RCB Vs MI: ಆರ್‌ಸಿಬಿಗೆ ಗುಡ್‌ನ್ಯೂಸ್‌ ರೋಹಿತ್‌ ಶರ್ಮಾ ಔಟ್: ಬ್ಯಾಡ್‌ ನ್ಯೂಸ್‌ ಯಾರ್ಕರ್ ಸ್ಪೆಷಲಿಸ್ಟ್ ಇನ್!

RCB Vs MI: ಐಪಿಎಲ್‌ 2025ರ ಆವೃತ್ತಿಯ 20ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಗೆಲುವು ಅನಿವಾರ್ವಾಗಿದೆ. ಆದ್ದರಿಂದ ಎಂಐ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಹಾಗಾದ್ರೆ ಯಾರೆಲ್ಲಾ ಆಡಲಿದ್ದಾರೆ ಹಾಗೂ ಯಾರು ಹೊರಗುಳಿಯಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಇರುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ನಾಲ್ಕು ಪಾಯಿಂಟ್‌ಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಉದ್ಘಾನಾ ಪಂದ್ಯದಲ್ಲಿ ಕೆಕೆಆರ್‌ ಬಳಿಕ ಸಿಎಸ್‌ಕೆ ವಿರುದ್ಧ ಸತತ ಎರಡು ಗೆಲುವು ಸಾಧಿಸಿದ್ದ ಆರ್‌ಸಿಬಿಯು ಮೂರನೇ ಪಂದ್ಯ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನುಭವಿಸಿತ್ತು. ಆದ್ದರಿಂದ ಇಂದು ವಾಂಖೆಡೆಯಲ್ಲಿ ನಡೆಯಲಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲ್ಲೇಬೇಕೆನ್ನುವ ಹಠದಲ್ಲಿದೆ.

MI Playing XI vs RCB Rohit Sharma out Yorker Specialist likely to play

ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗದಲ್ಲಿ ಎಡವಿದೆ. ಆದ್ದರಿಂದ ಇಂದು ಮುಂಬೈ ವಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಲು ಸಕಲ ಸಿದ್ಧತೆ ನಡೆಸಿದೆ. ಆರಂಭಿಕರಾಗಿ ಕಣಕ್ಕಿಳಿಯಲಿರುವ ವಿರಾಟ್‌ ಕೊಹ್ಲಿ ಹಾಗೂ ಫಿಲಿಪ್‌ ಸಾಲ್ಟ್‌ ಉತ್ತದ ಪ್ರದರ್ಶನ ತೋರುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಮತ್ತೊಂದೆಡೆ ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿರುವ ಮುಂಬೈ ಇಂಡಿಯನ್ಸ್‌ ತಂಡಕ್ಕೂ ಇಂದಿನ ಗೆಲುವು ಅನಿವಾರ್ಯವಾಗಿದೆ. ಆದ್ದರಿಂದ ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌, ಬೌಲಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.

ಕಳೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಇರಲಿಲ್ಲ. ಇನ್ನು ಇಂದು ಆರ್‌ಸಿಬಿ ವಿರುದ್ಧ ಆಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.. ಮತ್ತೊಂದೆಡೆ ಗಾಯದಿಂದ ಬಳಲುತ್ತಿದ್ದ ರೋಹಿತ್‌ ಶರ್ಮಾ ಕೂಡ ಹೊರಗುಳಿದಿದ್ದು, ಇಂದು ಕೂಡ ಆಡುವುದು ಡೌಟ್‌ ಎನ್ನಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ.

ಐಪಿಎಲ್ 2025ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಡಲು ಸಜ್ಜಾಗಿದೆ. ಇಂದಿನ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅವರು ಆಗಮಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಮೂಲಕ ಬುಮ್ರಾ ಆರ್‌ಸಿಬಿ ವಿರುದ್ಧ ಆಡುವುದು ಖಚಿತವಾಗಿದೆ. ಕೋಚ್ ಮಹೇಲ ಜಯವರ್ಧನೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಆಡುವ 11ರ ಬಳಗದಲ್ಲಿ ಅವರ ಸ್ಥಾನವನ್ನು ನಿರ್ಧರಿಸುವ ಮೊದಲು ಅವರ ಬೌಲಿಂಗ್ ಫಿಟ್‌ನೆಸ್ ಅನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಅವರು ತಂಡಕ್ಕೆ ಬಂದರೆ, ದೀಪಕ್ ಚಾಹರ್ ಅವರನ್ನು ಬದಲಾಯಿಸಬಹುದು. ಅಶ್ವನಿ ಕುಮಾರ್ ಇದೀಗ ಫಾರ್ಮ್‌ನಲ್ಲಿದ್ದು, ಇದುವರೆಗೆ 2 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ರೋಹಿತ್ ಶರ್ಮಾ ಆಡುತ್ತಾರಾ?: ರೋಹಿತ್ ಶರ್ಮಾ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ಆರ್‌ಸಿಬಿ ವಿರುದ್ಧದ ಇಂಡಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಮಹೇಲ ಜಯವರ್ಧನೆ ಅವರು, ರೋಹಿತ್ ಅವರ ಫಿಟ್ನೆಸ್ ಅನ್ನು ಪರಿಶೀಲಿಸಬೇಕಿದೆ ಎಂದರು.

ಅಲ್ಲದೆ, ರೋಹಿತ್ ಶರ್ಮಾ ಅವರು ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ ಅಂತಲೂ ತಿಳಿಸಿದ್ದಾರೆ. ರೋಹಿತ್‌ ಶರ್ಮಾ ಅಲಭ್ಯರಾಗುವ ಕಾರಣ ಮುಂಬೈ ಇಂಡಿಯನ್ಸ್‌ ಪರ ಆರಂಭಿಕರಾಗಿ ವಿಲ್ ಜ್ಯಾಕ್ಸ್ ರಯಾನ್ ರಿಕೆಲ್ಟನ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಆರ್‌ಸಿಬಿ ವಿರುದ್ಧ ಎಂಐ 11ರ ಬಳಗ: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಜ್ ಅಂಗದ್ ಬಾವಾ, ಮಿಚೆಲ್ ಸ್ಯಾಂಟ್ನರ್, ಅಶ್ವನಿ ಕುಮಾರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತ್ತೂರು (ಇಂಪ್ಯಾಕ್ಟ್ ಪ್ಲೆಯರ್‌).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+