Rohit Sharma: LSG vs MI ಪಂದ್ಯದಿಂದ ಹೊರಗುಳಿದ ರೋಹಿತ್ ಶರ್ಮಾ; ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಐಪಿಎಲ್ 2025ರ ಆವೃತ್ತಿಯಲ್ಲಿ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ರೋಹಿತ್ ಶರ್ಮಾ ಶುಕ್ರವಾರ ನಡೆಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗುಳಿದಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದ ಅವರು ಲಕ್ನೋದಲ್ಲಿ ನಡೆಯುತ್ತಿರುವ ಎಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೊರಗುಳಿದರು.
ರೋಹಿತ್ ಶರ್ಮಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು ಇನ್ನೂ ಚೇತರಿಸಿಕೊಳ್ಳದ ಕಾರಣ ಅವರನ್ನು ಅನಿವಾರ್ಯವಾಗಿ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಡಲಾಗಿದೆ. ಟಾಸ್ ಗೆದ್ದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ರೋಹಿತ್ ಶರ್ಮಾ ಅವರು ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು ಇಂದಿನ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದರು.

ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಂಡ್ಯ
ಟಾಸ್ ಗೆದ್ದ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬೌಲಿಂಗ್ ಮಾಡುತ್ತೇವೆ, ವಿಕೆಟ್ ಉತ್ತಮವಾಗಿರುವಂತೆ ಕಾಣುತ್ತಿದೆ. ಬಳಿಕ ಇಬ್ಬನಿ ಬೀಳುವ ಸಾಧ್ಯತೆ ಇದ್ದು, ಚೇಸಿಂಗ್ ಮಾಡಲು ಸುಲಭವಾಗಬಹುದು ಎನಿಸುತ್ತದೆ. ನಾವಿಲ್ಲಿ ಉತ್ತಮ ಕ್ರಿಕೆಟ್ ಆಡಲು ಬಂದಿದ್ದೇವೆ, ಪಿಚ್ ಬಗ್ಗೆ ಮಾತನಾಡುವ ಬದಲು ಉತ್ತಮ ಪ್ರದರ್ಶನ ನೀಡಲು ಗಮನ ಕೊಡಬೇಕು. ಅಭ್ಯಾಸ ಮಾಡುವ ಸಂದರ್ಭದಲ್ಲಿ ರೋಹಿತ್ ಗಾಯಗೊಂಡಿದ್ದಾರೆ, ಜಸ್ಪ್ರೀತ್ ಬುಮ್ರಾ ಶೀಘ್ರದಲ್ಲೇ ಮರಳಬಹುದು ಎಂದಿದ್ದಾರೆ.
ಎರಡೂ ತಂಡಗಳು ಈವರೆಗೆ ಮೂರು ಪಂದ್ಯಗಳನ್ನು ಆಡಿದ್ದು ಎರಡು ಪಂದ್ಯಗಳನ್ನು ಸೋತು ಒಂದು ಪಂದ್ಯವನ್ನು ಮಾತ್ರ ಗೆದ್ದಿವೆ. ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ 6ನೇ ಸ್ಥಾನದಲ್ಲಿದ್ದು, ಎಲ್‌ಎಸ್‌ಜಿ 7ನೇ ಸ್ಥಾನದಲ್ಲಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಲಕ್ನೋ ಸೂಪರ್ ಜೈಂಟ್ಸ್ : ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್(ನಾಯಕ), ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಆಕಾಶ್ ದೀಪ್, ಅವೇಶ್ ಖಾನ್.
ಇಂಪ್ಯಾಕ್ಟ್ ಸಬ್: ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಶಹಬಾಜ್ ಅಹ್ಮದ್, ಮಣಿಮಾರನ್ ಸಿದ್ಧಾರ್ಥ್, ಆಕಾಶ್ ಸಿಂಗ್.
ಮುಂಬೈ ಇಂಡಿಯನ್ಸ್ : ವಿಲ್ ಜ್ಯಾಕ್ಸ್, ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ರಾಜ್ ಬಾವಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಅಶ್ವನಿ ಕುಮಾರ್, ವಿಘ್ನೇಶ್ ಪುತ್ತೂರು, ಟ್ರೆಂಟ್ ಬೌಲ್ಟ್.
ಇಂಪ್ಯಾಕ್ಟ್ ಸಬ್: ತಿಲಕ್ ವರ್ಮಾ, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ಸತ್ಯನಾರಾಯಣ ರಾಜು, ಕರ್ಣ್ ಶರ್ಮಾ












Click it and Unblock the Notifications