ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರುಡಾ ಏರೋಸ್ಪೇಸ್ ಜೊತೆಗೆ ಕ್ರಿಕೆಟರ್ ಎಂಎಸ್ ಧೋನಿ ಸವಾರಿ

|
Google Oneindia Kannada News

ಬೆಂಗಳೂರು, ಜೂನ್ 7: ಟೀಂ ಇಂಡಿಯಾದ ಒಂದು ಕಾಲದ ಯಶಸ್ವಿ ನಾಯಕ, ಐಪಿಎಲ್‌ನ ಚಾಂಪಿಯನ್ ಎಂಎಸ್ ಧೋನಿ ಮೈದಾನದ ಹೊರಗೂ ತಮ್ಮ ಹೂಡಿಕೆ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಗರುಡಾ ಏರೋಸ್ಪೇಸ್ ಸಂಸ್ಥೆಯಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ ಎಂದು ಗರುಡಾ ಸಂಸ್ಥೆ ಸಿಇಒ ಅಗ್ನೀಶ್ವರ್ ಜಯಪ್ರಕಾಶ್ ತಿಳಿಸಿದ್ದಾರೆ.

ಸರಿ ಸುಮಾರು 26 ನಗರಗಳಲ್ಲಿ 300 ಡ್ರೋನ್, 500ಕ್ಕೂ ಅಧಿಕ ಪೈಲಟ್‌ಗಳನ್ನು ಗರುಡಾ ಏರೋಸ್ಪೇಸ್ ಸಂಸ್ಥೆ ಹೊಂದಿದೆ. ಇತ್ತೀಚೆಗೆ ಪ್ರಧಾನಿ ಮೋದಿ, ಈ ಸಂಸ್ಥೆಯ ಡ್ರೋನ್ ನಿರ್ಮಾಣ ಘಟಕವನ್ನು ಉದ್ಘಾಟಿಸಿದರು.

ಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವುಬೆಂಗ್ಳೂರಿನ ಕಂಪನಿ ಸೇರಿದಂತೆ ಧೋನಿ ಹೂಡಿಕೆ ಮಾಡಿರುವ ಟಾಪ್ ಕಂಪನಿಗಳಿವು

ಚೆನ್ನೈ ಮೂಲದ ಈ ಕಂಪನಿಯ ರಾಯಭಾರಿಯಾಗಿರುವ ಜನಪ್ರಿಯ ಕ್ರಿಕೆಟರ್ ಧೋನಿ, ಸಂಸ್ಥೆಯಲ್ಲಿ ಸಣ್ಣಮಟ್ಟದ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಈ ಸಂಸ್ಥೆಯಲ್ಲಿ ಧೋನಿ ಹೂಡಿಕೆ ಮಾಡಿರುವ ಪ್ರಮಾಣದ ಬಗ್ಗೆ ವಿವರ ಸಿಕ್ಕಿಲ್ಲ.

MS Dhoni Invests In Drone Start-up Garuda Aerospace

"ಗರುಡ ಏರೋಸ್ಪೇಸ್‌ನ ಭಾಗವಾಗಲು ನನಗೆ ಸಂತೋಷವಾಗುತ್ತಿದೆ. ಅನನ್ಯ ಡ್ರೋನ್ ಸೌಲಭ್ಯಗಳೊಂದಿಗೆ ಅವರ ಬೆಳವಣಿಗೆಯನ್ನು ವೀಕ್ಷಿಸಲು ಎದುರು ನೋಡುತ್ತಿದ್ದೇನೆ" ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ಹೇಳಿದ್ದಾರೆ.

ಸಿಇಒ ಜಯಪ್ರಕಾಶ್ ತಮ್ಮ ಸಂಸ್ಥೆಯಾದ ಗರುಡಾ ಏರೋಸ್ಪೇಸ್ ಭಾರತೀಯ ಡ್ರೋನ್ ಪರಿಸರ ವ್ಯವಸ್ಥೆಯಲ್ಲಿ ಪ್ರವರ್ತಕವಾಗಿದೆ ಮತ್ತು ಭಾರತದ ಮೊದಲ ಡ್ರೋನ್ ಯುನಿಕಾರ್ನ್ ಸ್ಟಾರ್ಟ್ ಅಪ್ ಆಗುವ ಹಾದಿಯಲ್ಲಿ ದೃಢವಾಗಿ ಸಾಗುತ್ತಿದೆ ಎಂದು ಹೇಳಿದರು.

