Get Updates
Get notified of breaking news, exclusive insights, and must-see stories!

National Sports Day 2022: 26 ಶಾಲೆಗಳಲ್ಲಿ ಮೀಟ್ ದಿ ಚಾಂಪಿಯನ್- ಭಾರತದ ಸರ್ವಶ್ರೇಷ್ಠ ಕ್ರೀಡಾಪಟುಗಳಿವರು

ಭಾರತದಲ್ಲಿ ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತಿದೆ. ಪ್ರತೀ ವರ್ಷ ಆಗಸ್ಟ್ 29ರಂದು ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನದಂದು ಯುವಜನರಲ್ಲಿ ಕ್ರೀಡಾ ಮನೋಭಾವ, ದೈಹಿಕ ಕ್ಷಮತೆ ಇತ್ಯಾದಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತದೆ.

ಭಾರತ ಕಂಡ ಅತಿಶ್ರೇಷ್ಠ ಕ್ರೀಡಾಪಟುಗಳಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಪ್ರಮುಖರು. ಇವರ ಜನ್ಮದಿನವನ್ನೇ ರಾಷ್ಟ್ರೀಯ ಕ್ರೀಡಾ ದಿನವಾಗಿ ನಿಗದಿ ಮಾಡಲಾಗಿದೆ. 2012 ಆಗಸ್ಟ್ 29ರಂದು ಮೊದಲ ಬಾರಿಗೆ ಸ್ಪೋರ್ಟ್ಸ್ ಡೇ ಆಚರಿಸಲಾಯಿತು.

ವ್ಯಕ್ತಿತ್ವದ ವಿಕಸಕ್ಕೆ ಕ್ರೀಡೆ ಬಹಳ ಅಗತ್ಯ. ಇದು ದೈಹಿಕವಾಗಿ ನಮ್ಮನ್ನು ಸುದೃಢವಾಗಿ ಇಡುವುದಲ್ಲದೇ ಮಾನಸಿಕ ಸ್ಥೈರ್ಯವನ್ನೂ ತುಂಬುತ್ತದೆ. ಕ್ರೀಡಾಸ್ಫೂರ್ತಿ ಮನೋಭಾವ, ಸಾಂಘಿಕ ಮನೋಭಾವ ಇತ್ಯಾದಿ ಅನೇಕ ಸಕಾರಾತ್ಮಕ ಗುಣಗಳನ್ನು ಬೆಳೆಸಲು ಕ್ರೀಡೆ ಬಹಳ ಅಗತ್ಯ.

ಅಂತೆಯೇ, ಶಾಲಾ ಮಟ್ಟದಿಂದಲೇ ವಿದ್ಯಾರ್ಥಿ ವಿದ್ಯಾಭ್ಯಾಸದ ಜೊತೆ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಅನುಕೂಲವಾಗುತ್ತದೆ. ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎಂಬಂತೆ ಮಗುವಿನ ಕ್ರೀಡಾ ಸಾಮರ್ಥ್ಯ ಆರಂಭದಲ್ಲೇ ಗೊತ್ತಾದರೆ, ಅದನ್ನೇ ವೃತ್ತಿಯಾಗಿ ಬೆಳೆಸಿಕೊಳ್ಳಲೂ ಸಾಧ್ಯವಾಗುತ್ತದೆ.

ಧ್ಯಾನ್ ಚಂದ್ ಯಾಕೆ ಶ್ರೇಷ್ಠ?

ಧ್ಯಾನ್ ಚಂದ್ ಯಾಕೆ ಶ್ರೇಷ್ಠ?

ರಾಷ್ಟ್ರೀಯ ಕ್ರೀಡಾ ದಿನವಾಗಿ ಜನ್ಮದಿನ ಆಚರಿಸಲಾಗುವ ಮೇಜರ್ ಧ್ಯಾನ್ ಚಂದ್ ಅಸಾಮಾನ್ಯ ಹಾಕಿ ಆಟಗಾರರಾಗಿದ್ದವರು. 1905 ಆಗಸ್ಟ್ 29ರಂದು ಉತ್ತರಪ್ರದೇಶದ ಪ್ರಯಾಗ್‌ರಾಜ್ (ಅಲಹಾಬಾದ್) ನಲ್ಲಿ ಜನಸಿದ ಇವರು ಸ್ವತಂತ್ರಪೂರ್ವ ಕಾಲಘಟ್ಟದಲ್ಲಿ ತಮ್ಮ ಹಾಕಿ ಕೈಚಳಕಗಳ ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿದ್ದರು.

