Pak vs Eng: ಬಾಬರ್ ಆಜಂರನ್ನು ಹೊರಗಿಟ್ಟ ಬಳಿಕ ಟೆಸ್ಟ್ ಸರಣಿ ಗೆದ್ದ ಪಾಕಿಸ್ತಾನ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿ, ಸ್ಟಾರ್ ಬ್ಯಾಟರ್ ಬಾಬರ್ ಆಜಂ, ವೇಗದ ಬೌಲರ್ ಶಹೀನ್ ಅಫ್ರಿದಿ ಅವರನ್ನೇ ತಂಡದಿಂದ ಕೈಬಿಟ್ಟ ಪಾಕಿಸ್ತಾನ, ನಂತರ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಮೂರು ವರ್ಷಗಳ ಬಳಿಕ ಪಾಕಿಸ್ತಾನ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿದೆ. ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

36 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ನಾಯಕ ಶಾನ್ ಮಸೂದ್ ಅಜೇಯ 23 ರನ್ ನೆರವಿನಿಂದ ಮೂರು ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು. ಇದಕ್ಕೂ ಮೊದಲು ನೋಮನ್ ಮತ್ತು ಸಾಜಿದ್ ಎಲ್ಲಾ 10 ವಿಕೆಟ್‌ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಆಲೌಟ್ ಆಯಿತು. ನೋಮನ್ ಅಲಿ 6 ವಿಕೆಟ್ ಪಡೆದರೆ, ಸಾಜಿದ್ ಖಾನ್ 4 ವಿಕೆಟ್ ಪಡೆದರು.

Pakistan Clinches First Home Test Series in Three Years Against England

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್‌ಗಳಿಗೆ ಆಲೌಟ್ ಆಗಿತ್ತು. ಜೇಮ್ ಸ್ಮಿತ್ 89 ರನ್ ಗಳಿಸಿದರೆ, ಬೆನ್ ಡಕೆಟ್ 52 ರನ್ ಗಳಿಸಿದರು. ಸಾಜಿದ್ ಖಾನ್ 6 ವಿಕೆಟ್ ಪಡೆದಿದ್ದರೆ, ನೋಮನ್ ಅಲಿ 3 ವಿಕೆಟ್ ಪಡೆದುಕೊಂಡರು.

ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 344 ರನ್‌ಗಳಿಗೆ ಆಲೌಟ್ ಆಗಿತ್ತು. ಸೌದ್ ಶಕೀಲ್ 134 ರನ್ ಗಳಿಸಿದ್ದರು. ಸಾಜಿದ್ ಖಾನ್ 48 ರನ್ ಗಳಿಸಿದರೆ, ನೋಮಲ್ ಅಲಿ 45 ರನ್ ಗಳಿಸಿದರು. ಈ ಮೂಲಕ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 77 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಪಾಕಿಸ್ತಾನದ ಸ್ಪಿನ್ ದಾಳಿಗೆ ಸಿಲುಕಿ 112 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಗೆಲುವಿಗಾಗಿ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ನಲ್ಲಿ 37 ರನ್ ಗಳಿಸಬೇಕಿತ್ತು. 3.1 ಓವರ್ ಗಳಲ್ಲೇ 1 ವಿಕೆಟ್ ಕಳೆದುಕೊಂಡು 31 ರನ್ ಗಳಿಸಿದ ಪಾಕಿಸ್ತಾನ ಸರಣಿ ಗೆದ್ದುಕೊಂಡಿತು.

ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕ ಪಾಕಿಸ್ತಾನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಬಾಬರ್ ಆಜಂ ಮತ್ತು ಶಾಹೀನ್ ಅಫ್ರಿದಿ ಅವರನ್ನು ಎರಡು ಮತ್ತು ಮೂರನೇ ಟೆಸ್ಟ್‌ಗೆ ತಂಡದಿಂದ ಕೈಬಿಡಲಾಗಿತ್ತು. ಪ್ರಮುಖ ಆಟಗಾರರನ್ನು ಹೊರಗಿಟ್ಟ ಬಳಿಕ ಪಾಕಿಸ್ತಾನ ಸರಣಿ ಗೆದ್ದು ದಾಖಲೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+