T20 World Cup: ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ
ಸಾಕಷ್ಟು ಕಾಯುವಿಕೆ ನಂತರ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಟಿ20 ವಿಶ್ವಕಪ್ 2024 ಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಎಲ್ಲಾ ತಂಡಗಳು ಈಗಾಗಲೇ ತಂಡವನ್ನು ಪ್ರಕಟಿಸಿದ್ದರೂ, ಪಾಕಿಸ್ತಾನ ಮಾತ್ರ ಇನ್ನೂ ತಂಡವನ್ನು ಪ್ರಕಟಿಸಿರಲಿಲ್ಲ.
ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮೆಗಾ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವನ್ನು ಬಾಬರ್ ಅಜಮ್ ಮುನ್ನಡೆಸಲಿದ್ದಾರೆ. ಆದರೆ ತಂಡದ ಉಪನಾಯಕ ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ವೇಗದ ಬೌಲರ್ ಹ್ಯಾರಿಸ್ ರೌಫ್ ತಂಡಕ್ಕೆ ಮರಳಿದ್ದಾರೆ. ಜನವರಿ 19ರಂದು ಕೊನೆಯ ಪಂದ್ಯವನ್ನಾಡಿದ್ದ ಅವರು, ಭುಜದ ಗಾಯದಿಂದ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ತಂಡದಲ್ಲಿ ಅವಕಾಶ ಪಡೆದಿರುವ ಸಲ್ಮಾನ್ ಅಲಿ ಅಘಾ, ಹಸನ್ ಅಲಿ ಮತ್ತು ಮೊಹಮ್ಮದ್ ಇರ್ಫಾನ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿಲ್ಲ.
ಜೂನ್ 6ರಂದು ಯುಎಸ್‌ಎ ವಿರುದ್ಧ ಪಂದ್ಯವನ್ನಾಡುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭವಾಗಲಿದೆ. ಜೂನ್ 9 ರಂದು ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ, ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಜೂನ್ 11ರಂದು ಕೆನಡಾ ವಿರುದ್ಧ ಪಂದ್ಯವನ್ನಾಡಲಿದ್ದು, ಲೀಗ್ ಹಂತದ ಪಾಕಿಸ್ತಾನದ ಕೊನೆಯ ಪಂದ್ಯದಲ್ಲಿ ಜೂನ್ 16ರಂದು ಐರ್ಲೆಂಡ್ ತಂಡದ ವಿರುದ್ಧ ಸೆಣೆಸಲಿದೆ.
ಟಿ20 ವಿಶ್ವಕಪ್‌ಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾದ್ ವಾಸಿಮ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್, ಶಾದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾನ್.












Click it and Unblock the Notifications