• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ತಂದುಕೊಟ್ಟಿ ಹಾಕಿ ಆಟಗಾರ ವರೀಂದರ್ ಸಿಂಗ್ ನಿಧನ

|
Google Oneindia Kannada News

ನವದೆಹಲಿ, ಜೂನ್ 28: ಭಾರತಕ್ಕೆ ಒಲಂಪಿಕ್ ಮತ್ತು ವಿಶ್ವಕಪ್‌ನಲ್ಲಿ ಪದಕ ತಂದುಕೊಟ್ಟಿದ್ದ ಆಟಗಾರ ವರೀಂದರ್ ಸಿಂಗ್ ಮಂಗಳವಾರ ಬೆಳಿಗ್ಗೆ ಜಲಂಧರ್‌ನಲ್ಲಿ ನಿಧನರಾಗಿದ್ದಾರೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಹಾಕಿಯಲ್ಲಿ ಭಾರತದ ಪ್ರಾಬಲ್ಯ ಸಾಧಿಸಿದ್ದ 70 ರ ದಶಕದಲ್ಲಿ ವರಿಂದರ್ ಸಿಂಗ್ ಹಲವು ಭಾರತೀಯ ಸ್ಮರಣೀಯ ವಿಜಯಗಳಲ್ಲಿ ತಂಡದ ಭಾಗವಾಗಿದ್ದರು. ಅವರು 1975 ರಲ್ಲಿ ಮಲೇಷ್ಯಾದ ಕ್ವಾಲ ಲಾಂಪುರದಲ್ಲಿ ನಡೆದಿದ್ದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಇಂದಿಗೂ ಅದು ಭಾರತದ ಏಕೈಕ ಚಿನ್ನದ ಪದಕ ಎಂದೆನಿಸಿಕೊಂಡಿದೆ. ಅಂದು ಪಾಕಿಸ್ತಾನ ತಂಡವನ್ನು ಭಾರತ 2-1ರಲ್ಲಿ ಸೋಲಿಸಿ ಚಾಂಪಿಯನ್ ಆಗಿತ್ತು.

ಏಷ್ಯನ್ ಚಾಂಪಿಯನ್‌ ಚಿನ್ನ ಗೆದ್ದು ಕರ್ನಾಟಕದ ಕುಸ್ತಿ ಪವರ್‌ ತೋರಿಸಿದ ಮೊಧೋಳದ ನಿಂಗಪ್ಪಏಷ್ಯನ್ ಚಾಂಪಿಯನ್‌ ಚಿನ್ನ ಗೆದ್ದು ಕರ್ನಾಟಕದ ಕುಸ್ತಿ ಪವರ್‌ ತೋರಿಸಿದ ಮೊಧೋಳದ ನಿಂಗಪ್ಪ

ಇದರ ಜೊತೆಗೆ ವರೀಂದರ್ 1972ರಲ್ಲಿ ಮ್ಯುನಿಚ್‌ ಒಲಿಂಪಿಕ್ಸ್‌ನಲ್ಲಿ ಕಂಚು ಹಾಗೂ 1973ರ ಆಮ್ಸ್‌ಟರ್ಡ್ಯಾಮ್‌ನಲ್ಲಿ ವಿಶ್ವಕಪ್ ನಲ್ಲಿ ಬೆಳ್ಳಿ ಗೆದ್ದ ತಂಡದಲ್ಲೂ ಆಡಿದ್ದರು. ಇವುಗಳ ಜೊತೆಗೆ 1974 ಮತ್ತು 1978ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ತಮ್ಮ ಹೆಸರಿನಲ್ಲಿರಿಸಿಕೊಂಡಿದ್ದಾರೆ. 2007ರಲ್ಲಿ ಹಾಕಿ ಕ್ರೀಡೆಯ ಪ್ರತಿಷ್ಠಿತ ಧ್ಯಾನ್‌ ಚಾಂದ್‌ ಜೀವನಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದರು.

ವರೀಂದರ್ ಸಿಂಗ್ ಅವರ ಸಾವಿಗೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದ್ದು, "ಭಾರತದ ಶ್ರೇಷ್ಠ ಹಾಕಿ ಆಟಗಾರ ಶ್ರೀ ವರೀಂದರ್‌ ಸಿಂಗ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಈ ದುಃಖದ ಸಂದರ್ಭದಲ್ಲಿ ದುಃಖವನ್ನು ಭರಿಸಲಾಗದ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲಿ ಎಂದು ನಾವು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ" ಎಂದು ಹಾಕಿ ಇಂಡಿಯಾ ಪ್ರಕಟಿಸಿದೆ.

English summary
Indian former hockey player Varinder Singh, who was part of the bronze medal winning indian team in 1972 Munich Olympic died Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X