Breaking News: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಲ್‌ ರೌಂಡರ್ ಮೊಯಿನ್ ಅಲಿ

ನವದೆಹಲಿ, ಸೆಪ್ಟೆಂಬರ್ 08: ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ ರೌಂಡರ್ ಮೊಯಿನ್ ಅಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಭಾನುವಾರ ನಿವೃತ್ತಿ ಘೋಷಣೆ ಮಾಡಿದರು. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮುಂಬರುವ ಇಂಗ್ಲೆಂಡ್-ಆಸ್ಟೇಲಿಯಾ ನಡುವಿನ ವೈಟ್‌ ಬಾಲ್ ಕ್ರಿಕೆಟ್ ಸರಣಿಗೆ 37 ವರ್ಷದ ಆಲ್‌ ರೌಂಡರ್ ಮೊಯಿನ್ ಅಲಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಈ ಬೆಳವಣಿಗೆಯ ಬಳಿಕ ಭಾನುವಾರ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ. 2014ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮೊಯಿನ್ ಅಲಿ ಪಾದಾರ್ಪಣೆ ಮಾಡಿದ್ದರು.

ಆಲ್‌ ರೌಂಡರ್ ಮೊಯಿನ್ ಅಲಿ ನಿವೃತ್ತಿ ಬಗ್ಗೆ ಡೈಲಿ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ನಾನು ಇಂಗ್ಲೆಂಡ್‌ಗಾಗಿ ಸಾಕಷ್ಟು ಪಂದ್ಯಗಳನ್ನು ಆಡಿದ್ದೇನೆ. ಈಗ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡುವ ಸಮಯ ಬಂದಿದೆ. ಅದನ್ನು ಈಗಾಗಲೇ ನನಗೆ ವಿವರಿಸಲಾಗಿದೆ" ಎಂದು ಹೇಳಿದ್ದಾರೆ.

Moeen Ali Announces Retirement From International Cricket

"ನನಗೆ 37 ವರ್ಷ ವಯಸ್ಸಾಗಿದೆ. ನಾನು ಈ ತಿಂಗಳು ನಡೆಯುವ ಆಸ್ಟೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ. ಸಮಯ ಸರಿಯಾಗಿದೆ ಎಂದು ನಾನು ಭಾವಿಸಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ" ಎಂದು ಮೊಯಿನ್ ಅಲಿ ತಿಳಿಸಿದ್ದಾರೆ.

ಆಲ್‌ ರೌಂಡರ್ ಮೊಯಿನ್ ಅಲಿ 2014ರಲ್ಲಿ ಇಂಗ್ಲೆಂಡ್ ತಂಡ ಕೈಗೊಂಡಿದ್ದ ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2024ರಲ್ಲಿ ಗಯಾನಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದರು.

10 ವರ್ಷಗಳ ವೃತ್ತಿ ಜೀವನದಲ್ಲಿ ಮೊಯಿನ್ ಅಲಿ 138 ಏಕದಿನ, 92 ಟಿ20 ಪಂದ್ಯಗಳನ್ನು ಆಡಿದ್ದಾರೆ. 2014ರಲ್ಲಿ ಶ್ರೀಲಂಕಾ-ಇಂಗ್ಲೆಂಡ್ ನಡುವಿನ ಟೆಸ್ಟ್‌ನಲ್ಲಿ ಆಡುವ ಮೂಲಕ ಟೆಸ್ಟ್‌ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು, ಒಟ್ಟು 68 ಪಂದ್ಯಗಳನ್ನು ಆಡಿದ್ದಾರೆ.

ಮೊಯಿನ್ ಅಲಿ 8 ಶತಕ, 28 ಅರ್ಧ ಶತಕಗಳು ಸೇರಿ 6,678 ರನ್‌ಗಳನ್ನು ಸಿಡಿಸಿದ್ದಾರೆ. ಮೂರು ಮಾದರಿ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ 336 ವಿಕೆಟ್ ಪಡೆದಿದ್ದಾರೆ. 37 ವರ್ಷದ ಮೊಯಿನ್ ಅಲಿ ಫ್ರಾಂಚೈಸ್‌ ಕ್ರಿಕೆಟ್ ಆಡುವುದನ್ನು ಮುಂದುವರೆಸಲಿದ್ದಾರೆ ಎಂಬ ಮಾಹಿತಿ ಇದೆ.

ಇಂಗ್ಲೆಂಡ್ ತಂಡ ಇಂಗ್ಲೆಂಡ್-ಆಸ್ಟೇಲಿಯಾ ನಡುವಿನ ವೈಟ್‌ ಬಾಲ್ ಸರಣಿಗೆ ಡೇವಿಡ್ ಮಲಾನ್, ಜೋ ರೂಟ್, ಮೊಯಿನ್ ಅಲಿ ಸೇರಿದಂತೆ ಕೆಲವರನ್ನು ಕೈ ಬಿಟ್ಟಿದೆ. ಈ ಬೆಳವಣಿಗೆ ಬಳಿಕ ಡೇವಿಡ್ ಮಲಾನ್ ನಿವೃತ್ತಿ ಘೋಷಿಸಿದ್ದರು. ಈಗ ಮೊಯಿನ್ ಅಲಿ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಇಂಗ್ಲೆಂಡ್ ಮುಂಬರುವ ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್​ ಗಮನದಲ್ಲಿರಿಸಿಕೊಂಡಿದೆ. ಆದ್ದರಿಂದ ಹೊಸ ತಂಡವನ್ನು ಕಟ್ಟುವ ಯೋಜನೆ ರೂಪಿಸಿದೆ. ಆದ್ದರಿಂದ ಇಂಗ್ಲೆಂಡ್-ಆಸ್ಟೇಲಿಯಾ ವೈಟ್‌ ಬಾಲ್ ಸರಣಿಯಲ್ಲಿ ಹಿರಿಯ ನಾಯಕರಿಗೆ ಅವಕಾಶವನ್ನು ನೀಡಿಲ್ಲ.

ಇಂಗ್ಲೆಂಡ್ ತಂಡದ ಉಪ ನಾಯಕರಾಗಿಯೂ ಮೊಯಿನ್ ಅಲಿ ನೇಮಕಗೊಂಡಿದ್ದರು. ಐಪಿಎಲ್‌ನಲ್ಲಿ ಅವರು ಚೆನ್ನೈ ತಂಡದಲ್ಲಿ ಆಡುವ ಮೂಲಕ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. 2023ರಲ್ಲಿ ಚೆನ್ನೈ-ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊಯಿನ್ ಅಲಿ 26ಕ್ಕೆ 4 ವಿಕೆಟ್ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+