Paris Olympics: ಹ್ಯಾಟ್ರಿಕ್ ಪದಕದ ಮೇಲೆ ಮನು ಭಾಕರ ಕಣ್ಣು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರುವ ಶೂಟರ್ ಮನು ಭಾಕರ್ (Manu Bhaker) ಈಗ ಮತ್ತೊಮ್ಮೆ ಎಲ್ಲರ ಚಿತ್ತವನ್ನು ತಮ್ಮತ್ತ ಕದಿಯುವಲ್ಲಿ ಸಫಲರಾಗಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಮನು, ಮತ್ತೊಂದು ಪದಕಕ್ಕೆ ಹತ್ತಿರವಾಗಿದ್ದಾರೆ.
ಈಗಾಗಲೇ ಮನು ಭಾಕರ ಮಹಿಳೆಯ ಟೊ ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದು, ಮಿಶ್ರ ತಂಡ ವಿಭಾಗದಲ್ಲಿ ಸರಬ್‌ಜೋತ್ ಸಿಂಗ್ ಜೊತೆಗೂಡಿ ಮನು ಕಂಚಿನ ನಗೆ ಬೀರಿದ್ದರು. ಈಗ ಒಂದೇ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕದ ಹತ್ತಿರಕ್ಕೆ ಮನು ಭಾಕರ್ ಬಂದು ನಿಂತಿದ್ದಾರೆ. 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ ಪಂದ್ಯ ನಾಳೆ (ಆಗಸ್ಟ್ 3) ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಪರ್ಫೆಕ್ಟ್ ಗುರಿ
ಈ ಸ್ಪರ್ಧೆ ಎರಡು ವಿಭಾಗದಲ್ಲಿ ನಡೆಯುತ್ತದೆ. ಈ ಎರಡೂ ವಿಭಾಗದಲ್ಲೂ ಮನು ಭಾಕರ್ ತಮ್ಮ ಗುರಿಯನ್ನು ತೆಗೆಯಲಿಲ್ಲ. ತಾವು ಮೂರನೇ ಪದಕಕ್ಕೆ ಗುರಿ ಇಟ್ಟಿರುವುದಾಗಿ ಅರ್ಹತೆಯಲ್ಲಿ ಇವರು ಖಚಿತ ಪಡಿಸಿದರು.
ಮನು ಮೊದಲ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿ 97 ಅಂಕ ಕಲೆ ಹಾಕಿದರು. ಅಲ್ಲದೆ ಎರಡನೇ ಹಾಗೂ ಮೂರನೇ ಸುತ್ತಿನಲ್ಲೂ ಅಂಕದ ಬೇಟೆಯಲ್ಲಿ ಸ್ಥಿರತೆ ಕಾಪಾಡಿಕೊಂಡರು. ಇನ್ನು ರ್ಯಾಪಿಡ್ ವಿಭಾಗದಲ್ಲಿ ಮನು ಕ್ರಮವಾಗಿ 100, 98, 98 ಅಂಕಗಳನ್ನು ಕಲೆ ಹಾಕಿ ಅರ್ಹತ ಸುತ್ತಿನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು.
ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನ
ಮನು ಅವರಿಗಿಂತ ಎರಡು ಅಂಕ ಹಂಗೆರಿಯಾದ ಮೇಜರ್ ವೆರೋನಿಕಾ ಕಲೆ ಹಾಕಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಂಗೆರಿಯಾದ ಶೂಟರ್ 592 ಅಂಕಗಳನ್ನು ಕಲೆ ಹಾಕಿ ಫೈನಲ್‌ಗೆ ಕ್ವಾಲಿಫೈ ಆಗಿದ್ದಾರೆ.
ಇಶಾಗೆ ನಿರಾಸೆ
ಇದೇ ವಿಭಾಗದಲ್ಲಿ ಇಶಾ 18ನೇ ಸ್ಥಾನ ಪಡದರು. ಆರಂಭದ ಎರಡು ಶೂಟ್‌ಗಳಲ್ಲಿ ಅಂಕಗಳನ್ನು ಕೈ ಚೆಲ್ಲಿದ್ದ ಇವರು ಮೂರನೇ ಸುತ್ತಿನಲ್ಲಿ ನೂರು ಅಂಕ ಕಲೆ ಹಾಕಿದರೂ ಪೈನಲ್‌ಗೆ ಕ್ವಾಲಿಫೈ ಆಗಲು ಆಗಲಿಲ್ಲ. ಇಶಾ ರ್ಯಾಪಿಡ್ ಸುತ್ತಿನಲ್ಲೂ ವಿಶೇಷ ಸಾಧನೆ ಮಾಡುವಲ್ಲಿ ವಿಫಲವಾಗಿ ಹೊರ ನಡೆದರು.












Click it and Unblock the Notifications