಣ ಆಫ್ರಿಕಾ ಮಣಿಸಿ ಇತಿಹಾಸ ನಿರ್ಮಿಸಿದೆ.

ಅವರು ವಿವಿಧ ಟಿ20 ಮತ್ತು ಟಿ10 ಫ್ರಾಂಚೈಸಿಗಳಿಗಾಗಿ ಪ್ರಪಂಚದಾದ್ಯಂತ ಸ್ವಲ್ಪಮಟ್ಟಿಗೆ ಕ್ರಿಕೆಟ್ ಆಡಿದ್ದರೂ, ಅವರು ಹೆಚ್ಚು ತಿಳಿದಿರುವ ಹೆಸರಾಗಿರಲಿಲ್ಲ. ಆದರೆ ಅಕ್ಟೋಬರ್ 18 ರ ಮಂಗಳವಾರ ಅವರ ಹೆಸರು ಈಗ ಸಾಕಷ್ಟು ಜನಕ್ಕೆ ತಿಳಿದಿದೆ.

25ನೇ ಓವರ್‌ನಲ್ಲಿ ವ್ಯಾನ್ ಮೀಕೆರೆನ್ ಅವರು ಮಾರ್ಕೊ ಜಾನ್ಸೆನ್ ಅವರನ್ನು ಅಬ್ಬರದ ಎಸೆತದಲ್ಲಿ ಬೌಲ್ಡ್ ಮಾಡಿದರು. ಬ್ಯಾಟ್‌ನಿಂದ ಗಂಭೀರ ಹಾನಿಯನ್ನುಂಟುಮಾಡಬಲ್ಲ ಜಾನ್ಸೆನ್ ಔಟಾಗಿದ್ದು ದಕ್ಷಿಣ ಆಫ್ರಿಕಾ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ವ್ಯಾನ್ ಮೀಕೆರೆನ್‌ ಅವರು ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುವುದರಿಂದ ಹಿಡಿದು ಎದುರಾಳಿ ಬ್ಯಾಟರ್‌ಗಳನ್ನು ಕಾಡುವ ಬೌಲರ್ ಆಗುವವರೆಗೆ ಖಂಡಿತವಾಗಿಯೂ ಸ್ವತಃ ಹೆಸರು ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+