ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: 17 ಮಂದಿಗೆ ಅರ್ಜುನ ಪ್ರಶಸ್ತಿ, ಒಲಿಯದ 'ಖೇಲ್ ರತ್ನ', ಇಲ್ಲಿದೆ ಪಟ್ಟಿ

National Sports Awards: ಕೇಂದ್ರ ಕ್ರೀಡಾ ಸಚಿವಾಲಯವು ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು ಅಂತಿಮವಾಗಿ ಪ್ರಕಟಿಸಿದೆ. ಈ ಬಾರಿ ಒಟ್ಟು 17 ಪ್ರಮುಖ ಕ್ರೀಡಾಪಟುಗಳಿಗೆ ಪ್ರತಿಷ್ಠಿತ 'ಅರ್ಜುನ ಪ್ರಶಸ್ತಿ' ಒಲಿದಿದೆ. ಆದರೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ 'ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ' ಅವಾರ್ಡ್‌ ಅವನ್ನು ಯಾವುದೇ ಕ್ರೀಡಾಪಟುವಿಗೂ ನೀಡಲಾಗಿಲ್ಲ.

ಖೇಲ್ ರತ್ನ ಜಸ್ಟ್‌ ಮಿಸ್‌..

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿಯು ಆರಂಭದಲ್ಲಿ ಸಲ್ಲಿಕೆ ಮಾಡಿದ್ದ ಶಿಫಾರಸು ಪಟ್ಟಿಯನ್ನು ಸುಮಾರು ಆರು ತಿಂಗಳ ಸುದೀರ್ಘ ಪರಿಶೀಲನೆಯ ನಂತರ ಸಚಿವಾಲಯವು ಅಂತಿಮಗೊಳಿಸಿದೆ. ಆಯ್ಕೆ ಸಮಿತಿಯು ಖೇಲ್ ರತ್ನ ಪ್ರಶಸ್ತಿಗಾಗಿ ಭಾರತೀಯ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಆದರೂ ಅಂತಿಮ ಪಟ್ಟಿಯಿಂದ ಅದನ್ನು ಕೈಬಿಡಲಾಗಿದೆ. 2014ರ ನಂತರ ಖೇಲ್ ರತ್ನ ಪ್ರಶಸ್ತಿಯನ್ನು ಯಾರಿಗೂ ನೀಡದೆ ಖಾಲಿ ಉಳಿಸಿರುವುದು ಇದೇ ಮೊದಲ ಬಾರಿಯಾಗಿದೆ.

National Sports Awards 17 Athletes Win Arjuna Award No Khel Ratna This Year Know Complete details

17 ಮಂದಿಗೆ ಅರ್ಜುನ ಪ್ರಶಸ್ತಿ

ಅರ್ಜುನ ಪ್ರಶಸ್ತಿಗಾಗಿ ಸಮಿತಿಯು 24 ಹೆಸರುಗಳನ್ನು ಕಳುಹಿಸಿಕೊಟ್ಟಿತ್ತು. ಆದರೆ ಪ್ರಶಸ್ತಿಯ ಘನತೆ ಮತ್ತು ಅರ್ಹತೆಯ ಕಟ್ಟುನಿಟ್ಟಿನ ಮಾನದಂಡಗಳನ್ನು ಕಾಯ್ದುಕೊಳ್ಳುವ ಉದ್ದೇಶದಿಂದ 17 ಮಂದಿಗೆ ಸೀಮಿತಗೊಳಿಸಿದೆ. 1991ರಲ್ಲಿ ಪ್ರಶಸ್ತಿ ಆರಂಭದ ಬಳಿಕ ಅತ್ಯಂತ ವಿಳಂಬವಾಗಿ ಪ್ರಕಟಗೊಂಡ ಪಟ್ಟಿ ಇದಾಗಿದೆ. 2023ರಲ್ಲಿ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಈ ಬಾರಿಯ ಪಟ್ಟಿಯಲ್ಲಿ ಯಾವುದೇ ಕ್ರಿಕೆಟಿಗರಿಗೆ ಇದು ಸಿಕ್ಕಿಲ್ಲ.

