India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಕ್ರಿಕೆಟ್ ಲೆಜೆಂಡ್ ಮಿಥಾಲಿ ಹೊಗಳಿದ ಪಿಎಂ ಮೋದಿ!

|
Google Oneindia Kannada News

ನವದೆಹಲಿ, ಜೂನ್ 26: ಮಹಿಳಾ ಕ್ರಿಕೆಟ್‌ ಚರಿತ್ರೆಯಲ್ಲಿ ಅತ್ಯಂತ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಭಾರತೀಯ ಲೆಜೆಂಡರಿ ಕ್ರಿಕೆಟರ್ ಮಿಥಾಲಿ ರಾಜ್ ವೃತ್ತಿ ಬದುಕಿಗೆ ಅಂತ್ಯವಾಡಿದ್ದಾರೆ.

ಮಿಥಾಲಿ ರಾಜ್ ಜೂನ್ 8ರಂದು, ತಮ್ಮ 23 ವರ್ಷಗಳ ವೃತ್ತಿಬದುಕಿಗೆ ಅಂತ್ಯವಾಡಿದ್ದಾರೆ. ಭಾರತದಲ್ಲಿ ಕ್ರಿಕೆಟ್‌ ಆಯ್ಕೆ ಮಾಡಿಕೊಳ್ಳಬೇಕೆಂಬ ಕೋಟ್ಯಾಂತರ ಬಾಲಕಿಯರಿಗೆ ಪ್ರೇರಣೆಯಾಗಿರುವ ಮಿಥಾಲಿ ಬಗ್ಗೆ ಪ್ರಧಾನಿ ಮೋದಿ ಈ ಬಾರಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತಾಡಿದ್ದಾರೆ.

ಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್‌ ಕ್ರಿಕೆಟ್ ಪಯಣ, ಸಾಧನೆಭಾರತೀಯ ಕ್ರಿಕೆಟ್ ದಂತಕತೆ ಮಿಥಾಲಿ ರಾಜ್‌ ಕ್ರಿಕೆಟ್ ಪಯಣ, ಸಾಧನೆ

ನರೇಂದ್ರ ಮೋದಿ ಅವರು ಭಾನುವಾರದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾರತದ ದಂತಕಥೆ ಬ್ಯಾಟರ್ ಮಿಥಾಲಿ ರಾಜ್ ಅವರಿಗೆ ಶುಭ ಹಾರೈಸಿದರು ಮತ್ತು ಅವರು ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೊಗಳಿದರು. ಭಾರತೀಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ODI ನಾಯಕಿ ಮಿಥಾಲಿ ರಾಜ್ ಜೂನ್ 8 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಮಿಥಾಲಿ ರಾಜ್ ಬಗ್ಗೆ

ಮಿಥಾಲಿ ರಾಜ್ ಬಗ್ಗೆ

'ಮನ್ ಕಿ ಬಾತ್' ನ ಇತ್ತೀಚಿನ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಸ್ನೇಹಿತರೇ, ಕ್ರೀಡೆಯ ವಿಷಯಕ್ಕೆ ಬಂದಾಗ, ನಾನು ಇಂದು ಭಾರತದ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗರಲ್ಲಿ ಒಬ್ಬರಾದ ಮಿಥಾಲಿ ರಾಜ್ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಈ ತಿಂಗಳಷ್ಟೇ , ಅವರು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ, ಇದು ಅನೇಕ ಕ್ರೀಡಾ ಪ್ರೇಮಿಗಳನ್ನು ಭಾವನಾತ್ಮಕವಾಗಿ ಕಂಪಿಸಿದೆ. ಮಿಥಾಲಿ ಅಸಾಮಾನ್ಯ ಆಟಗಾರ್ತಿ ಮಾತ್ರವಲ್ಲದೆ ಅನೇಕ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಮಿಥಾಲಿ ಅವರ ಉತ್ತಮ ಭವಿಷ್ಯಕ್ಕಾಗಿ ನಾನು ಶುಭ ಹಾರೈಸುತ್ತೇನೆ." ಎಂದರು.

10ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಶುರುಮಾಡಿದ್ದರು

10ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಶುರುಮಾಡಿದ್ದರು

ಡಿಸೆಂಬರ್ 3, 1982ರಲ್ಲಿ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ತಮಿಳುನಾಡು ಮೂಲದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ದೊರೈರಾಜ್ ಭಾರತೀಯ ನೌಕಾಪಡೆಯಲ್ಲಿ ಏರ್‌ಮ್ಯಾನ್ ಆಗಿದ್ದರು. ಹೈದರಾಬಾದ್‌ನಲ್ಲಿ ವಾಸವಿದ್ದ ಮಿಥಾಲಿ, ಕೇವಲ 10ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಡಲು ಶುರುಮಾಡಿದ್ದರು. ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿಯುಳ್ಳವರಾಗಿದ್ದ ಅವರು, ಶಾಲಾ ದಿನಗಳಲ್ಲಿ ತಮ್ಮ ಹಿರಿಯ ಸಹೋದರನ ಜೊತೆಗೆ ಕ್ರಿಕೆಟ್‌ ಕೋಚಿಂಗ್ ಪಡೆಯಲು ಶುರು ಮಾಡಿದ್ದರು.

232 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ

232 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ

ಮಿಥಾಲಿ ಮಹಿಳಾ ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ನಿವೃತ್ತರಾದರು. ಅವರು 232 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, 50.68 ಸರಾಸರಿಯಂತೆ 7805 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ, ಮಿಥಾಲಿ 12 ಪಂದ್ಯಗಳಲ್ಲಿ 43.68 ರ ಅದ್ಭುತ ಸರಾಸರಿಯೊಂದಿಗೆ 699 ರನ್‌ಗಳನ್ನು ಸಿಡಿಸಿದ್ದಾರೆ. ಇದರ ಜೊತೆಗೆ 89 ಟಿ20ಐಗಳಲ್ಲಿ 2,364 ರನ್ ಗಳಿಸಿದ್ದಾರೆ.

2002ರಲ್ಲಿ ಪಾದಾರ್ಪಣೆ ಮಾಡಿದ ಮಿಥಾಲಿ

2002ರಲ್ಲಿ ಪಾದಾರ್ಪಣೆ ಮಾಡಿದ ಮಿಥಾಲಿ

2002 ರಲ್ಲಿ ಪಾದಾರ್ಪಣೆ ಮಾಡಿದ ಮಿಥಾಲಿ, ಭಾರತದ ಶ್ರೇಷ್ಠ ಮಹಿಳಾ ಬ್ಯಾಟರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು 50-ಓವರ್‌ಗಳ ವಿಶ್ವಕಪ್‌ಗೆ ತಂಡದ ನಾಯಕಿಯಾಗಿದ್ದರು.

16 ವಯಸ್ಸಿನಲ್ಲಿ, ರಾಜ್ ತನ್ನ ODI ಚೊಚ್ಚಲ ಪಂದ್ಯದಲ್ಲಿ ಅಜೇಯ 114 ರನ್ ಗಳಿಸಿದರು ಮತ್ತು ಶೀಘ್ರದಲ್ಲೇ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲಕ್ಕೇರಿದ್ದಲ್ಲದೆ, ಅಕ್ಟೋಬರ್ 2019 ರಲ್ಲಿ, 36 ನೇ ವಯಸ್ಸಿನಲ್ಲಿ ರಾಜ್, ODI ಕ್ರಿಕೆಟ್‌ನಲ್ಲಿ ಎರಡು ದಶಕಗಳನ್ನು ಪೂರೈಸಿದ ಮೊದಲ ಮಹಿಳೆಯಾದರು.

ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕ

ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕ

ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮಿಥಾಲಿ ರಾಜ್ ಪ್ರಸ್ತುತ ಏಳನೇ ಸ್ಥಾನದಲ್ಲಿದ್ದಾರೆ. ಭಾರತ ಮಹಿಳಾ ಕ್ರಿಕೆಟ್‌ಗೆ ಸಲ್ಲಿಸಿರುವ ಅನನ್ಯ ಕೊಡುಗೆಗಾಗಿ ಮಿಥಾಲಿ ರಾಜ್‌ಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. 2003ರಲ್ಲಿ ಅರ್ಜುನ ಪ್ರಶಸ್ತಿ, 2015ರಲ್ಲಿ ಭಾರತ ಸರಕಾರದಿಂದ ಪದ್ಮಶ್ರಿ ಪ್ರಶಸ್ತಿ, 2017ರಲ್ಲಿ ಬಿಬಿಸಿ 100 ಮಹಿಳೆಯರ ಸಾಲ್ಲಿ ಸ್ಥಾನ, 2017ರಲ್ಲಿ ವಿಶ್ವದ ಮುಂಚೂಣಿ ಮಹಿಳಾ ಕ್ರಿಕೆಟರ್‌, 2021ರಲ್ಲಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ.

English summary
Prime Minister Narendra Modi on Sunday extended good wishes to legendary Indian batter Mithali Raj and said that she has been an inspiration for many sportspersons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X