Get Updates
Get notified of breaking news, exclusive insights, and must-see stories!

PBKS Vs MI: ಡಿಆರ್‌ಎಸ್ ವಿಚಾರದಲ್ಲಿ ಮೋಸ ಮಾಡಿತಾ ಮುಂಬೈ ಇಂಡಿಯನ್ಸ್? ವಿಡಿಯೋ ವೈರಲ್

ಗುರುವಾರ ಮುಲ್ಲಾನ್‌ಪುರದಲ್ಲಿ ನಡೆದ ಐಪಿಎಲ್ 2024ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ರನ್‌ಗಳ ರೋಚಕ ಗೆಲುವು ಸಾಧಿಸಿತು. ಗೆಲುವಿನ ಸನಿಹ ಬಂದಿದ್ದ ಪಂಜಾಬ್ ಕಿಂಗ್ಸ್ ಮತ್ತೊಮ್ಮೆ ಕೊನೆಯ ಓವರ್ ನಲ್ಲಿ ಪಂದ್ಯವನ್ನು ಕಳೆದುಕೊಂಡಿತು.

ಮುಂಬೈ ಇಂಡಿಯನ್ಸ್ ಪಂದ್ಯವನ್ನು ಗೆದ್ದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವ್ಯಾಪಕವಾಗಿ ವೈರಲ್ ಆಗಿದ್ದು, ಡಿಆರ್‌ಎಸ್ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಮೋಸ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

Mumbai Indians Under Scrutiny for Alleged DRS Manipulation Viral Video Emerges from PBKS Match

ವೀಡಿಯೋದಲ್ಲಿ ಡಗೌಟ್‌ನಲ್ಲಿ ಕೂತಿರುವ ಮುಂಬೈನ ಟಿಮ್ ಡೇವಿಡ್ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸೂಚಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು

ವೈರಲ್ ಆದ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ವಂಚನೆ ಆರೋಪ ಕೇಳಿ ಬರುತ್ತಿದೆ. ವೀಡಿಯೊದಲ್ಲಿ, ಪಂಜಾಬ್ ಕಿಂಗ್ಸ್‌ನ ಸ್ಟ್ಯಾಂಡ್-ಇನ್ ನಾಯಕ ಸ್ಯಾಮ್ ಕರ್ರಾನ್ ಆನ್-ಫೀಲ್ಡ್ ಅಂಪೈರ್‌ಗೆ ದೂರು ನೀಡುವುದನ್ನು ಕಾಣಬಹುದು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, "ಅಂಪೈರ್‌ಗಳು ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತಾರೆ ಎನ್ನುವುದಕ್ಕೆ ಮತ್ತೊಂದು ಘಟನೆ. ಟಿಮ್ ಡೇವಿಡ್ ಡಿಆರ್‌ಎಸ್‌ಗಾಗಿ ಡಗೌಟ್‌ನಿಂದ ಮನವಿ ಮಾಡಿದರು, ಇದನ್ನು ಗಮನಿಸಿದ ಸ್ಯಾಮ್ ಕರನ್ ಆನ್‌ಫೀಲ್ಡ್ ಅಂಪೈರ್ ಬಳಿ ದೂರು ಕೊಟ್ಟರೂ, ಅದನ್ನು ನಿರ್ಲಕ್ಷಿಸಿದ ಅವರು, ಮೂರನೇ ಅಂಪೈರ್ ಗೆ ಮನವಿ ಮಾಡಿದರು. ಇದು ನಾಚಿಕೆಗೇಡಿನ ವಿಚಾರ" ಎಂದು ಹೇಳಿದರು.

ಕರಾನ್ ಅವರ ದೂರಿನ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಡಗೌಟ್‌ನಿಂದ ಸಿಗ್ನಲ್ ನೀಡಿದ ಬಳಿಕ ಆನ್‌ಫೀಲ್ಡ್ ಅಂಪೈರ್ ಮೇಲ್ಮನವಿ ಸಲ್ಲಿಸಿದರು. ಮೈದಾನದ ಅಂಪೈರ್ ವೈಡ್ ಸಿಗ್ನಲ್ ಮಾಡುವಂತೆ ಮಾಡಿತು. ಹೀಗಾಗಿ ಈ ಋತುವಿನ ಲೀಗ್‌ನಲ್ಲಿ ಅಂಪೈರಿಂಗ್‌ನ ಮಾನದಂಡಗಳನ್ನು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಪ್ರಶ್ನೆ ಮಾಡಿದ ಮಾಜಿ ಕ್ರಿಕೆಟಿಗರು

ಕೆಲವು ಮಾಜಿ ಕ್ರಿಕೆಟಿಗರು ಕೂಡ ಮೈದಾನದಲ್ಲಿ ನಡೆಯುತ್ತಿರುವ ಇಂತಹ ಪ್ರಶ್ನಾರ್ಹ ಕ್ರಮಗಳನ್ನು ನೋಡಿ ತಲೆ ಕೆಡಿಸಿಕೊಂಡಿದ್ದಾರೆ.

"ಬ್ಯಾಟರ್ ಆಗಲೇ ಆಫ್ ಸ್ಟಂಪ್‌ನ ಹೊರಗಿದ್ದರು. ಬ್ಯಾಟರ್ ಚಲಿಸಿದಾಗ ಲೈನ್ ಕೂಡ ಚಲಿಸುತ್ತದೆ. ಅದು ತುಂಬಾ ಹತ್ತಿರದ ತೀರ್ಮಾನ" ಎಂದು ನಿರೂಪಕ ಮುರಳಿ ಕಾರ್ತಿಕ್ ಕೂಡ ಅಂಪೈರ್ ನಿತಿನ್ ಮೆನನ್ ಅವರ ನಿರ್ಧಾರವನ್ನು ವ್ಯಾಪಕವಾಗಿ ಪ್ರಶ್ನೆ ಮಾಡಿದರು.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರಿಂಗ್ ಅನ್ನು ಪ್ರಶ್ನಿಸಿದ್ದಾರೆ. "ತಜ್ಞ 3ನೇ ಅಂಪೈರ್‌ಗಳನ್ನು ಹೊಂದಲು ನಾವು ಪರಿಗಣಿಸಿರುವ ಸಮಯ ಇದು, ಹಲವಾರು ಪ್ರಶ್ನಾರ್ಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಕೆಲವು ಅಂಪೈರ್‌ಗಳು ಮೈದಾನದಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತಾರೆ, 3ನೇ ಅಂಪೈರ್‌ಗೆ ಅನುಭವ ಮತ್ತು ನಿರ್ದಿಷ್ಟ ಕೌಶಲ್ಯದ ಅಗತ್ಯವಿರುತ್ತದೆ" ಎಂದು ಟ್ವಿಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+