ಅರ್ಜುನ ಪ್ರಶಸ್ತಿ ವಿಜೇತರು

* ಅಥ್ಲೆಟಿಕ್ಸ್: ತೇಜಸ್ವಿನ್ ಶಂಕರ್, ಪ್ರಿಯಾಂಕಾ ಗೋಸ್ವಾಮಿ, ಮುಹಮ್ಮದ್ ಅಜ್ಮಲ್

* ಬ್ಯಾಡ್ಮಿಂಟನ್: ತ್ರೀಸಾ ಜೋಲಿ, ಗಾಯತ್ರಿ ಗೋಪಿಚಂದ್

* ಚೆಸ್: ವಿದಿತ್ ಗುಜರಾತಿ, ದಿವ್ಯಾ ದೇಶಮುಖ್

* ಹಾಕಿ: ರಾಜ್‌ಕುಮಾರ್ ಪಾಲ್, ಲಾಲ್ರೆಮ್ಸಿಯಾಮಿ

* ಕಬಡ್ಡಿ: ಸುರ್ಜಿತ್, ಪೂಜಾ

* ಶೂಟಿಂಗ್: ಅಖಿಲ್ ಶಿಯೋರಾನ್, ಧನುಷ್ ಶ್ರೀಕಾಂತ್ (ಕಿವುಡರ ವಿಭಾಗ)

* ರುದ್ರಾಂಶ್ ಖಂಡೇಲ್‌ವಾಲ್ (ಪ್ಯಾರಾ ಶೂಟಿಂಗ್), ಏಕ್ತಾ ಭ್ಯಾನ್ (ಪ್ಯಾರಾ ಅಥ್ಲೆಟಿಕ್ಸ್)

* ನರೇಂದರ್ (ಬಾಕ್ಸಿಂಗ್), ಅರವಿಂದ್ ಸಿಂಗ್ (ರೋಯಿಂಗ್)

ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ)

* ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ): ಐ. ಅರುಮೈನಾಯಗಂ (1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಫುಟ್‌ಬಾಲ್ ತಂಡದ ಸದಸ್ಯ).

ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ)

* ಚೋಟೆ ಲಾಲ್ ಯಾದವ್ (ಬಾಕ್ಸಿಂಗ್), ಪರ್ವೀರ್ ಸಿಂಗ್ ಮತ್ತು ನೇಹಾ ಚವಾಣ್.

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ ವಿಭಾಗ)

* ಧರ್ಮೇಂದ್ರ ಯಾದವ್ ಮತ್ತು ವೀರೇಂದ್ರ ಕುಮಾರ್.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಲ್ಲಿ ಖೇಲ್ ರತ್ನ ಪುರಸ್ಕೃತರಿಗೆ 25 ಲಕ್ಷ ರೂಪಾಯಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಿಗೆ 15 ಲಕ್ಷ ರೂಪಾಯಿ ನಗದು ಬಹುಮಾನದೊಂದಿಗೆ ಸ್ಮರಣಿಕೆಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರಂದು ಈ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಲಾಗುತ್ತಿತ್ತು.

ಆದರೆ 2020ರ ಕೋವಿಡ್ ಸಾಂಕ್ರಾಮಿಕದ ನಂತರ ಹವಾಮಾನ ಹಾಗೂ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ವೇಳಾಪಟ್ಟಿಯ ಕಾರಣಗಳಿಂದಾಗಿ ಕಾರ್ಯಕ್ರಮ ನಿರಂತರವಾಗಿ ವಿಳಂಬವಾಗುತ್ತಾ ಬಂದಿದೆ. ಕಳೆದ ವರ್ಷದ ಪ್ರಶಸ್ತಿಗಳನ್ನು ಈ ವರ್ಷದ ಜನವರಿ 17ರಂದು ವಿತರಣೆ ಮಾಡಲಾಗಿತ್ತು. ಒಟ್ಟಿನಲ್ಲಿ ಈ ಬಾರಿ ಯಾರಿಗೂ ಖೇಲ್ ರತ್ನ ಪ್ರಶಸ್ತಿ ದೊರೆತಿಲ್ಲ. ಮತ್ತೊಂದೆಡೆ ಯಾವೊಬ್ಬ ಕ್ರಿಕೆಟಿಗರಿಗೂ ಪ್ರಶಸ್ತಿ ಲಭಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+