ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ನಲ್ಲಿ ಕಿವೀಸ್‌ ವಿರುದ್ಧ ಆಡಿದ್ದ ಕ್ರಿಕೆಟಿಗ, ಆಗಸ್ಟ್‌ನಲ್ಲಿ ಅದೇ ತಂಡದ ಪರ ಕಣಕ್ಕೆ

|
Google Oneindia Kannada News

ಕ್ರೈಸ್ಟ್‌ಚರ್ಚ್‌, ಜೂನ್ 23: ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದ ನೆದರ್ಲೆಂಡ್ಸ್‌ ಆಲ್‌ರೌಂಡರ್‌ ಆಗಸ್ಟ್‌ನಲ್ಲಿ ನೆದರ್ಲೆಂಡ್ಸ್‌ ತಂಡದ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಕಿವೀಸ್‌ ಪರವಾಗಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ ಈತ ಈ ಎರಡು ರಾಷ್ಟ್ರದ ಪ್ರಜೆಯಲ್ಲ.

ಕ್ರಿಕೆಟ್ ಜಗತ್ತಿನಲ್ಲಿ ಎರಡು ರಾಷ್ಟ್ರಗಳ ಪರ ಆಡಿದ ಸಾಕಷ್ಟು ಆಟಗಾರರನ್ನು ನಾವು ನೋಡಿದ್ದೇವೆ. ಆದರೆ ಒಂದೇ ವರ್ಷದಲ್ಲಿ , ಅದರಲ್ಲೂ 4 ತಿಂಗಳ ಅಂತರದಲ್ಲಿ 2 ರಾಷ್ಟ್ರಗಳ ಪರ ಆಡುತ್ತಿರುವ ನಿದರ್ಶನ ಇದೇ ಮೊದಲ ಬಾರಿಗೆ ಕಾಣಸಿಗುತ್ತಿದೆ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಜನಿಸಿದ ಮೈಕಲ್ ರಿಪ್ಪನ್ 2013 ರಿಂದಲೂ ನೆದರ್ಲೆಂಡ್ಸ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. 9 ವರ್ಷಗಳಿಂದ ಡಚ್‌ ತಂಡದ ಪರ 9 ಏಕದಿನ ಪಂದ್ಯ ಮತ್ತು 18 ಟಿ20 ಪಂದ್ಯಗಳನ್ನಾಡಿದ್ದಾರೆ. ಈಗಾಗಲೇ ನೆದರ್ಲೆಂಡ್ಸ್ ಕ್ರಿಕೆಟ್ ಮಂಡಳಿ ಜೊತೆಗಿನ ಒಪ್ಪಂದವನ್ನೂ ಮುಗಿಸಿದ್ದಾರೆ. ಹಾಗಾಗಿ ಇದೇ ವರ್ಷ ಆಗಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡ ನೆದರ್ಲೆಂಡ್ಸ್ ಪ್ರವಾಸ ಕೈಗೊಳ್ಳಲಿದ್ದು, ಪ್ರಸ್ತುತ ಕಿವೀಸ್‌ನಲ್ಲಿ ನೆಲಿಸಿ, ಅಲ್ಲಿ ದೇಶಿ ಕ್ರಿಕೆಟ್‌ ಆಡುತ್ತಿರುವ ರಿಪ್ಪನ್ ಯುರೋಪ್‌ ಪ್ರವಾಸಕ್ಕಾಗಿ ಕಿವೀಸ್ ಮಂಡಳಿ ಘೋಷಿಸಿರುವ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

Michael Rippon,Former Dutch Player Ready to Debut for New Zealand

ಏಪ್ರಿಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದ ರಿಪ್ಪನ್
ನೆದರ್ಲೆಂಡ್ಸ್ ತಂಡ ಮಾರ್ಚ್‌-ಏಪ್ರಿಲ್‌ನಲ್ಲಿ 3 ಪಂದ್ಯಗಳ ಏಕದಿನ ಮತ್ತು ಏಕೈಕ ಟಿ20 ಪಂದ್ಯವನ್ನಾಡಲು ಕಿವೀಸ್‌ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದ ವೇಳೆ ರಿಪ್ಪನ್ ಮೂರು ಪಂದ್ಯಗಳಲ್ಲೂ ಆಡಿದ್ದರು. ಇದೀಗ 4 ತಿಂಗಳ ಬಳಿಕ ತಾವೂ ಆಡಿದ್ದ 9 ವರ್ಷಗಳ ಬಳಿಕ ಮತ್ತೆ ಕಣಕ್ಕಿಳಿಯುತ್ತಿದ್ದಾರೆ.

