ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಸಚಿವ ಅಮಿತ್ ಶಾ ಜೊತೆ ಎಂಎಸ್ ಧೋನಿ ಫೋಟೋ ವೈರಲ್

|
Google Oneindia Kannada News

ನವದೆಹಲಿ, ನವೆಂಬರ್‌ 13: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ಭಾರತದ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು. ಇದಕ್ಕೆ ಕೆಲವು ನೆಟ್ಟಿಗರು ಧೋನಿ ರಾಜಕೀಯಕ್ಕೆ ಸೇರುತ್ತಾರಾ ಎಂದು ಆಶ್ಚರ್ಯ ಪಡುತ್ತಿದ್ದಾರೆ.

ವೈರಲ್ ಆದ ಫೋಟೋದಲ್ಲಿ, ಧೋನಿ ಅಮಿತ್ ಶಾಗೆ ಹಸ್ತಲಾಘವ ಮಾಡುವುದನ್ನು ಕಾಣಬಹುದು. ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಈ ಸಂದರ್ಭ ಇಂಡಿಯಾ ಸಿಮೆಂಟ್ಸ್‌ನ 75ನೇ ವಾರ್ಷಿಕೋತ್ಸವವಾಗಿತ್ತು. ಇದು ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್‌ನ ಮಾಲೀಕತ್ವವನ್ನು ಹೊಂದಿರುವ ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಒಡೆತನದ ಕಂಪನಿಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಅಕ್ಕಿ ಹೆಬ್ಬಾಳಿನಲ್ಲಿ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಕ್ರೀಡಾಪಟು ಕೆರೆಗೆ ಬಿದ್ದು ಸಾವುಅಧಿಕಾರಿಗಳ ನಿರ್ಲಕ್ಷ್ಯ: ಅಕ್ಕಿ ಹೆಬ್ಬಾಳಿನಲ್ಲಿ ರಾಷ್ಟ್ರೀಯ ಮಟ್ಟದ ಸೈಕ್ಲಿಂಗ್‌ ಕ್ರೀಡಾಪಟು ಕೆರೆಗೆ ಬಿದ್ದು ಸಾವು

ಇದಕ್ಕೆ ಮುಫದ್ದಲ್‌ ವೊಹ್ರಾ ಎಂಬುವವರು ಗೃಹ ಸಚಿವ ಅಮಿತ್ ಶಾ ಜೊತೆ ಮಹೇಂದ್ರ ಸಿಂಗ್‌ ಧೋನಿ ಇದ್ದಾರೆ ಇದರ ಅರ್ಥವೇನು ಎಂದರೆ ಆರೋಹಿ ಕಪೂರ್ ಎಂಬ ಮತ್ತೊಬ್ಬರು ಭಾರತದ ಗೃಹ ಸಚಿವ ಅಮಿತ್‌ ಶಾ ಜೊತೆ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ಧೋನಿ ಇದ್ದು ಇದೇನು ಧೋನಿ ಬಿಜೆಪಿ ಸೇರುತ್ತಾರಾ ಎಂದು ಕೇಳಿದ್ದಾರೆ.

MS Dhonis photo with Home Minister Amit Shah goes viral

ಜ್ಯೋತ್ಸನಾ ಗಾಡ್ಗೀಳ್ ಎಂಬ ಮತ್ತೊಬ್ಬರು ಗ್ರೇಟ್‌ ಫಿನಿಷಶರ್‌ ಆಫ್‌ ಇಂಡಿಯಾ ಎಂದು ಟ್ವೀಟ್‌ ಮಾಡಿದ್ದಾರೆ. ಸನ್ನಿ ಎಂಬ ಮತ್ತೊಬ್ಬ ವ್ಯಕ್ತಿ ಧೋನಿ ಏನೋ ಮಾಡಿದ್ದಾನೆ ಎಂದರೆ ಸರಿಯದ ನಿರ್ಧಾರ ತೆಗೆದುಕೊಂಡಿರುತ್ತಾರೆ ಎಂದು ಬರೆದು ಟ್ವೀಟ್‌ ಮಾಡಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಡಿಎಂಕೆ ನಾಯಕ ಪಕ್ಕದಲ್ಲೇ ಭಾರತೀಯ ಕ್ರಿಕೆಟ್‌ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕುಳಿತಿದ್ದರು. ಇದರಿಂದ ನೆಟ್ಟಿಗರು ಊಹೆ ಮಾಡಿ ರಾಜಕೀಯಕ್ಕೆ ಬರುತ್ತಾರಾ ಎಂದು ಪ್ರಶ್ನೆಗಳನ್ನು ಎತ್ತಿದ್ದಾರೆ.

English summary
A picture of former Indian cricket team captain and Chennai Super Kings (CSK) captain MS Dhoni with Indian Home Minister Amit Shah has gone viral on social media. Some netizens are wondering if Dhoni will join politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X