ಕ್ರಿಕೆಟರ್ ಮೇಲೆ ಲೈಂಗಿಕ ದೌರ್ಜನ್ಯ: ಪಾಕ್ ರಾಷ್ಟ್ರೀಯ ಮಟ್ಟದ ಕೋಚ್ ಅಮಾನತು

ಕರಾಚಿ, ಜೂನ್ 19: ಮಹಿಳಾ ಆಟಗಾರ್ತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ರಾಷ್ಟ್ರೀಯ ಮಟ್ಟದ ಕೋಚ್ ಒಬ್ಬರನ್ನು ಅಮಾನತುಗೊಳಿಸಿದೆ.

ಮುಲ್ತಾನ್ ಪ್ರದೇಶದ ನದೀಮ್ ಇಕ್ಬಾಲ್ ಅಮಾನತುಗೊಂಡ ಕೋಚ್. ಖ್ಯಾತ ಬೌಲರ್ ವಕಾರ್ ಯೂನಿಸ್ ಕಾಲದಲ್ಲಿ ಪ್ರಥಮ ದರ್ಜೆ ತಂಡಕ್ಕೆ ನದೀಮ್ ಇಕ್ಬಾಲ್ ಪಾದಾರ್ಪಣೆ ಮಾಡಿದ್ದರು. ನದೀಮ್ ಇಕ್ಬಾಲ್ ಕೂಡ ಉತ್ತಮ ಬೌಲರ್ ಆಗಿದ್ದರು.

ನದೀಮ್ ಮಂಡಳಿಯ ಉದ್ಯೋಗದ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದನ್ನು ಕಂಡುಹಿಡಿಯಲು ನಾವು ಈ ವಿಷಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

Molestation Allegations Against Women Cricketer: PIB Suspeded National Level coach

"ನಿಸ್ಸಂಶಯವಾಗಿ ನಾವು ಪೊಲೀಸರು ಮಾಡಬೇಕಾದ ಕ್ರಿಮಿನಲ್ ತನಿಖೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ, ಆದರೆ ಅವರು ನಮ್ಮೊಂದಿಗೆ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದರೆ ನಮ್ಮ ವಿಚಾರಣೆಯಲ್ಲಿ ತಿಳಿಯುತ್ತದೆ" ಎಂದು ಅಧಿಕಾರಿ ಹೇಳಿದರು.

80 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ 50 ವರ್ಷದ ನದೀಮ್ ಉತ್ತಮ ಫಾರ್ಮ್‌ನಲ್ಲಿದ್ದಾಗ ವಕಾರ್ ಯೂನಿಸ್‌ಗಿಂತ ಉತ್ತಮ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದರು. ಕರಾಚಿಯಲ್ಲಿ ನ್ಯಾಷನಲ್ ಬ್ಯಾಂಕ್ ತಂಡವನ್ನು 20 ರನ್‌ಗಳಿಗೆ ಆಲೌಟ್ ಮಾಡಿದ ಪಂದ್ಯದಲ್ಲಿ ನದೀಮ್ ಏಳು ವಿಕೆಟ್ ಪಡೆದಿದ್ದರು.

ಕೆಲವು ವರ್ಷಗಳ ಹಿಂದೆ ನದೀಮ್ ತರಬೇತುದಾರರಲ್ಲಿ ಒಬ್ಬರಾಗಿದ್ದಾರು. ಈ ವೇಳೆ ಮುಲ್ತಾನ್‌ನಲ್ಲಿ ಪಿಸಿಬಿ ಮಹಿಳಾ ಆಯ್ಕೆ ಪ್ರಕ್ರಿಯೆ ವೇಳೆ ಟ್ರೈಯಲ್ ನೀಡಲು ಹೋಗಿದ್ದೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ.

"ಮಹಿಳಾ ತಂಡಕ್ಕೆ ನನ್ನನ್ನು ಆಯ್ಕೆ ಮಾಡುವ ಮತ್ತು ಮಂಡಳಿಯಲ್ಲಿ ಉದ್ಯೋಗ ಕೊಡಿಸುವ ಭರವಸೆಯೊಂದಿಗೆ ನದೀಮ್ ನನಗೆ ಹತ್ತಿರವಾಗಿದ್ದರು. ಆದರೆ ಕಾಲಾನಂತರದಲ್ಲಿ ಅವನು ನನಗೆ ಲೈಂಗಿಕ ಕಿರುಕುಳ ನೀಡುತ್ತಲೇ ಇದ್ದರು ಮತ್ತು ಅವನ ಸ್ನೇಹಿತರೂ ಕೂಡ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಅವರು ಲೈಂಗಿಕ ಕಿರುಕುಳ ನೀಡುವ ವೇಳೆ ವೀಡಿಯೊ ಚಿತ್ರೀಕರಣ ಮಾಡಿದರು ಮತ್ತು ನಂತರ ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು" ಎಂದು ಸಂತ್ರಸ್ತೆ ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ.

Molestation Allegations Against Women Cricketer: PIB Suspeded National Level coach

2014ರಲ್ಲಿ ಐವರು ಯುವ ಮಹಿಳಾ ಕ್ರಿಕೆಟಿಗರು ಖಾಸಗಿ ಮುಲ್ತಾನ್ ಕ್ರಿಕೆಟ್ ಕ್ಲಬ್‌ನ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಜಿಲ್ಲಾ ಅಸೋಸಿಯೇಷನ್‌ಗೆ ಸಂಯೋಜಿತವಾಗಿರುವ ಪ್ರಸಿದ್ಧ ಕ್ರಿಕೆಟ್ ಕ್ಲಬ್‌ನ ಪದಾಧಿಕಾರಿಗಳು ತಂಡದಲ್ಲಿ ಆಯ್ಕೆ ಮಾಡಲು ಬದಲಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದರು ಎಂದು ಮಹಿಳಾ ಕ್ರಿಕೆಟಿಗರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ವರ್ಷ ಪಾಕಿಸ್ತಾನದ ಟೆಸ್ಟ್ ಲೆಗ್ ಸ್ಪಿನ್ನರ್ ಯಾಸಿರ್ ಶಾ, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಸ್ನೇಹಿತನಿಗೆ ಸಹಾಯ ಮಾಡಿದ ಆರೋಪ ಮತ್ತು ನಂತರ ಆಕೆಗೆ ಬೆದರಿಕೆ ಹಾಕಿದ್ದ ಆರೋಪ ಎದುರಿಸಿದ್ದರು.

ನಂತರ ದೂರುದಾರರು ಯಾಸಿರ್ ವಿರುದ್ಧದ ಆರೋಪಗಳನ್ನು ಕೈಬಿಟ್ಟರು ಆದರೆ ಅವರ ಸ್ನೇಹಿತನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+