Manu Bhaker: ಚಡ್ಡಿ ಹಾಕಿ, ಮೈ ತೋರಿಸಿ ರೀಲ್ಸ್ ಮಾಡಲಿಲ್ಲ... ಆದರೆ ದೇಶಕ್ಕಾಗಿ ಚಿಕ್ಕ ವಯಸ್ಸಲ್ಲೇ ಜೀವನವನ್ನೇ ಮುಡಿಪಾಗಿಟ್ಟಳು!
ಮನು ಭಾಕರ್.. ಈ ಹೆಸರು ಕೇಳಿದರೆ ಭಾರತೀಯರಿಗೆ ಹೆಮ್ಮೆ ಮೂಡುತ್ತದೆ. ಯಾಕೆಂದರೆ ಕೇವಲ 22 ವರ್ಷದ ಹುಡುಗಿ ಒಬ್ಬಳು, ಇಡೀ ಭಾರತವೇ ಹೆಮ್ಮೆಪಡುವ ಕೆಲಸ ಮಾಡಿದ್ದಾಳೆ. ಅರ್ಧ ಹರಿದ ಚಡ್ಡಿ ಹಾಕಿ, ರೀಲ್ಸ್ ಮಾಡಿ ಅಡ್ಡದಾರಿಯಲ್ಲಿ ಹಣ ಮಾಡುವ ಈ ಕಾಲದಲ್ಲಿ ಕೂಡ ಇಡೀ ಸಮಾಜಕ್ಕೆ ಮಾದರಿ ಆಗುವ ಕೆಲಸ ಮಾಡಿದ್ದಾರೆ ಮನು ಭಾಕರ್. ಹಾಗಾದರೆ ಭಾರತಕ್ಕಾಗಿ 'ಒಲಿಂಪಿಕ್ಸ್' ಪದಕ ಗೆಲ್ಲಬೇಕು ಎಂಬ ಕನಸನ್ನ ಕಂಡಿದ್ದು ಹೇಗೆ ಮನು ಭಾಕರ್? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಭಾರತೀಯ ಕ್ರೀಡಾಪಟುಗಳು ಇಡೀ ಜಗತ್ತೇ ಮೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಸಿಗುತ್ತಿರುವ ಅಲ್ಪಸ್ವಲ್ಪ ಸೌಲಭ್ಯದಲ್ಲೇ ಅತಿದೊಡ್ಡ ಸಾಧನೆಯನ್ನ ಮಾಡುತ್ತಿದ್ದಾರೆ ಭಾರತದ 'ಒಲಿಂಪಿಕ್ಸ್' ಕ್ರೀಡಾಪಟುಗಳು. ಈ ಪೈಕಿ 'ಒಲಿಂಪಿಕ್ಸ್' ಕ್ರೀಡಾಕೂಟದ ಇತಿಹಾಸದಲ್ಲಿ ಮರೆಯಲು ಆಗದ ರೀತಿ ಸಾಧನೆ ಮಾಡಿದವರು ನಮ್ಮ ಮನು ಭಾಕರ್. ಇಂತಿಪ್ಪ ಮನು ಭಾಕರ್ ಆಧುನಿಕ ಕಾಲದ ಭಾರತಕ್ಕೆ ಮಾದರಿ ಆಗಿದ್ದಾರೆ. ಚಡ್ಡಿ ಹಾಕಿಕೊಂಡು, ಅಶ್ಲೀಲವಾಗಿ ಕುಣಿದು ರೀಲ್ಸ್ ಮಾಡಿ ಕಾಸು ಮಾಡುವ ಕಾಲದಲ್ಲಿ ಕೂಡ, ಇಡೀ ಜಗತ್ತಿಗೆ ಮಾದರಿ ಆಗಿದ್ದಾರೆ 'ಭರತ ಖಂಡ'ದ ಹೆಮ್ಮೆಯ ಪುತ್ರಿ ಮನು ಭಾಕರ್.

14ನೇ ವಯಸ್ಸಿನಲ್ಲೇ ಶೂಟಿಂಗ್ ಶುರು!
