ಮೆಸ್ಸಿಯಿಂದಲೇ ಅರ್ಜೆಂಟೀನಾಗೆ FIFA ವಿಶ್ವಕಪ್ ಸಿಗಲಿದೆ: 7 ವರ್ಷಗಳ ಹಿಂದೆಯೇ ಟ್ವೀಟ್ ಮಾಡಿದ್ದ ವ್ಯಕ್ತಿ
ಬೆಂಗಳೂರು, ಡಿಸೆಂಬರ್ 19: FIFA ವಿಶ್ವಕಪ್ Football ಪಂದ್ಯಾವಳಿಯು ಅತ್ಯಂತ ರೋಚಕವಾಗಿ ಕೊನೆಗೊಂಡಿದೆ. ಫುಟ್‌ಬಾಲ್ ಲೋಕದ ಸೂಪರ್‌ಸ್ಟಾರ್ 'Leo Messi' ಅರ್ಜೆಂಟೇನಾ ತಂಡವನ್ನು ಮುನ್ನಡೆಸಿದರು. ಬಲಿಷ್ಠ ಪ್ರಾನ್ಸ್ ತಂಡವನ್ನು ಬಗ್ಗುಬಡಿದು ಫಿಫಾ ವಿಶ್ವಕಪ್ ಅನ್ನು ತಮ್ಮದಾಗಿಸಿಕೊಂಡರು.
ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಪ್ರಾನ್ಸ್ ತಂಡವನ್ನು ಮಣಿಸಿದ ಅರ್ಜೆಂಟೇನಾ ಗೆಲುವಿನ ನಗೆ ಬೀರಿತು. ಈಗ ಜಗತ್ತಿನಾದ್ಯಂತ ಮೆಸ್ಸಿ ಹಾಗೂ ಅರ್ಜೆಂಟೇನಾ ತಂಡದ್ದೇ ಚರ್ಚೆ ನಡೆಯುತ್ತಿದೆ. ಪ್ರಪಂಚದ ಖ್ಯಾತನಾಮರು ಮೆಸ್ಸಿ ಆಟವನ್ನು ಪ್ರಶಂಸಿದ್ದಾರೆ. ಈ ಮೂಲಕ, ಫುಟ್‌ಬಾಲ್ ಲೋಕದ ದ್ರುವತಾರೆ ಎಂಬುದನ್ನು ಮೆಸ್ಸಿ ಮತ್ತೊಮ್ಮೆ ಖಚಿತಪಡಿಸಿದ್ದಾರೆ.
ಮೆಸ್ಸಿ ಜಗತ್ತಿನ ಅತ್ಯದ್ಬುತ ಫುಟಬಾಲ್ ಆಟಗಾರ ಎಂಬುದನ್ನು ಯಾರೂ ಸಹ ಅಲ್ಲಗಳೆಯುವಂತಿಲ್ಲ. ಆದರೆ, ಇಲ್ಲೊಬ್ಬ ಫುಟ್‌ಬಾಲ್ ಅಭಿಮಾನಿ ಏಳು ವರ್ಷಗಳ ಹಿಂದೆಯೇ ಮೆಸ್ಸಿ ಅರ್ಜೆಂಟೇನಾ ದೇಶಕ್ಕೆ ಫುಟ್‌ಬಾಲ್ ವಿಶ್ವಕಪ್ ಅನ್ನು ತಂದುಕೊಡಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆತ ಮಾಡಿದ ಟ್ವೀಟ್ ಜಗತ್ತಿನಾದ್ಯಂತ ಭಾರೀ ಸುದ್ದು ಮಾಡುತ್ತಿದೆ.

'José Miguel Polanco' ಎಂಬ ಅಪ್ಪಟ ಫುಟ್‌ಬಾಲ್ ಅಭಿಮಾನಿ ಈ ಕುರಿತಾಗಿ ಟ್ವೀಟ್ ಮಾಡಿದ್ದಾನೆ.
'ಡಿಸೆಂಬರ್ 18, 2022. 34 ವರ್ಷದ ಲಿಯೊ ಮೆಸ್ಸಿ ವಿಶ್ವಕಪ್ ಗೆಲ್ಲುತ್ತಾರೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗುತ್ತಾರೆ' ಎಂದು ಬರೆದುಕೊಂಡಿದ್ದಾನೆ. ಆತ ಇದನ್ನು ಟ್ವೀಟ್ ಮಾಡಿದ್ದು 2015, ಮಾರ್ಚ್ 21 ರಂದು.
December 18, 2022. 34 year old Leo Messi will win the World Cup and become the greatest player of all times. Check back with me in 7 years.
— José Miguel Polanco (@josepolanco10) March 20, 2015
ಮುಂದಿನ ಏಳು ವರ್ಷಗಳ ಬಳಿಕ ಈ ಕುರಿತು ನನ್ನ ಜೊತೆ ಪರಿಶೀಲಿಸಿ ಎಂದು ಹೇಳಿದ್ದಾನೆ. ಆತ ಏಳು ವರ್ಷಗಳ ಹಿಂದೆಯೇ ಈ ಬಗ್ಗೆ ಖಚಿತವಾಗಿ ಹೇಳಿದ್ದು ಮಾತ್ರ ಇಂದು ಸತ್ಯವಾಗಿದೆ.

ಇದಕ್ಕೆ ಸಾವಿರಾರು ಪ್ರತಿಕ್ರಿಯಿಸಿದ್ದಾರೆ. ಬಹುತೇಕರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
'ಈತ ತುಂಬಾ ವಿಚಿತ್ರವಾದ ಮನುಷ್ಯ ಅನ್ನಿಸುತ್ತಿದ್ದಾರೆ. ಭೂಮಿಯ ಮೇಲೆ ಈತನಿಗೆ ಹೇಗೆ ಈ ಸ್ಥಾನ ಸಿಕ್ಕಿತು?' ಎಂದು ಟ್ವಿಟಿಗರೊಬ್ಬರು ಪ್ರಶ್ನಿಸಿದ್ದಾರೆ.

'ಮುಂದಿನ ಹತ್ತು ವಾರಗಳ ಲಾಟರಿ ಫಲಿತಾಂಶಗಳನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ. ನಾನು ಹಣ ಪಡೆಯಬೇಕು."

ಮೂಲ ಬಳಕೆದಾರರು ಅಂತಿಮವಾಗಿ ತಮ್ಮದೇ ಭವಿಷ್ಯವಾಣಿಗೆ ಉತ್ತರಿಸಿದರು ಮತ್ತು ಅವರು ವಿಶ್ವಕಪ್ ಫೈನಲ್‌ಗಾಗಿ ಕತಾರ್‌ನಲ್ಲಿದ್ದಾರೆ ಎಂದು ಬಹಿರಂಗಪಡಿಸಿದರು.












Click it and Unblock the Notifications