ಎರಡು ದೇಶಗಳ ಪರ ಆಡಿರುವ ಇತರೆ ಆಟಗಾರರು

ಬಾಯ್ಡ್ ರಂಕಿನ್:ರಂಕಿನ್ ಐರ್ಲೆಂಡ್ ಪರ ಪದಾರ್ಪಣೆ ಮಾಡಿದ್ದರು. ನಂತರ ಟೆಸ್ಟ್‌ ಕ್ರಿಕೆಟ್‌ ಆಡುವುದಕ್ಕಾಗಿ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರು. 2013-14ರ ಆಶಷ್‌ನಲ್ಲಿಯೂ ಯಶಸ್ವಿಯಾಗಿದ್ದರು. ಆದರೆ 37 ವರ್ಷ ವರ್ಷದ ಆಟಗಾರ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. ಆಸಕ್ತಿಕರ ವಿಷಯವೆಂದರೆ ಮತ್ತೆ ವಾಪಸ್‌ ಐರ್ಲೆಂಡ್‌ಗೆ ವಾಪಾಸ್‌ ಆಗಿ 2019ರಲ್ಲಿ ಇಂಗ್ಲೆಂಡ್‌ ವಿರುದ್ಧವೇ ಐರ್ಲೆಂಡ್‌ ಪರ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ವ್ಯಾನ್ ಡರ್ ಮರ್ವೆ
ವಿಶ್ವದ ಹಲವು ಟಿ20 ಲೀಗ್‌ಗಳನ್ನು ಆಡಿರುವ ಸ್ಟಾರ್ ಕ್ರಿಕೆಟರ್ ವ್ಯಾನ್ ಡರ್ ಮರ್ವೆ ಆಲ್‌ರೌಂಡರ್‌ ಜೂನಿಯರ್‌ ಲೆವೆಲ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಿದ್ದರು. ಹರಿಣಗಳ ಪರ 29 ಪಂದ್ಯಗಳನ್ನು ಆಡಿದ್ದರು. ಆದರೆ 2015ರಲ್ಲಿ ಡಚ್‌ ಪಾಸ್‌ಪೋರ್ಟ್‌ ಪಡೆದು ಅಲ್ಲಿಂದ ನೆದರ್ಲೆಂಡ್ಸ್‌ ಪರ ಆಡುತ್ತಿದ್ದಾರೆ. 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು.

ಲೂಕ್ ರಾಂಚಿ
ಲೂಕ್ ರಾಂಚಿ ಎರಡು ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪರ ಆಡಿ ವಿಶ್ವದ ಏಕೈಕ ಆಟಗಾರನಾಗಿದ್ದಾರೆ. 2008ರಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾಪರ್ಣೆ ಮಾಡಿ 4 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದರು. ನಂತರ 2013ರಲ್ಲಿ ನ್ಯೂಜಿಲ್ಯಾಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ತಮ್ಮ ಮಾಜಿ ತಂಡದ ವಿರುದ್ಧ ರೋಂಚಿ 8 ಪಂದ್ಯಗಳನ್ನಾಡಿದ್ದಾರೆ.

ಎಡ್‌ ಜಾಯ್ಸ್‌
ಎಡ್‌ ಜಾಯ್ಸ್ ಕೂಡ ಇಂಗ್ಲೆಂಡ್ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ತಮ್ಮ ಮೊದಲ ಪಂದ್ಯವನ್ನು ಐರ್ಲೆಂಡ್ ವಿರುದ್ಧವೇ ಆಡಿದ್ದ ಅವರು ಭವಿಷ್ಯದಲ್ಲಿ ಐರ್ಲೆಂಡ್‌ ಪರ ಆಡಿ ಆ ದೇಶ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಉಳಿದುಕೊಂಡಿದ್ದಾರೆ.

ಇಯಾನ್ ಮಾರ್ಗನ್‌
ಇಯಾನ್ ಮಾರ್ಗನ್‌ ಇಂಗ್ಲೆಂಡ್‌ ತಂಡದ ಅತ್ಯಂತ ಯಶಸ್ವಿ ಸೀಮಿತ ಓವರ್‌ಗಳ ನಾಯಕನಾಗಿದ್ದಾರೆ. ಕ್ರಿಕೆಟ್‌ ಜನಕರೆಂದು ಗುರುತಿಸಿಕೊಂಡರೂ ಒಂದೂ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2019ರಲ್ಲಿ 7 ದಶಕಗಳ ಆಂಗ್ಲರ ಕನಸನ್ನು ನನಸು ಮಾಡಿದ್ದರು. ವಿಶೇಷವೆಂದರೆ ಅವರು 2006ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಐರ್ಲೆಂಡ್‌ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2009ರ ವರೆಗೂ ಐರ್ಲೆಂಡ್ ತಂಡದ ಪರ 23 ಪಂದ್ಯಗಳನ್ನಾಡಿದ್ದರು. ನಂತರ ಇಂಗ್ಲೆಂಡ್ ತಂಡಕ್ಕೆ ಸೇರಿದ ಅವರು ಟಿ20ಯಲ್ಲಿ 2458 ರನ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 6957 ರನ್‌ಗಳಿಸಿ ಇಂಗ್ಲೀಷ್ ತಂಡದ ಶ್ರೇಷ್ಠ ಸೀಮಿತ ಓವರ್‌ಗಳ ನಾಯಕ ಮತ್ತು ಬ್ಯಾಟರ್‌ ಎನಿಸಿಕೊಂಡಿದ್ದಾರೆ.

English summary
Michael Rippon former Dutch all-rounder selected New Zealand T20 squad for the tour of Europe in July and August. He played for netherlands just 3 months back, now debut for new zealand against his former team.2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X