Paris Olympics: ಹಾಕಿ ಹಾಗೂ ಬಾಕಿಂಗ್ಸ್‌ನಲ್ಲಿ ಭಾರತಕ್ಕೆ ಸೋಲು
ಗುರುವಾರ ಭಾರತ ತಂಡ ಎರಡು ವಿಭಾಗದಲ್ಲಿ ನಿರಾಸೆ ಕಂಡಿದೆ. ಪುರುಷರ ಹಾಕಿ ಗುಂಪು ಹಂತದ ಪಂದ್ಯದಲ್ಲಿ ಭಾರತ 1-2 ರಿಂದ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದರೆ, ಮಹಿಳೆಯರ ಸಿಂಗಲ್ಸ್ 50 ಕೆ.ಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖತ್ ಜರೀನ್ ನಿರಾಸೆ ಅನುಭವಿಸಿದ್ದಾರೆ.
ಗುಂಪು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ಹಾಕಿ ತಂಡದ ಅಜೇಯ ಓಟಕ್ಕೆ ಬೆಲ್ಜಿಯಂ ಬ್ರೇಕ್ ಹಾಕಿದೆ. ಗುರುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ, ಆಘಾತ ಅನುಭವಿಸಿತು.

ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಬೆಲ್ಜಿಯಂ ತಂಡದ ವಿರುದ್ಧ ಆರನೇ ಶ್ರೇಯಾಂಕಿತ ಭಾರತ ಅಮೋಘ ಪ್ರದರ್ಶನ ನೀಡಿದವು. ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಅಜೇಯ ಓಟವನ್ನು ಮುಂದುವರೆಸಿದ್ದ ಭಾರತ, ಆರಂಭದಿಂದಲೂ ಸೊಗಸಾದ ಪ್ರದರ್ಶನ ನೀಡಿತು. ಆದರೆ ಈ ಪಂದ್ಯದಲ್ಲಿ ಗೆಲುವಿನ ಆಸೆಗೆ ಬೆಲ್ಜಿಯಂ ಪೆಟ್ಟು ನೀಡಿತು.
ಭಾರತಕ್ಕೆ ಆರಂಭಿಕ ಮುನ್ನಡೆ
ಭಾರತದ ಪರ ಅಭಿಷೇಕ್ ಎರಡನೇ ಅವಧಿಯಲ್ಲಿ ಸೊಗಸಾದ ಪ್ರದರ್ಶನ ನೀಡಿದರು. ಇವರು ಅಬ್ಬರದ ಆಟದ ಪ್ರದರ್ಶನ ನೀಡಿ ಎದುರಾಳಿ ಗೋಲಿಯನ್ನು ವಂಚಿಸುವಲ್ಲಿ ವಿಫಲರಾದರು. ಈ ಅವಧಿಯ 3ನೇ ನಿಮಿಷದಲ್ಲಿ ಅಭಿಷೇಕ್ ಸೊಗಸಾದ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಎರಡನೇ ಅವಧಿಯನ್ನು ಭಾರತ ಮುನ್ನಡೆಯೊಂದಿಗೆ ಕೊನೆ ಗೊಳಿಸಿತು.
ಅಬ್ಬರಿಸಿದ ಬೆಲ್ಜಿಯಂ
ಮೂರನೇ ಅವಧಿಯಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಈ ವೇಳೆ ಬೆಲ್ಜಿಯಂ ತಂಡ ಟೀಮ್ ಇಂಡಿಯಾದ ರಕ್ಷಣಾ ವಿಭಾಗಕ್ಕೆ ಮಣ್ಣು ಮುಕ್ಕಿಸಿ, 33ನೇ ನಿಮಿಷದಲ್ಲಿ ಮೊದಲ ಗೋಲಿನ ನಗೆ ಬೀರಿತು. ಈ ಅವಧಿಯ ಕೊನೆಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಬಾರಿಸಿದ್ದವು.

ಕೊನೆಯ ಅವಧಿಯಲ್ಲಿ ಭಾರತದ ನ್ಯೂನತೆಯನ್ನು ಅರಿತು ಆಡಿದ ವಿಶ್ವದ ನಂಬರ್ 1 ಬೆಲ್ಜಿಯಂ ತಂಡ 44ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿತು. ಇದರಿಂದ ಭಾರತದ ಗೆಲುವಿನ ಆಸೆಗೆ ಪೆಟ್ಟು ಬಿದ್ದಿತು. ಕೊನೆಯ ಕ್ಷಣದ ವರೆಗೂ ಗೋಲು ಬಾರಿಸುವ ಭಾರತದ ಆಸೆ ಫಲಿಸಲಿಲ್ಲ.
ನಿಖತ್ ಜರೀನ್‌ಗೆ ಆಘಾತ
ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ನಿಖತ್ ಜರೀನ್ ಅವರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಚೀನಾದ ವು ಯು ಅಬ್ಬರದ ಆಟವಾಡಿ, ಅಬ್ಬರಿಸಿದರು. ಅಲ್ಲದೆ ಸತತ ಅಂಕಗಳ ಬೇಟೆಯನ್ನು ನಡೆಸಿ ಭಾರತೀಯ ಬಾಕ್ಸರ್ ವಿರುದ್ಧ ಮೇಲುಗೈ ಸಾಧಿಸಿದರು. 50 ಕೆಜಿ ವಿಭಾಗದಲ್ಲಿ ಪದಕದ ಆಸೆಯನ್ನು ಕೈ ಬಿಟ್ಟರು.
ಚೀನಾದ ಆಟಗಾರ್ತಿ ಮೊದಲ ಸುತ್ತಿನಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಚೀನಾದ ಆಟಗಾರ್ತಿ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಿದರು. ಇಲ್ಲಿಂದ ಪಂದ್ಯದ ಮೇಲೆ ಸಾಧಿಸಿದ್ದ ಹಿಡಿತವನ್ನು ಅವರು ಬಿಟ್ಟು ಕೊಡಲಿಲ್ಲ. ಪರಿಣಾಮ ಮೂರು ಗೇಮ್‌ಗಳನ್ನು ಏಕಪಕ್ಷೀಯವಾಗಿ ಗೆದ್ದು ಬೀಗಿದರು.












Click it and Unblock the Notifications