"ಧೋನಿಗೆ ಕ್ರಿಕೆಟ್ ಮುಗಿದಿದೆ, ಅವರು ಈಗ ನಿವೃತ್ತಿಯಾಗಿ ಕಾಮೆಂಟರಿ ಮಾಡ್ಬೇಕಷ್ಟೇ"
MS Dhoni: ಐಪಿಎಲ್ 2025ನೇ ಆವೃತ್ತಿಯ 17ನೇ ಆವೃತ್ತಿಯ ಪಂದ್ಯದಲ್ಲಿ ಸಿಎಸ್‌ಕೆ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯವಾಗಿ ಸೋಲನುಭವಿಸಿತು. ಇದರ ಬೆನ್ನಲೇ ಬರೀ ಅಭಿಮಾನಿಗಳು ಅಷ್ಟೇ ಅಲ್ಲದೆ, ಹಲವು ಕ್ರಿಕೆಟ್ ದಿಗ್ಗಜರು ಕೂಡ ಎಂಎಸ್ ಧೋನಿ ಬಗ್ಗೆ ಹಲವು ರೀಯಿಯಲ್ಲಿ ಟೀಕೆಗಳನ್ನು ಮಾಡುತ್ತಿದ್ದಾರೆ. ಇದನ್ನೇ ಆಧಾರ ಮಾಡಿಕೊಂಡ ಹೇಡೆಟ್ ಎಂಎಸ್ ಧೋನಿ ನೀವೃತ್ತಿ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದಾರೆ.
ನಿನ್ನೆ ಚೆನ್ನೈನ ಚೆಪಾಕ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಸಿಎಸ್‌ಕೆಗೆ 183 ಬೃಹತ್ ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೀ 158 ರನ್‌ಗಳನ್ನು ಮಾತ್ರ ಕಲೆಹಾಕುವ ಮೂಲಕ ಸೋಲೊಪ್ಪಿಕೊಂಡಿತು. ಈ ಮೂಲಕ ಡೆಲ್ಲಿ 15 ವರ್ಷಗಳ ನಂತರ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದು ಇತಿಹಾಸ ಸೃಷ್ಸಿಸಿದೆ.

ಈ ಪಂದ್ಯದ ಬೆನ್ನಲ್ಲೇ ಅವರ ಅಭಿಮಾನಿಗಳೇ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಪಂದ್ಯ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದಿದ್ದು, ಚೆನ್ನೈ ತಂಡಕ್ಕೆ 184 ರನ್ ಗುರಿ ಇತ್ತು. ಆದರೆ ಗೆಲ್ಲಲು ಸಿಎಸ್‌ಕೆ ವಿಫಲವಾಯಿತು. ಎಂಎಸ್ ಧೋನಿ ಬ್ಯಾಟಿಂಗ್ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಅವರು ನಿಧಾನವಾಗಿ ಆಡಿದರು ಎಂಬ ಟೀಕೆಗಳು ವ್ಯಕ್ತವಾಗಿವೆ. ಈ ನಡುವೆಯೇ ಹೇಡನ್ ಇದನ್ನೇ ಆಧಾರವಾಗಿಟ್ಟುಕೊಂಡು ಧೋನಿ ಈಗ ಆಟ ಬಿಡಬೇಕು ಎಂಬ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ತಂಡ ಸೋತ ಬಳಿಕವೇ ಧೋನಿ ವಿರುದ್ಧ ಇಂತಹ ಮಾತುಗಳು ಕೇಳಿಬರುತ್ತಿವೆ. ಧೋನಿ ಬ್ಯಾಟಿಂಗ್ ಅಷ್ಟು ಸರಿಯಾಗಿ ಆಡಲಿಲ್ಲ. ಅವರು 26 ಎಸೆತಗಳಲ್ಲಿ 30 ರನ್ ಗಳಿಸಿದರು. ಆದರೆ ಒಂದೇ ಸಿಕ್ಸರ್ ಮತ್ತು ಒಂದು ಬೌಂಡರಿ ಮಾತ್ರ ಬಾರಿಸಿದರು ಎಂದು ಅವರ ಅಭಿಮಾನಿಗಳೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ಎಂಎಸ್ ಧೋನಿ ಬ್ಯಾಟಿಂಗ್ ನೋಡಿದ ಮಾಜಿ ಸಹ ಆಟಗಾರ ಮ್ಯಾಥ್ಯೂ ಹೇಡನ್ ಪ್ರತಿಕ್ರಿಯಿಸಿ, "ಧೋನಿಗೆ ಕ್ರಿಕೆಟ್ ಮುಗಿದಿದೆ. ಅವರು ಈಗ ನಿವೃತ್ತಿಯಾಗಿ ಕಾಮೆಂಟರಿ ಮಾಡಬೇಕು" ಎಂಬ ಅಚ್ಚರಿ ಹೇಳಿಕೆಯನ್ನು ನೀಡಿ ಗಮನ ಸೆಳೆದಿದ್ದಾರೆ.
ಧೊನಿ ವಿರುದ್ಧ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್, "ಧೋನಿಗೆ ಮೊಣಕಾಲಿನ ತೊಂದರೆ ಇದೆ. ಅವರು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಆದ್ದರಿಂದ ಅವರನ್ನು ಮೇಲಿನ ಸ್ಥಾನದಲ್ಲಿ ಆಡಿಸಿಲ್ಲ" ಎಂದು ಹೇಳಿದರು. ಮತ್ತೊಂದೆಡೆ ಎಂಎಸ್ ಧೋನಿ ಅವರ ಆಟವನ್ನು ನೋಡಲು ಅವರ ಕುಟುಂಬವೇ ಬಂದಿದ್ದು ನೋಡಿದರೆ ಅವರು ನಿನ್ನೆಯೇ ಅವರು ನಿವೃತ್ತಿ ಘೋಷಣೆ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ಬಗ್ಗೆ ಇನ್ನೂ ಯಾವುದೇ ರೀತಿಯಾದ ಘೋಷಣೆಯನ್ನು ಮಾಡಿಲ್ಲ.
ಈಗಾಗಲೇ ಎಂಎಸ್ ಧೋನಿ ಅವರೇ ತಮ್ಮ ನಿವೃತ್ತಿ ಬಗ್ಗೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾನು ವ್ಹೀಲ್ ಚೇರ್ ಮೇಲೆ ಕುಳಿತರೂ ಕೂಡ ನನ್ನನ್ನು ಆಡಿಸುತ್ತಾರೆ ಎನ್ನುವ ಹೇಳಿಕೆಯನ್ನು ನೀಡಿದ್ದರು. ಈ ನಡುವೆಯೂ ಹಲವರು ಅವರ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದಾರೆ.












Click it and Unblock the Notifications