Neeraj Chopra & Himani; ಹಿಮಾನಿ ಜೊತೆ ಸಪ್ತಪದಿ ತುಳಿದ ಚಿನ್ನದ ಹುಡುಗ ನೀರಜ್ ಚೋಪ್ರಾ
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್‌ನಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದು ಹೀರೋ ಆಗಿರುವ ನೀರಜ್ ಚೋಪ್ರಾ ಸರಳವಾಗಿ ಮದುವೆಯಾಗಿದ್ದು, ಕ್ರೀಡಾಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಭಾನುವಾರ ಖಾಸಗಿ ಸಮಾರಂಭದಲ್ಲಿ ಅವರ ವಿವಾಹ ಕಾರ್ಯಕ್ರಮ ನಡೆದಿದ್ದು ನೀರಜ್ ಚೋಪ್ರಾ ಮದುವೆ ಫೋಟೊಗಳು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿವೆ.
ನೀರಜ್ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳ ಜೊತೆ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹಿಮಾನಿ ಎನ್ನುವವರನ್ನು ನೀರಜ್ ಚೋಪ್ರಾ ಮದುವೆಯಾಗಿದ್ದಾರೆ. ಸದ್ಯ ಅವರು ಹಂಚಿಕೊಂಡಿರುವ ಫೋಟೊಗಳು ಭಾರಿ ವೈರಲ್ ಆಗಿವೆ.

ಕೃತಜ್ಞತೆ ತಿಳಿಸಿದ ನೀರಜ್ ಚೋಪ್ರಾ
ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಎರಡು ಪದಕಗಳನ್ನು ಗೆದ್ದಿರುವ ನೀರಜ್ ಚೋಪ್ರಾ, ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ತಮ್ಮ ವಿವಾಹದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.
"ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ಈ ಕ್ಷಣಕ್ಕೆ ನಮ್ಮನ್ನು ಒಟ್ಟಿಗೆ ತಂದ ಪ್ರತಿಯೊಂದು ಆಶೀರ್ವಾದಕ್ಕೂ ಕೃತಜ್ಞರಾಗಿರುತ್ತೇನೆ. ಪ್ರೀತಿಯಲ್ಲಿ ಎಂದೆಂದಿಗೂ ಸಂತೋಷಿಂದ ಬಂಧಿತರಾಗಿ" ಎಂದು ಹೇಳಿದ್ದಾರೆ.
ಆಪ್ತರ ಸಮ್ಮುಖದಲ್ಲಿ ಮದುವೆ
ನೀರಜ್ ಚೋಪ್ರಾ ಮದುವೆ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ಅವರು ಹಿಮಾನಿಯನ್ನು ಕೈಹಿಡಿದಿದ್ದಾರೆ.
ನೀರಜ್ ಚೋಪ್ರಾ ಅವರಿಗೆ ಜಾವೆಲಿನ್ ತಂಡದ ಸದಸ್ಯರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ ಸಲ್ಲಿಸಿದ್ದು ವೈವಾಹಿಕ ಜೀವನಕ್ಕಾಗಿ ಶುಭ ಹಾರೈಸಿದ್ದಾರೆ. ಕ್ರೀಡಾ ಪ್ರಸಾರಕ ಜತಿನ್ ಸಪ್ರು ಮತ್ತು ಬಾಲಿವುಡ್ ನಟ ಗಜರಾಜ್ ರಾವ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ವಿಶ್ರಾಂತಿಯಲ್ಲಿರುವ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಹೊಸ ಕ್ರೀಡಾ ವರ್ಷದ ಋತುವಿಗೆ ತಯಾರಿ ನಡೆಸಲು ವಿಶ್ರಾಂತಿ ಪಡೆಯುತ್ತಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಎರಡನೇ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ 87.58 ಮೀಟರ್ ಎಸೆಯುವ ಮೂಲಕ ಮೊದಲು ಚಿನ್ನದ ಪದಕ ಗೆದ್ದಿದ್ದರು. 2022 ರಲ್ಲಿ, ಅವರು ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಜಾವೆಲಿನ್ ಎಸೆತಗಾರ ಎನಿಸಿಕೊಂಡರು.












Click it and Unblock the Notifications