ಭಾರತ 1928, 1932, 1936ರ ಒಲಿಂಪಿಕ್ಸ್‌ಗಳಲ್ಲಿ ಹಾಕಿಯಲ್ಲಿ ಸತತ ಮೂರು ಬಾರಿ ಸ್ವರ್ಣ ಪದಕ ಗೆದ್ದಿತ್ತು. ಅದರ ಹಿಂದಿನ ಮಾಂತ್ರಿಕ ಇದೇ ಮೇಜರ್ ಧ್ಯಾನ್ ಚಂದ್. ಈಗ ಫುಟ್ಬಾಲ್‌ನಲ್ಲಿ ಲಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ, ಡೀಗೋ ಮರಾಡೋನಾ ಮಾಡಿರುವ ಮೋಡಿಯ ರೀತಿಯಲ್ಲಿ ಹಾಕಿಯಲ್ಲಿ ಧ್ಯಾನ್ ಚಂದ್ ಮಾಡಿದ್ದರು.

ಮೀಟ್ ದ ಚಾಂಪಿಯನ್

ಮೀಟ್ ದ ಚಾಂಪಿಯನ್

ಈ ವರ್ಷ ಕೇಂದ್ರ ಸರಕಾರ ರಾಷ್ಟ್ರೀಯ ಕ್ರೀಡಾ ದಿನವನ್ನು ವಿಶೇಷವಾಗಿ ಆಚರಿಸುತ್ತಿದೆ. ದೇಶಾದ್ಯಂತ ಆಯ್ದ 26 ಶಾಲೆಗಳಲ್ಲಿ 'ಮೀಟ್ ದಿ ಚಾಂಪಿಯನ್' (ಚಾಂಪಿಯನ್ ಭೇಟಿ) ಕಾರ್ಯಕ್ರಮವನ್ನು ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಮ್ಮಿಕೊಂಡಿದೆ.

ಮೀಟ್ ದ ಚಾಂಪಿಯನ್ ಕಾರ್ಯಕ್ರಮ ಕಳೆದ ವರ್ಷ ಡಿಸೆಂಬರ್‌ನಲ್ಲೇ ಆರಂಭವಾಗಿತ್ತು. ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಇದರ ಉದ್ಘಾಟನೆ ಮಾಡಿದ್ದರು. ಅದರಲ್ಲಿ ಪ್ರಮುಖ ಕ್ರೀಡಾಪಟುಗಳು ದೇಶದ ವಿವಿಧ ಶಾಲೆಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ ಸ್ಫೂರ್ತಿ ಮತ್ತು ಉತ್ತೇಜನ ತುಂಬವ ಕೆಲಸ ಮಾಡುತ್ತಾರೆ.

ಇಂದು ನ್ಯಾಷನಲ್ ಸ್ಪೋರ್ಟ್ಸ್ ಡೇ ಹಿನ್ನೆಲೆಯಲ್ಲಿ 26 ಶಾಲೆಗಳಿಗೆ ಈ ಯೋಜನೆ ಹಾಕಿಕೊಳ್ಳಲಾಗಿದೆ. ಬಾಕ್ಸಿಂಗ್ ಪಟು ನಿಖತ್ ಝರೀನ್, ಪ್ಯಾರಾಲಿಂಪಿಕ್ಸ್ ಪಟು ಭವಿನಾ ಪಟೇಲ್, ಮನಪ್ರೀತ್ ಸಿಂಗ್ ಮೊದಲಾದ ಪ್ರಮುಖ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಫಿಟ್ ಇಂಡಿಯಾ

ಫಿಟ್ ಇಂಡಿಯಾ

ಇವತ್ತಿನ ರಾಷ್ಟ್ರೀಯ ಕ್ರೀಡಾ ದಿನದಂದು ಫಿಟ್ ಇಂಡಿಯಾ ಅಭಿಯಾನವನ್ನೂ ನಡೆಸಲಾಗುತ್ತಿದೆ. ದೇಶಾದ್ಯಂತ ವಿವಿಧ ವಯೋಮಾನದವರಿಗೆ ಹಾಗೂ ವಿವಿಧ ಸ್ತರಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹಾಗೂ ವೃತ್ತಿಪರರವರೆಗೆ ಹಾಗು ಮನರಂಜನಾತ್ಮಕವಾಗಿಯೂ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ.

ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಈ ಅಭಿಯಾನ ನಡೆಸಲಾಗುತ್ತಿದೆ. ಸೋಮವಾರ ಸಂಜೆ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದೇಶದ ಕೆಲ ಪ್ರಮುಖ ಕ್ರೀಡಾ ತಾರೆಗಳೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಲಿದ್ದಾರೆ.

ಭಾರತದ ಸರ್ವಶ್ರೇಷ್ಠ ಕ್ರೀಡಾಪಟುಗಳು

ಭಾರತದ ಸರ್ವಶ್ರೇಷ್ಠ ಕ್ರೀಡಾಪಟುಗಳು

ಭಾರತದಲ್ಲಿ ಒಂದೊಂದು ಕ್ರೀಡೆಯಲ್ಲೂ ಐಕಾನ್‌ಗಳೆನಿಸಿದವರು, ಮತ್ತು ವಿಶ್ವಮಟ್ಟದಲ್ಲಿ ಪ್ರಾಬಲ್ಯ ತೋರಿದವರು ಇದ್ದಾರೆ. ಕ್ರಿಕೆಟ್‌ನಲ್ಲಿ ಯಾರು ಸರ್ವಶ್ರೇಷ್ಠ ಎಂದರೆ ಸಚಿನ್ ತೆಂಡೂಲ್ಕರ್ ಹೆಸರು ಮೊದಲು ಕಣ್ಮುಂದೆ ಬರುತ್ತದೆ. ಹೀಗೆ ಬೇರೆ ಬೇರೆ ಕ್ರೀಡೆಗಳಲ್ಲಿ ಲೆಜೆಂಡ್ ಎನಿಸಿದ ಕೆಲ ಭಾರತೀಯ ಶ್ರೇಷ್ಠರ ಪಟ್ಟಿ ಇಲ್ಲಿದೆ:

ಹಾಕಿ: ಧ್ಯಾನ್ ಚಂದ್
ಅಥ್ಲೆಟಿಕ್ಸ್: ಮಿಲ್ಖಾ ಸಿಂಗ್, ಪಿಟಿ ಉಷಾ
ಕ್ರಿಕೆಟ್: ಸಚಿನ್ ತೆಂಡೂಲ್ಕರ್, ಮಿಥಾಲಿ ರಾಜ್
ಚೆಸ್; ವಿಶ್ವನಾಥನ್ ಆನಂದ್
ಬಾಕ್ಸಿಂಗ್: ಮೇರಿ ಕೋಂ
ಟೆನಿಸ್: ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್
ಬ್ಯಾಡ್ಮಿಂಟನ್: ಸೈನಾ ನೆಹ್ವಾಲ್
ಶೂಟಿಂಗ್: ಅಭಿನವ್ ಬಿಂದ್ರಾ

ಶೂಟಿಂಗ್, ಕುಸ್ತಿಯಲ್ಲಿ ಹಲವು ಭಾರತೀಯರು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಜಾವೆಲಿನ್ ಪಟು ನೀರಜ್ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಹೊಸ ಸೆನ್ಸೇಶನ್ ಎನಿಸಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ಪಡೆದ ಏಕೈಕ ಭಾರತೀಯ ಅವರಾಗಿದ್ದಾರೆ. ಮುಂದಿನ ದಿನಗಳಲ್ಲಿ ನೀರಜ್ ಚೋಪ್ರಾ ಲೆಜೆಂಡ್ ಎನಿಸಿಕೊಳ್ಳುವುದರಲ್ಲಿ ಅನುಮಾನ ಇಲ್ಲ. ಕ್ರಿಕೆಟ್‌ನಲ್ಲಿ ವಿಶ್ವಶ್ರೇಷ್ಠ ಆಟಗಾರರಲ್ಲಿ ಸಚಿನ್ ಅಲ್ಲದೇ ಇನ್ನೂ ಅನೇಕ ಮಂದಿ ಇದ್ದಾರೆ. ಅದರ ಪಟ್ಟಿ ಮಾಡಲು ಹೋದರೆ ದೊಡ್ಡದಾಗುತ್ತದೆ. ಹೀಗಾಗಿ, ವಿಶೇಷ ಮೈಲಿಗಲ್ಲು ಮುಟ್ಟಿದವರು ಮತ್ತು ಅತ್ಯುನ್ನತ ಸಾಧನೆ ಮಾಡಿದವರನ್ನು ಆಯ್ದು ಈ ಪಟ್ಟಿ ಮಾಡಲಾಗಿದೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+