KL Rahul: ಸಂಜೀವ್ ಗೊಯೆಂಕಾ ವಿರುದ್ಧ ತಿರುಗಿಬಿದ್ದ ಧೋನಿ ಫ್ಯಾನ್ಸ್; ಹಳೆಯದನ್ನ ಮರೆತಿಲ್ಲ ಅಭಿಮಾನಿಗಳು
ಕೆಎಲ್ ರಾಹುಲ್ ಜೊತೆ ನಡೆದುಕೊಂಡ ರೀತಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲಿಕ ಸಂಜೀವ್ ಗೊಯೆಂಕಾ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಎಂಎಸ್ ಧೋನಿ ಅಭಿಮಾನಿಗಳು ಕೂಡ ಗೊಯೆಂಕಾರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಕೆಎಲ್ ರಾಹುಲ್‌ಗೆ ಅವಮಾನ ಆಗುವಂತೆ ನಡೆದುಕೊಂಡ ಸಂಜೀವ್ ಗೊಯೆಂಕಾ ವಿರುದ್ಧ ಧೋನಿ ಫ್ಯಾನ್ಸ್‌ಗೆ ಯಾಕೆ ಕೋಪ ಅಂತೀರಾ? ಅದಕ್ಕೂ ಒಂದು ಕಾರಣ ಇದೆ, ಲಕ್ನೋ ಸೂಪರ್ ಜೈಂಟ್ಸ್ ಮಾಲಿಕರು, ಎಂಎಸ್ ಧೋನಿಗೂ ಅವಮಾನ ಆಗುವ ರೀತಿ ನಡೆದುಕೊಂಡಿದ್ದರು.

2016 ಮತ್ತು 2017ರ ಐಪಿಎಲ್‌ನಲ್ಲಿ ಚೆನ್ನೈಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು ಬ್ಯಾನ್ ಮಾಡಿದ್ದಾಗ, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳು ಎರಡು ವರ್ಷ ಆಡಿದ್ದವು. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದ ಎಂಎಸ್ ಧೋನಿ, ನಾಯಕತ್ವ ವಹಿಸಿಕೊಂಡಿದ್ದರು.
2016ರಲ್ಲಿ ಪುಣೆ ತಂಡ ಅಂದುಕೊಂಡಂತಹ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ, 2017ರಲ್ಲಿ ಎಂಎಸ್ ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅವರ ಬದಲಾಗಿ ಸ್ಟೀವ್ ಸ್ಮಿತ್‌ರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
Honestly, respect increases towards MS Dhoni for bearing with this classless, crap, self obsessed piece of shit called Sanjeev Goenka.
— Areyyyyy Yaarrrrrr (@A_niche11) May 8, 2024
Mad patience from KL Rahul, I’d have handed over the gloves to him and ask him to play the next game.
pic.twitter.com/WNQiIefPvx
ಧೋನಿಗೆ ಅವಮಾನ ಮಾಡಿದ್ದ ಗೊಯೆಂಕಾ
ಧೋನಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಟ್ವೀಟ್ ಮಾಡಿದ್ದ ಸಂಜೀವ್ ಗೊಯೆಂಕಾ ಸಹೋದರ ಹರ್ಷ್ ಗೊಯೆಂಕಾ, ಧೊನಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದ ಒಳ್ಳೆಯ ಕೆಲಸ ಎಂದಿದ್ದರು. ಇದು ಧೋನಿ ಅಭಿಮಾನಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
2018ರಲ್ಲಿ ಸಿಎಸ್‌ಕೆ ತಂಡದ ಬ್ಯಾನ್ ತೆರವಾದ ಕಾರಣ, ಧೋನಿ ಮತ್ತೆ ತಮ್ಮ ತಂಡಕ್ಕೆ ವಾಪಸಾಗಿ ನಾಯಕತ್ವ ವಹಿಸಿಕೊಂಡರು. ಪುಣೆ ಮತ್ತು ಗುಜರಾತ್ ಲಯನ್ಸ್ ತಂಡವನ್ನು ವಿಸರ್ಜಿಸಲಾಗಿತ್ತು. 2021ರಲ್ಲಿ ಮತ್ತೆ ಎರಡು ತಂಡಗಳನ್ನು ಸೇರ್ಪಡೆ ಮಾಡಿದ್ದು, ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಐಪಿಎಲ್‌ಗೆ ಸೇರ್ಪಡೆಯಾದವು. ಸಂಜೀವ್ ಗೊಯೆಂಕಾ ಲಕ್ನೋ ಸೂಪರ್ ಜೈಂಟ್ಸ್ ಪ್ರಾಂಚೈಸಿಯನ್ನು ಖರೀದಿ ಮಾಡಿದ್ದಾರೆ.
ಈಗ ಕೆಎಲ್ ರಾಹುಲ್ ಜೊತೆ ಅವರು ತೋರಿದ ವರ್ತನೆ ಕ್ರಿಕೆಟ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಧೋನಿ ಅಭಿಮಾನಿಗಳು ಕೂಡ ಹಳೆಯದನ್ನು ನೆನಪಿಸಿಕೊಂಡು, ಕ್ರಿಕೆಟ್ ಗೊತ್ತಿಲ್ಲದವರು ತಂಡದ ಮಾಲಿಕರಾದರೆ ಆಟಗಾರರಿಗೆ ಇದೇ ಗೌರವ ಸಿಗುವುದು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಮಗೆ ಗೌರವ ಕೊಡದ ಎಲ್‌ಎಸ್‌ಜಿ ತಂಡದಿಂದ ಕೆಎಲ್ ರಾಹುಲ್ ಹೊರಬರಬೇಕು ಎಂದು ಧೋನಿ ಅಭಿಮಾನಿಗಳು ಕೂಡ ಒತ್ತಾಯಿಸಿದ್ದಾರೆ.












Click it and Unblock the Notifications