ODI World Cup 2023: ಭಾರತ - ನೆದರ್ಲ್ಯಾಂಡ್ಸ್ ಅಭ್ಯಾಸ ಪಂದ್ಯ ರದ್ದು : ಭಾರತದ ಮುಂದಿನ ಪಂದ್ಯ ಯಾವಾಗ?

ಏಕದಿನ ವಿಶ್ವಕಪ್ ಪಂದ್ಯಾವಳಿಗೆ ತಯಾರಿಗಾಗಿ ನಡೆಯಬೇಕಿದ್ದ ಭಾರತ ನೆದರ್ಲ್ಯಾಂಡ್ಸ್ ನಡುವಿನ ಅಭ್ಯಾಸ ಪಂದ್ಯ ರದ್ದಾಗಿದೆ. ತಿರುವನಂತಪುರದಲ್ಲಿ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು, ಆದರೆ ನಿರಂತರ ಮಳೆಯಾದ ಕಾರಣ ಪಂದ್ಯವನ್ನು ರದ್ದು ಮಾಡಿದ್ದು, ಭಾರತ ತಂಡದ ಎರಡೂ ಅಭ್ಯಾಸ ಪಂದ್ಯಗಳು ರದ್ದಾಗಿದ್ದು, ನೇರವಾಗಿ ವಿಶ್ವಕಪ್ ಪಂದ್ಯವನ್ನು ಆಡಲಿದೆ.

ಸೆಪ್ಟೆಂಬರ್ 29ರಂದು ಗುವಾಹಟಿಯಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಕೂಡ ರದ್ದಾಗಿತ್ತು, ಈಗ ಎರಡನೇ ಅಭ್ಯಾಸ ಪಂದ್ಯ ಕೂಡ ರದ್ದಾಗಿದೆ. ಅಕ್ಟೋಬರ್ 5ರಂದು ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ಅಕ್ಟೋಬರ್ 8ರಂದು ಭಾರತ ಮೊದಲ ಪಂದ್ಯವನ್ನು ಆಡಲಿದೆ.

odi-world-cup

ನೆದರ್ಲ್ಯಾಂಡ್ಸ್ ಜೊತೆಗೆ ಭಾರತವು ಯಾವುದೇ ಅಭ್ಯಾಸ ಪಂದ್ಯವನ್ನು ಆಡದ ಏಕೈಕ ತಂಡವಾಗಿದೆ. ಭಾತರತ ಎರಡೂ ಆಟಗಳನ್ನು ಕಳೆದುಕೊಂಡಿರುವುದರಿಂದ ಅಲ್ಪ ಹಿನ್ನಡೆಯಾಗಿದೆ.

ಏಕದಿನ ವಿಶ್ವಕಪ್‌ಗೆ ತಯಾರಾಗುವ ದೃಷ್ಟಿಯಿಂದ ಭಾರತ ತಂಡಕ್ಕೆ ಅಭ್ಯಾಸ ಪಂದ್ಯಗಳು ಮಹತ್ವದ್ದಾಗಿದ್ದವು, ಈಗ ಎರಡೂ ಪಂದ್ಯಗಳು ರದ್ದಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಯಾವ ರೀತಿಯ ಆಡುವ ಬಳಗವನ್ನು ಆಯ್ಕೆ ಮಾಡುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಗೆಲುವಿನ ವಿಶ್ವಾಸದಲ್ಲಿ ರೋಹಿತ್ ಪಡೆ

ತವರಿನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿರುವ ಕಾರಣ ಭಾರತ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ವಿಶ್ವಕಪ್‌ಗೆ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿರುವುದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ವಿಶ್ವಕಪ್‌ಗೆ ಮುನ್ನ ಎಲ್ಲಾ ಆಟಗಾರರು ಫಾರ್ಮ್‌ಗೆ ಮರಳಿರುವುದು ಇನ್ನೊಂದು ಪ್ರಮುಖ ಸಂಗತಿಯಾಗಿದೆ. ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಗಾಯದ ಬಳಿಕ ತಂಡಕ್ಕೆ ಮರಳಿದ್ದು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಭಾರತದ ಮೊದಲ ಪಂದ್ಯ ಯಾವಾಗ? ಎಲ್ಲಿ?

ಭಾರತ ಏಕದಿನ ವಿಶ್ವಕಪ್‌ 2023ರ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಆಸ್ಟ್ರೇಲಿಯಾವನ್ನು ಸೋಲಿಸಿ ಉತ್ತಮ ಆರಂಭ ಮಾಡುವ ವಿಶ್ವಾಸದಲ್ಲಿದೆ ರೋಹಿತ್ ಶರ್ಮಾ ಪಡೆ.

ಈ ಪಂದ್ಯದ ಬಳಿಕ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದ್ದು, ಅಕ್ಟೋಬರ್ 11ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ 1.30 ಲಕ್ಷ ಮಂದಿ ಕ್ರೀಡಾಂಗಣದಲ್ಲಿ ಸಾಕ್ಷಿಯಾಗಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+