ಮನು ಭಾಕರ್ 14ನೇ ವಯಸ್ಸಿನಲ್ಲೇ ಶೂಟಿಂಗ್ ಅಭ್ಯಾಸ ಶುರು ಮಾಡಿದ್ದರು. ಮನು ಭಾಕರ್ ಗುರಿ ಅದೆಷ್ಟು ನಿಖರವಾಗಿ ಇತ್ತು ಎಂದರೆ, 14ನೇ ವಯಸ್ಸಿನಲ್ಲಿ ಶೂಟಿಂಗ್ ಅಭ್ಯಾಸ ಶುರು ಮಾಡಿದ ನಂತರ ಕೆಲ ಸಮಯದಲ್ಲೇ ರಾಷ್ಟ್ರೀಯ ಶೂಟಿಂಗ್ ತಂಡದಲ್ಲಿ ಬೆಸ್ಟ್ ಶೂಟರ್ ಆಗಿ ಹೆಸರು ಗಳಿಸಿದರು ಮನು ಭಾಕರ್. ಆ ನಂತರ ಉನ್ನತ ಶಿಕ್ಷಣ ಪಡೆಯಲು ಮನು ಭಾಕರ್ ವಿದೇಶಕ್ಕೆ ತೆರಳಿದ್ದರು. ಹೀಗಾಗಿ ಕೆಲವು ವರ್ಷಗಳ ಕಾಲ ಶೂಟಿಂಗ್‌ನಿಂದ ದೂರ ಉಳಿದಿದ್ದರು. ಅವರ ಕೋಚ್ ಜಸ್ಪಾಲ್ ರಾಣಾ, ಮನು ಭಾಕರ್ ಅವರಿಗೆ 'ಒಲಿಂಪಿಕ್ಸ್' ಪದಕ ಗೆಲ್ಲುವ ಆಸೆ & ಕನಸನ್ನು ಬಿತ್ತಿದ್ದರು.
2018 ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್
ಮನು ಭಾಕರ್ ಅವರು ತಮ್ಮ ಕೋಚ್ ಜಸ್ಪಾಲ್ ರಾಣಾ ಅವರ ಮನವಿ ಕಾರಣಕ್ಕೆ ಮತ್ತೊಮ್ಮೆ ಕೈಯಲ್ಲಿ ಗನ್ ಹಿಡಿದು, ಶೂಟಿಂಗ್ ಅಭ್ಯಾಸ ಶುರು ಮಾಡಿದರು. 2018 ರಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಮನು ಭಾಕರ್, ಮುಂದೆ ಭಾರತಕ್ಕಾಗಿ 'ಒಲಿಂಪಿಕ್ಸ್' ಪದಕ ಗೆದ್ದು ಕೊಡುವ ಗುರಿ ಇಟ್ಟುಕೊಂಡರು. ಆದರೆ 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅವರಿಗೆ ಬೇಸರದ ಘಟನೆ ಎದುರಾಗಿತ್ತು, ಹೀಗಿದ್ದಾಗ ಶೂಟಿಂಗ್ ಅಖಾಡವನ್ನೇ ಬಿಟ್ಟು ಹೊರ ಹೋಗಲು ಚಿಂತಿಸಿದ್ದರಂತೆ. ಇದೆಲ್ಲವನ್ನೂ ಮೀರಿ ಇದೀಗ ಭಾರತಕ್ಕಾಗಿ ಎರಡು ಪದಕ ಗೆದ್ದು ತಂದಿದ್ದಾರೆ.
ಮನು ಭಾಕರ್ ಹೊಸ ಇತಿಹಾಸ
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲಿನಿಂದ ಕೂಡ ಭಾರತ ತೀರಾ ಹಿಂದೆ ಉಳಿದಿದೆ. ಯಾಕೆ ಅಂದ್ರೆ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ಮೊದಲಿನಿಂದ ಕೂಡ ಇದೆ. ಹೀಗಿದ್ದಾಗಲೇ ಭಾರತದ ಕ್ರೀಡಾಪಟುಗಳು ಎಲ್ಲಾ ಸಮಸ್ಯೆಗಳ ಗಡಿ ಮೀರಿ, ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟು ಪದಕ ಬೇಟೆ ಆಡ್ತಿದ್ದಾರೆ. ಅದ್ರಲ್ಲೂ ಕಳೆದ 20 ವರ್ಷಗಳಲ್ಲಿ ಭಾರತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೊಡ್ಡ ಸಾಧನೆ ಮಾಡುತ್ತಿದೆ. ಈ ಪೈಕಿ 2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶೂಟರ್ ಮನು ಭಾಕರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.












Click it and Unblock the Notifications