"ನಾನು ಯಾವಾಗಲೂ ಮಹಿ ಭಾಯಿ (ಎಂಎಸ್ ಧೋನಿ) ಅವರ ಉತ್ಕಟ ಅಭಿಮಾನಿಯಾಗಿದ್ದೇನೆ ಮತ್ತು ಗರುಡ ಏರೋಸ್ಪೇಸ್ ಕುಟುಂಬದ ಭಾಗವಾಗಿ ಅವರು ಸೇರ್ಪಡೆಗೊಳ್ಳುವ ಕನಸು ನನಸಾಗಿದೆ. ಮಹಿ ಭಾಯ್ ಸಮರ್ಪಣೆಯ ಪ್ರತಿರೂಪವಾಗಿದೆ ಮತ್ತು ನಮ್ಮ ಯೋಜನೆ ಜೊತೆಗೆ ಕ್ಯಾಪ್ಟನ್ ಕೂಲ್ ಇರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಇದು ಪ್ರಚಂಡ ಮೌಲ್ಯವನ್ನು ಸೇರಿಸುತ್ತದೆ..," ಎಂದು ಜಯಪ್ರಕಾಶ್ ಹೇಳಿದರು.

MS Dhoni Invests In Drone Start-up Garuda Aerospace

ಧೋನಿಯಿಂದ ಪ್ರಮುಖ ಹೂಡಿಕೆಗಳು:

* ಜಿಮ್, ಜೀವನಶೈಲಿ ಬ್ರ್ಯಾಂಡ್, ಕೃಷಿ, ಆಟೋಮೊಬೈಲ್ ಹೀಗೆ ಹಲವು ವೈವಿಧ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿ ತಕ್ಕಮಟ್ಟಿನ ಸಾಧನೆ ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂಕಷ್ಟದಲ್ಲಿ ತೋಟಗಾರಿಕೆ, ಪಶು ಸಂಗೋಪಣೆ ಎಂದು ತಮ್ಮದಲ್ಲದ ಕ್ಷೇತ್ರಕ್ಕೆ ಧುಮುಕಿ ಯಶಸ್ಸು ಪಡೆದುಕೊಂಡರು.

* ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪ್ರಮುಖ ತಂಡ ಚೆನ್ನೈಯಿನ್ ಎಫ್ ಸಿ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ. ನಟ ಅಭಿಷೇಕ್ ಬಚ್ಚನ್ ಅವರು ಸಹ ಮಾಲೀಕತ್ವ ಹೊಂದಿದ್ದಾರೆ.

* ಮಾಹಿ ರೇಸಿಂಗ್ ಟೀಂ ಇಂಡಿಯಾ ಹೆಸರಿನಲ್ಲಿ ಸೂಪರ್ ಸ್ಫೋರ್ಟ್ ವರ್ಲ್ಡ್ ಚಾಂಪಿಯನ್ ಶಿಪ್ ತಂಡ ಹೊಂದಿದ್ದಾರೆ.

* 2016ರಲ್ಲಿ SEVEN ಹೆಸರಿನಲ್ಲಿ ಲೈಫ್ ಸ್ಟೈಲ್ ಬ್ರ್ಯಾಂಡ್ ಶುರು ಮಾಡಿದರು. ಜವಳಿ ಹಾಗೂ ಫುಟ್ ವೇರ್ ಕ್ಷೇತ್ರದಲ್ಲಿ ಹೊಸ ವಿನ್ಯಾಸವುಳ್ಳ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

* ಸೆವೆನ್ ಬ್ರ್ಯಾಂಡ್ ವಿಸ್ತರಣೆಗೆ ರಿತಿ ಗ್ರೂಪ್ ಸಹಕರಿಸಿದ್ದು, ಕ್ರೀಡಾ ಮಾರ್ಕೆಟಿಂಗ್ ಹಾಗೂ ನಿರ್ವಹಣೆ ಸಂಸ್ಥೆ ರಿತಿ ಸ್ಫೋರ್ಟ್ಸ್ ಜೊತೆ ಧೋನಿ ಪಾಲುದಾರಿಕೆ ಹೊಂದಿದ್ದಾರೆ

* ಬೆಂಗಳೂರು ಮೂಲದ ನವೋದ್ಯಮ(startup) ಸಂಸ್ಥೆ ಖಾತಾ ಬುಕ್‌ನಲ್ಲಿ ಧೋನಿ ಹೂಡಿಕೆ ಮಾಡಿದ್ದಾರೆ. ಆಪ್ಲಿಕೇಷನ್ ರಾಯಭಾರಿಯಾಗಿ ಧೋನಿ ಪ್ರಚಾರ ಮಾಡಿದ್ದಾರೆ, 29 ಮಿಲಿಯನ್ ಯುಎಸ್ ಡಾಲರ್ ಮೌಲ್ಯಕ್ಕೇರಿ ದಿನದಿಂದ ದಿನಕ್ಕೆ ಸಂಸ್ಥೆ ಬೆಳೆಯುತ್ತಿದೆ.

* ಸ್ಫೋಟ್ಸ್ ಫಿಟ್ ವರ್ಲ್ಡ್ ಪ್ರೈ ಲಿಮಿಟೆಡ್ ಸಂಸ್ಥೆಯು ವಾಣಿಜ್ಯ ಫಿಟ್ನೆಸ್ ಮಾರ್ಕೆಟಿಂಗ್‌ನಲ್ಲಿ ಹೆಸರು ಮಾಡಿದೆ.

English summary
Ace cricketer Mahendra Singh Dhoni has picked up stake in drone start-up Garuda Aerospace, the company said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X