IPL 2023: ಈತ ಭವಿಷ್ಯದ ಆಟಗಾರ: MI ಯುವ ಆಟಗಾರನ ಬಗ್ಗೆ ಪಾರ್ಥಿವ್ ಪಟೇಲ್ ಪ್ರಶಂಸೆ
ಐಪಿಎಲ್ 16ನೇ ಆವೃತ್ತಿಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಒಂದಕ್ಕಿಂತ ಮತ್ತೊಂದು ಪಂದ್ಯಗಳು ರೋಚಕತೆಯನ್ನು ಹೆಚ್ಚಿಸುತ್ತಿದೆ. ಕೆಲ ಯುವ ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ವಿಶೇಷ ಪ್ರದರ್ಶನ ನಿಡುತ್ತಿದ್ದು ಗಮನ ಸೆಳೆದಿದ್ದಾರೆ. ಇದರಲ್ಲಿ ಪ್ರಮುಖ ಆಟಗಾರ ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ. ತಂಡ ಸಂಕಷ್ಟದಲ್ಲಿದ್ದರೂ ಈ ಯುವ ಆಟಗಾರ ನೀಡುತ್ತಿರುವ ಸ್ಥಿರ ಪ್ರದರ್ಶನ ಎಲ್ಲರ ಗಮನಸೆಳೆದಿದ್ದು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಮುಂಬೈ ಇಂಡಿಯನ್ಸ್ ತಂಡದ ಈ ಯುವ ಆಟಗಾರ ತಿಲಕ್ ವರ್ಮಾ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದು ಈತ ಭವಿಷ್ಯದ ಆಟಗಾರ ಎಂದು ಬಣ್ಣಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿಯೂ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ನೀಡಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸರೆಯಾಗಿದ್ದಾರೆ.

ಮೂರು ಪಂದ್ಯಗಳಲ್ಲಿಯೂ ಮಿಂಚಿರುವ ಯುವ ಆಟಗಾರ
ತಿಲಕ್ ವರ್ಮಾ ಮುಂಬೈ ಇಂಡಿಯನ್ಸ್ ಪರವಾಗಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 73.50 ಸರಾಸರಿಯಲ್ಲಿ ಅವರು 158.06ರ ಸ್ಟ್ರೈಕ್‌ರೇಟ್‌ನಲ್ಲಿ 147 ರನ್‌ಗಳನ್ನು ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 46 ಎಸೆತಗಳಲ್ಲಿ ಅಜೇಯ 84 ರನ್‌ಗಳನ್ನು ಗಳಿಸಿದರೆ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 22 ರನ್‌ಗಳನ್ನು ಗಳಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 41 ರನ್‌ಗಳನ್ನು ಗಳಿಸಿದ ತಿಲಕ್ ವರ್ಮಾ ತಂಡದ ಮೊದಲ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
MI vs DC IPL 2023: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿಗೆ ಇದೇ ಕಾರಣ ಎಂದ ರೋಹಿತ್ ಶರ್ಮಾ
ವರ್ಮಾ ಬಗ್ಗೆ ಹೊಗಳಿದ ಪಾರ್ಥಿವ್ ಪಟೇಲ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಜಿಯೋ ಸಿನಿಮಾ ಜೊತೆಗೆ ಪಾರ್ಥಿವ್ ಪಟೇಲ್ ಸಂವಾದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಶಯಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದು ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅವರ ಕಾಲ್ಚಲನೆ ಅದ್ಭುತವಾಗಿದ್ದು ಶೀಘ್ರವಾಗಿ ಪ್ರತಿಕ್ರಿಯಿಸುತ್ತಾರೆ. ಆಫ್ ಸ್ಪಿನ್ನರ್‌ಗಳಿಂದ ಅದ್ಭುತವಾಗಿ ಬೌಲಿಂಗ್ ದಾಳಿ ನಡೆಯುತ್ತರುವಾಗ ಸ್ಟ್ರೈಕ್ ಬದಲಾಯಿಸುವುದು ಸುಲಭವಲ್ಲ" ಎಂದಿದ್ದಾರೆ ಪಾರ್ಥಿವ್ ಪಟೇಲ್.
ಆತನ ಆತ್ಮವಿಶ್ವಾಸ, ಪ್ರಬುದ್ಧತೆ ಅರಿವಿಗೆ ಬಂದಿದೆ
"ಪಂದ್ಯದಿಂದ ಪಂದ್ಯಕ್ಕೆ ಆತನ ಪ್ರಬುದ್ಧತೆಯನ್ನು ಗಮನಿಸಬಹುದು. ಅದುವೇ ಆತನ ಬಹಳ ದೊಡ್ಡ ಶಕ್ತಿ. ಮೊದಲಿಗೆ ನೀವು ಉತ್ತಮ ಪ್ರದರ್ಶನ ನೀಡಿ ಒಳ್ಳೆಯ ಆರಂಭ ಪಡೆಯಬಹುದು. ಆದರೆ ಬಳಿಕ ಎಲ್ಲರೂ ನಿಮ್ಮ ಆಡುವ ಶೈಲಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ನಿಮ್ಮಲ್ಲಿರು ಬಲ ದೌರ್ಬಲ್ಯಗಳನ್ನು ತಿಳಿದುಕೊಳ್ಳುತ್ತಾರೆ. ಆದರೆ ಮತ್ತೆ ಟೂರ್ನಿಗೆ ಉತ್ತಮವಾಗಿ ಕಮ್‌ಬ್ಯಾಕ್ ಮಾಡುವುದಕ್ಕಾಗಿ ಮೆಚ್ಚುಗೆ ಸೂಚಿಸಲೇಬೇಕು. ಇದು ಆಟಗಾರನ ಬದ್ಧತೆ ಹಾಗೂ ಪ್ರಬುದ್ಧತೆಯನ್ನು ತೋರ್ಪಡಿಸುತ್ತದೆ. ತಿಲಕ್ ವರ್ಮಾ ಭವಿಷ್ಯದ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ" ಎಂದಿದ್ದಾರೆ ಪಾರ್ಥಿವ್ ಪಟೇಲ್
ಮೊದಲ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಪೈಪೋಟಿಯಿಮದ ಕೂಡಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಯನ್ಸ್ ತಂಡ ಹೋರಾಟದ ಪ್ರದರ್ಶನ ನೀಡಿದ್ದು ಪಂದ್ಯದ ನಾಂತಿಮ ಎಸೆತದಲ್ಲಿ ಗೆಲುವಿನ ನಗೆ ಬೀಡುವಲ್ಲಿ ಯಶಸ್ವಿಯಾಗಿದೆ. ಮುಂಬೈ ಇಂಡಿಯನ್ಸ್ ಪರವಾಗಿ ನಾಯಕ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿದ್ದು ಸುದೀರ್ಘ ಕಾಲದ ಬಳಿಕ ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದಾರೆ.












Click it and Unblock the Notifications